ಕಿರುತೆರೆಗೆ ಮತ್ತೆ ಬಂದ ಯೋಗಿ: ಈ ಸಲ ಏನ್ ಮಾಡ್ತಾರೆ ಅನ್ನೋದೇ ಪ್ರಶ್ನೆ?
ಲೂಸ್ ಮಾದ ಯೋಗೇಶ್ ಸಿನಿಮಾಗಳು ಕಮ್ಮಿ ಆಯ್ತು ಎಂಬ ಬೇಸರ ಇದೆ. 'ಲಂಬೋದರ' ಸಿನಿಮಾ ಬಳಿಕ ಯೋಗಿಯ ಯಾವ ಚಿತ್ರಗಳು ಬಿಡುಗಡೆಯಾಗಿಲ್ಲ. ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿರುವ ಯೋಗಿ ಈಗ ಕಿರುತೆರೆಗೆ ರೀ ಎಂಟ್ರಿ ಕೊಟ್ಟಿದ್ದಾರೆ.
Recommended Video
ಹೌದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬರಲಿರುವ ಗಾನಬಜಾನ ಕಾರ್ಯಕ್ರಮದಲ್ಲಿ ಲೂಸ್ ಮಾದ ಯೋಗಿ ಕಾಣಿಸಿಕೊಳ್ಳಲಿದ್ದಾರೆ. ಸರ್ಪ್ರೈಸ್ ಏನಪ್ಪಾ ಅಂದ್ರೆ, ಗಾನಬಜಾನ ಶೋನಲ್ಲಿ ಯೋಗಿ ಜಡ್ಜ್ ಅಥವಾ ಆಂಕರ್ ಅಥವಾ ಸ್ಪರ್ಧಿನಾ ಎನ್ನುವುದೇ ಗೊತ್ತಾಗುತ್ತಿಲ್ಲ.
ವಾಹಿನಿ ಅವರು ಕೂಡ ಈ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಈಗಾಗಲೇ ಗಾನಬಜಾನ ಕಾರ್ಯಕ್ರಮದ ಪ್ರೋಮೋ ಬಿಡುಗಡೆಯಾಗಿದ್ದು, ಇದು ಸಿಂಗಿಂಗ್ ಶೋ ಎನ್ನಲಾಗುತ್ತಿದೆ.
ಸದ್ಯಕ್ಕೆ ಲೂಸ್ ಮಾದ ಯೋಗಿ ಅವರ ಪ್ರೋಮೋ ಮಾತ್ರ ರಿಲೀಸ್ ಆಗಿದೆ. ಇವರ ಜೊತೆ ಯಾರು ಇರ್ತಾರೆ, ಯೋಗಿ ಏನು ಮಾಡ್ತಿದ್ದಾರೆ ಎಂಬುದು ಈಗ ನಿರೀಕ್ಷೆ ಹೆಚ್ಚಿಸಿದೆ. ಸದ್ಯಕ್ಕೆ ಪ್ರಸಾರ ದಿನಾಂಕವೂ ಗೌಪ್ಯವಾಗಿದ್ದು, ಸದ್ಯದಲ್ಲೇ ಎಲ್ಲ ವಿಷಯಗಳು ತಿಳಿಯಲಿದೆ.

ಅಂದ್ಹಾಗೆ, ಲೂಸ್ ಮಾದ ಯೋಗೇಶ್ ಅವರು ಕಿರುತೆರೆಗೆ ಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಬಿಗ್ ಬಾಸ್ ಕನ್ನಡ ಶೋನಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. 2014ರಲ್ಲಿ ತಕಧಿಮಿತ ಡ್ಯಾನ್ಸಿಂಗ್ ಸ್ಟಾರ್ ಜಡ್ಜ್ ಆಗಿದ್ದರು. ಸೂಪರ್ ಗುರು ಎಂಬ ಶೋನಲ್ಲೂ ಜಡ್ಜ್ ಆಗಿದ್ದರು.


Click it and Unblock the Notifications











