ಕನ್ನಡದ ಕೋಟ್ಯಧಿಪತಿಯಲ್ಲಿ ಭರ್ಜರಿ ಬೇಟೆ ಮಾಡಿದ ಲಾರಿ ಡ್ರೈವರ್ ಈರಪ್ಪ

ಓದಬೇಕು ಎಂದುಕೊಂಡಿದ್ದ ವಯಸ್ಸಿನಲ್ಲಿ ತಂದೆಯನ್ನ ಕಳೆದುಕೊಂಡರು. ಓದು ನಿಲ್ಲಿಸಿ ಮನೆಯವರಿಗಾಗಿ ಲಾರಿ ಡ್ರೈವರ್ ಆಗಿ ಕೆಲಸ ಆರಂಭಿಸಿದರು. ಸುಮಾರು ಹತ್ತು ವರ್ಷಗಳಿಂದ ಲಾರಿ ಚಾಲಕರಾಗಿ ಈರಪ್ಪ ದುಡಿಯುತ್ತಿದ್ದಾರೆ.

ಶಿಕ್ಷಣ ನಿಲ್ಲಿಸಿದರೂ ಓದುವುದನ್ನ ಬಿಡದ ಈರಪ್ಪ ಪೇಪರ್, ಮ್ಯಾಗಜಿನ್ ಓದಿ ಜ್ಞಾನ ವೃದ್ಧಿಸಿಕೊಂಡಿದ್ದಾರೆ. ಫೇಸ್ ಬುಕ್, ಟ್ವಿಟ್ಟರ್ ಹೀಗೆ ಸೋಶಿಯಲ್ ಮೀಡಿಯಾ ಮೂಲಕ ಸಮಾಜದಲ್ಲಿ ಏನು ನಡೆಯುತ್ತಿದೆ ಎಂಬುದರ ಅರಿವು ಅವರಿಗಿದೆ.

ಕನ್ನಡದ ಕೋಟ್ಯಧಿಪತಿಯಲ್ಲಿ ಭಾಗವಹಿಸಿ ತನ್ನ ಕಷ್ಟಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬ ಆಸೆಯಿಂದ ಹಾಟ್ ಸೀಟ್ ನಲ್ಲಿ ಕುಳಿತುಕೊಂಡ, ಲಾರಿ ಡ್ರೈವರ್ ಈರಪ್ಪ ಒಂದೊಳ್ಳೆ ಮೊತ್ತವನ್ನ ಗೆದ್ದುಕೊಂಡು ಹೋಗಿದ್ದಾರೆ. ಅಷ್ಟಕ್ಕೂ, ಲಾರಿ ಡ್ರೈವರ್ ಈರಪ್ಪ ಗಳಿಸಿದ ಹಣವೆಷ್ಟು? ಮುಂದೆ ಓದಿ....

ಫಾಸ್ಟೆಸ್ಟ್ ಫಿಂಗರ್ ಪ್ರಶ್ನೆ?

ಫಾಸ್ಟೆಸ್ಟ್ ಫಿಂಗರ್ ಪ್ರಶ್ನೆ?

ಈ ಊರುಗಳನ್ನು ಬೆಂಗಳೂರಿನಿಂದ ಅವುಗಳು ಇರುವ ಕನಿಷ್ಠ ದೂರಕ್ಕೆ ಅನುಗುಣವಾಗಿ ಏರಿಕೆ ಕ್ರಮದಲ್ಲಿ ಜೋಡಿಸಿ?
A ಹಾವೇರಿ
B ದಾವಣಗೆರೆ
C ತುಮಕೂರು
D ಚಿತ್ರದುರ್ಗ
ಸರಿಯಾದ ಉತ್ತರ: C ತುಮಕೂರು, D ಚಿತ್ರದುರ್ಗ, B ದಾವಣಗೆರೆ, A ಹಾವೇರಿ

3.20 ಲಕ್ಷ ಗೆದ್ದು ಸೇಫ್ ಆದ ಈರಪ್ಪ

3.20 ಲಕ್ಷ ಗೆದ್ದು ಸೇಫ್ ಆದ ಈರಪ್ಪ

ಮೊದಲ ಐದು ಪ್ರಶ್ನೆಗಳಿಗೆ ಉತ್ತರಿಸಿದರೇ ಹತ್ತು ಸಾವಿರ ರೂಪಾಯಿ ಹಾಗೂ ಹತ್ತು ಪ್ರಶ್ನೆಗಳಿಗೆ ಉತ್ತರಿಸಿದರೇ 3.20 ಲಕ್ಷ ರೂಪಾಯಿ ಸಿಗುತ್ತೆ. ಇದು ಎರಡನೇ ಹಂತದ ಸೇಫ್ ಝೋನ್ ಆಗಿರುತ್ತೆ. ಈರಪ್ಪ ಅವರು ಕೂಡ ಹತ್ತು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ 3.20 ಲಕ್ಷ ತಮ್ಮ ಖಾತೆಯಲ್ಲಿ ಸೇಫ್ ಮಾಡಿಕೊಂಡರು.

6.40 ಲಕ್ಷದ ಪ್ರಶ್ನೆ ಎದುರಿಸಿದ ಈರಪ್ಪ

6.40 ಲಕ್ಷದ ಪ್ರಶ್ನೆ ಎದುರಿಸಿದ ಈರಪ್ಪ

ಹತ್ತು ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ್ದ ಈರಪ್ಪ ಅವರು 6.40 ಲಕ್ಷ ರೂಪಾಯಿಗೆ ಹನ್ನೊಂದನೇ ಪ್ರಶ್ನೆ ಎದುರಿಸಿದರು. ಆದರೆ ಉತ್ತರಕ್ಕಾಗಿ ಬಹಳ ಕಾಲ ಸಮಯ ತೆಗೆದುಕೊಂಡರು.
ಪ್ರಶ್ನೆ: ಇವರಲ್ಲಿ ಯಾರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನ ಹಳೆಯ ವಿದ್ಯಾರ್ಥಿ ಅಲ್ಲ
A ಮನಮೋಹನ್ ಸಿಂಗ್
B ಕೆ ಆರ್ ನಾರಾಯಣ್
C ಬಿ ಆರ್ ಅಂಬೇಡ್ಕರ್
D ವಿಕೆ ಕೃಷ್ಣ ಮೆನನ್

ಆಡಿಯೆನ್ಸ್ ಪೋಲ್ ಮೊರೆ ಹೋದ ಈರಪ್ಪ

ಆಡಿಯೆನ್ಸ್ ಪೋಲ್ ಮೊರೆ ಹೋದ ಈರಪ್ಪ

ಈರಪ್ಪ ಅವರ ಬಳಿ ಮೂರು ಲೈಫ್ ಲೈನ್ ಬಾಕಿ ಇತ್ತು. ಒಂದು ಆಡಿಯೆನ್ಸ್ ಪೋಲ್ ಇನ್ನೊಂದು ಫೋನೋ ಫ್ರೆಂಡ್ ಹಾಗೂ ಡಬಲ್ ಡಿಪ್. ಈರಪ್ಪ ಅವರು ಆಡಿಯೆನ್ಸ್ ಪೋಲ್ ಮೊರೆ ಹೋದರು. ಆಡಿಯೆನ್ಸ್ ಅಭಿಪ್ರಾಯದ ಪ್ರಕಾರ C ಬಿ ಆರ್ ಅಂಬೇಡ್ಕರ್ ಅಂಬೇಡ್ಕರ್ ಅವರಿಗೆ ಹೆಚ್ಚು ಸಿಕ್ತು. ಹಾಗಾಗಿ, ಆಡಿಯೆನ್ಸ್ ಪೋಲ್ ಪ್ರಕಾರ ಆಯ್ಕೆ C ಲಾಕ್ ಮಾಡಿದ್ರು ಈರಪ್ಪ.

ಅಚ್ಚರಿಗೆ ಒಳಗಾದ ಆಡಿಯೆನ್ಸ್

ಅಚ್ಚರಿಗೆ ಒಳಗಾದ ಆಡಿಯೆನ್ಸ್

ಆಡಿಯೆನ್ಸ್ ಪೋಲ್ ಪ್ರಕಾರ ಅಂಬೇಡ್ಕರ್ ಸರಿಯಾದ ಉತ್ತರ ಇರಬಹುದು ಎಂದು ಎಲ್ಲರು ನಿರೀಕ್ಷಿಸಿದ್ದರು. ಆದರೆ, ಅದು ತಪ್ಪಾಗಿತ್ತು. ಅಲ್ಲಿಗೆ 6.40 ಲಕ್ಷ ಈರಪ್ಪ ಅವರ ಕೈತಪ್ಪಿತು. ಬಟ್, ಎರಡನೇ ಸೇಫ್ ಝೋನ್ ಕ್ರಾಸ್ ಮಾಡಿದ್ದರಿಂದ 3.20 ಲಕ್ಷ ಹಣ ಈರಪ್ಪ ಅವರಿಗೆ ಲಭಿಸಿತು.

ಡಬಲ್ ಡಿಪ್ ಬಳಸಬಹುದಿತ್ತು

ಡಬಲ್ ಡಿಪ್ ಬಳಸಬಹುದಿತ್ತು

ಹಾಗ್ನೋಡಿದ್ರೆ ಈರಪ್ಪ ಅವರು ತಮ್ಮ ಬಳಿ ಇದ್ದ ಡಬಲ್ ಡಿಪ್ ಲೈಫ್ ಲೈನ್ ಬಳಸಬಹುದಿತ್ತು. ಯಾಕಂದ್ರೆ, ಡಬಲ್ ಡಿಪ್ ತೆಗೆದುಕೊಂಡಾಗ ಆಟವನ್ನ ಕ್ವಿಟ್ ಮಾಡುವಂತಿಲ್ಲ. ಈ ಹಂತದಲ್ಲಿ ಈರಪ್ಪ ಎರಡನೇ ಸೇಫ್ ಝೋನ್ ತಲುಪಿದ್ದರು. ಒಂದು ವೇಳೆ ಡಬಲ್ ಡಿಪ್ ತೆಗೆದುಕೊಂಡು ತಪ್ಪಾಗಿದ್ದರು 3.20 ಲಕ್ಷ ತನ್ನಲ್ಲೇ ಉಳಿದುಕೊಳ್ಳುತ್ತಿತ್ತು. ಈ ಬಗ್ಗೆ ಚಿಂತಿಸದ ಈರಪ್ಪ ಆಡಿಯೆನ್ಸ್ ಪೋಲ್ ಮೊರೆ ಹೋಗಿ ಕಾಲು ಜಾರಿದರು.

ಲಾರಿ ಡ್ರೈವರ್ ಗೆ ದೊಡ್ಡ ಮೊತ್ತು

ಲಾರಿ ಡ್ರೈವರ್ ಗೆ ದೊಡ್ಡ ಮೊತ್ತು

ಕನ್ನಡದ ಕೋಟ್ಯಧಿಪತಿ ಆಟದಲ್ಲಿ 3.20 ಲಕ್ಷ ಸಣ್ಣ ಮೊತ್ತ ಅಂತ ಕೆಲವರಿಗೆ ಅನಿಸಬಹುದು. ಆದರೆ, ಲಾರಿ ಡ್ರೈವರ್ ವೃತ್ತಿ ಮಾಡುವ ಬಡಕುಟುಂಬದ ವ್ಯಕ್ತಿಗೆ ಇದು ಭರ್ಜರಿ ಮೊತ್ತ. ಸೋ, ಈರಪ್ಪ ಅವರ ಪಾಲಿಗೆ ಈ ಹಣದ ದೊಡ್ಡ ಮಟ್ಟದಲ್ಲಿ ನೆರವಾಗಬಹುದು.

More from Filmibeat

English summary
Lorry Driver Erappa was Participated in Kannadada kotyadhipathi season 4. erappa has won good amount in won second week of kotyadhipathi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X