ಬ್ರಹ್ಮಾಂಡ ತ್ರಿಕಾಲ ಜ್ಞಾನಿ ಆದ್ರೆ ನಾನು ಸಕಾಲ ಜ್ಞಾನಿ
ನಾನು ಇಲ್ಲಿಗೆ ಬರುವ ಮುಂಚೆಯೇ ಹೊರಗಡೆಯಿಂದಲೇ ಎಲ್ಲವನ್ನೂ ತಿಳಿದುಕೊಂಡು ಬಂದಿದ್ದೆ. ಯಾರ್‍ಯಾರು ದುಡ್ಡು ಕೊಟ್ಟು ಬಂದಿದ್ದಾರೆ. ಏನೇನು ಡೀಲ್ ಮಾಡಿಕೊಂಡು ಬಂದಿದ್ದಾರೆ ಎಂಬುದು ನನಗೆ ಗೊತ್ತು ಎಂದು ಹಾಸ್ಯ ಚಟಾಕಿಯನ್ನೂ ಸೀರಿಯಸ್ಸಾಗಿ ಹೇಳಿದರು ಯೋಗೀಶ್.
ಅನುಶ್ರೀ ಹಾಗೂ ಯೋಗೀಶ್ ಕನ್ಫೆಷನ್ ರೂಮಿಗೆ ಹೋಗಿ ಬಂದ ಮೇಲೆ ಎಲ್ಲರಿಗೂ ಇವರಿಬ್ಬರ ಮೇಲೆ ಅನುಮಾನ ಶುರುವಾಗಿದೆ. ಇವರಿಬ್ಬರಿಗೂ ಏನೋ ರಹಸ್ಯ ಟಾಸ್ಕ್ ಕೊಟ್ಟಿದ್ದಾರೆ ಎಂಬ ಗುಮಾನಿ ಎಲ್ಲ ಸದಸ್ಯರನ್ನೂ ಕಾಡುತ್ತಿದೆ.

ಇದೇ ವಿಚಾರಕ್ಕೆ ಅರುಣ್ ಸಾಗರ್ ಅವರು ಅನುಶ್ರೀ ಅವರನ್ನು ಕೆಣಕಿದರು. ಅದೂ ಕುರಿಗಳು ಸಾರ್ ಕುರಿಗಳು ಎಂದು ಹಾಡುತ್ತಾ ಮಾರ್ಮಿಕವಾಗಿ ಅನುಶ್ರೀ ಅವರನ್ನು ಕೆಣಕುತ್ತಿದ್ದರು. ಕಡೆಗೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಅರುಣ್ ದಿಢೀರ್ ಎಂದು ತುಲಾಭಾರ ಸೇವೆಯಿಂದ ಕಳಚಿಕೊಂಡರು. ತಕ್ಕಡಿ ನೆಲ ತಾಗಿತು.
ಇದರಿಂದ ಮನೆಯ ಇತರೆ ಸದಸ್ಯರೂ ಅರುಣ್ ವಿರುದ್ಧ ಎಗರಾಡಿದರು. ನಾವು ಬೆಳಗ್ಗೆಯಿಂದ ಕಷ್ಟಪಟ್ಟು ಮಾಡಿದ್ದನ್ನು ಅರುಣ್ ಅಣ್ಣ ಒಂದೇ ಕ್ಷಣದಲ್ಲಿ ಹಾಳು ಮಾಡಿಬಿಟ್ಟರು ಎಂದು ಅನುಶ್ರೀ ಕಣ್ಣೀರಿಟ್ಟರು. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬಂತಾಯಿತಲ್ಲಾ ತಮ್ಮ ಪರಿಸ್ಥಿತಿ ಎಂದು ಅನುಶ್ರೀ ಪರಿತಪಿಸಿದರು.


Click it and Unblock the Notifications











