ಕಾಣೆಯಾಗಿದ್ದ ಯೋಗೀಶ್ ಮನೆಯಲ್ಲಿ ಮತ್ತೆ ಪ್ರತ್ಯಕ್ಷ
ತಾಳಿಕಟ್ಟಿದ ಮೇಲೆ ರಾತ್ರೋರಾತ್ರಿ ನಾಪತ್ತೆಯಾಗಿದ್ದ ಮದುವೆ ಗಂಡು ಬಿಗ್ ಬಾಸ್ ಮನೆಯಲ್ಲಿ ಮತ್ತೆ ಪ್ರತ್ಯಕ್ಷವಾಗಿದ್ದರು. ಯೋಗೀಶ್ ಆಗಮನದಿಂದ ಎಲ್ಲರೂ ಖುಷಿಯಾದರು. ರಾತ್ರೋರಾತ್ರಿ ತಾವೇಕೆ ಓಡಿಹೋದಿರಿ ಅಳಿಯಂದಿರೇ ಎಂದು ಯೋಗೀಶ್ ಅವರನು ಸುದೀಪ್ ಕೇಳಿದರು.
ಅಯ್ಯೋ ಕತ್ತಲಾಗಿತ್ತು ಅಲ್ವಾ ಇನ್ನೇನಾದರೂ ಹೆಚ್ಚುಕಡಿಮೆಯಾದರೆ ಏನಪ್ಪಾ ಗತಿ ಎಂದು ಲುಂಗಿ ಸಮೇತ ಓಡಿದೆ ಎಂದರು. ಅದು ಸರಿ ಇಬ್ಬರನ್ನೂ ಮದುವೆಯಾಗ್ತೀನಿ ಎಂದ್ರಲ್ಲಾ ಯಾಕೆ? ಇಬ್ಬರನ್ನೂ ಮದುವೆಯಾದರೆ ಹಾಟ್ ಅಂಡ್ ಸ್ಪೈಸಿಯಾಗಿರುತ್ತದೆ ಎಂದರು. ಲೂಸ್ ಮಾದನ ಉತ್ತರ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು.

ಆದರೆ ನಿಕಿತಾ ನಾಮಿನೇಟ್ ನೀವು ನಾಮಿನೇಟ್ ಆಗ್ತೀರಾ. ಅವರು ಮನೆಯಿಂದ ಹೊರಹೋದರೆ ನೀವು ಔಟ್. ಆದರೆ ಮನೆಯ ಸದಸ್ಯರು ಯಾರು ಯೋಗೀಶ್ ಅವರನ್ನು ನಾಮಿನೇಟ್ ಮಾಡುವಂತಿಲ್ಲ ಎಂದು ಸುದೀಪ್ ವಿವರಿಸಿದರು. ಒಟ್ಟಾರೆಯಾಗಿ ಬಿಗ್ ಬಾಸ್ ಮನೆಗೆ ಹೊಸ ಸದಸ್ಯನ ಆಗಮನವಾಗಿದೆ. ನಿಕಿತಾಗೆ ಒಳ್ಳೆಯ ಗೆಳೆಯ ಸಿಕ್ಕಂತಾಗಿದೆ.
ಮಂಗಳೂರಿನ ಸುಗುಣ ಎಂಬುವವರು ಈ ಸಲದ ಕಾಲರ್ ಆಫ್ ದ ವೀಕ್. ಅವರು ರಿಷಿಕಾ ಸಿಂಗ್ ಜೊತೆ ಮಾತನಾಡಿದರು. ರಿಷಿಕಾ ಅವರೇ ನೀವು ಯಕ್ಷಗಾನ ಪದ್ಯಗಳನ್ನು ಡಬ್ಬಾ ಎಂದದ್ದು ನಮಗೆಲ್ಲಾ ಬೇಸರತರಿಸಿದೆ. ಕಲಾವಿದರ ಕುಟುಂಬದಿಂದ ಬಂದಂತಹ ತಾವು ಈ ರೀತಿ ಮಾತನಾಡಬಹುದೇ? ನೀವು ಎಲ್ಲರ ಕ್ಷಮೆ ಕೇಳಬೇಕು ಎಂದರು?


Click it and Unblock the Notifications











