Just In
Don't Miss!
- News
ಕರ್ನಾಟಕದಲ್ಲಿ 573 ಕೊರೊನಾ ಸೋಂಕಿತರು ಪತ್ತೆ
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಬಿಗ್ ಬಾಸ್' ಮನೆಯಲ್ಲಿ ಯಾರಿಗೆ ಯಾರ ಮೇಲೆ ಲವ್ ಆಗಿದೆ.?

'ಬಿಗ್ ಬಾಸ್' ಕನ್ನಡದ ಪ್ರತಿ ಆವೃತ್ತಿಯಲ್ಲೂ ಒಂದೊಂದು ಲವ್ ಕಹಾನಿ ತೆರೆದುಕೊಳ್ಳುತ್ತೆ. ಮೂರನೇ ಸೀಸನ್ ನಲ್ಲಿ ಅಯ್ಯಪ್ಪ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದರು. ನಾಲ್ಕನೇ ಸೀಸನ್ ನಲ್ಲಿ ಭುವನ್, ಸಂಜನಾ ಮತ್ತು ಪ್ರಥಮ್ ನಡುವಿನ ತ್ರಿಕೋನ ಪ್ರೇಮಕಥೆ ಗಮನ ಸೆಳೆದಿತ್ತು.
ಐದನೇ ಆವೃತ್ತಿಯಲ್ಲೂ ಈ ಲವ್ ಸ್ಟೋರಿ ಮುಂದುವರೆದಿದ್ದು, ಈ ಬಾರಿ ಒಂದಲ್ಲ, ಎರಡಲ್ಲ ಮೂರಕ್ಕಿಂತ ಹೆಚ್ಚು ಲವ್ ಬರ್ಡ್ಸ್ 'ಬಿಗ್' ಮನೆಯಲ್ಲಿ ಮೋಡಿ ಮಾಡುತ್ತಿದೆ. ವಿಶೇಷ ಅಂದ್ರೆ, ಇವರಿಗೆ ಅವರನ್ನ ಕಂಡ್ರೆ ಇಷ್ಟ. ಆದ್ರೆ, ಅವರಿಗೆ ಮತ್ತೊಬ್ಬರನ್ನ ಕಂಡ್ರೆ ಇಷ್ಟ. ಹೀಗಾಗಿ, ಇದು ಮತ್ತಷ್ಟು ರೋಚಕವಾಗಿದೆ.
ಹಾಗಿದ್ರೆ, 'ಬಿಗ್ ಬಾಸ್' ಮನೆಯಲ್ಲಿ ಎಷ್ಟು ಜೋಡಿಗಳಿವೆ. ಯಾರಿಗೆ ಯಾರನ್ನ ಕಂಡ್ರೆ ಇಷ್ಟ ಎಂದು ತಿಳಿಯಲು ಮುಂದೆ ಓದಿ.....

ಅನುಪಮಾ-ಜಗನ್
'ಅಕ್ಕ' ಧಾರಾವಾಹಿ ಖ್ಯಾತಿಯ ಅನುಪಮಾ ಗೌಡ ಹಾಗೂ 'ಗಾಂಧಾರಿ' ಧಾರಾವಾಹಿ ಖ್ಯಾತಿಯ ಜಗನ್ನಾಥ್ ಚಂದ್ರಶೇಖರ್ ಒಂದ್ಕಾಲದಲ್ಲಿ ಪ್ರಣಯ ಪಕ್ಷಿಗಳು ಎನ್ನುವುದು ಬಿಗ್ ಮನೆಯಲ್ಲಿ ಬಹಿರಂಗವಾಗಿದೆ. ಆದ್ರೆ, ಇವರಿಬ್ಬರ ಮಧ್ಯೆ ಬ್ರೇಕ್ ಅಪ್ ಆಗಿದೆ ಎನ್ನುವುದು ಅಷ್ಟೇ ಸತ್ಯ. ಬಿಗ್ ಬಾಸ್ ಮನೆಯಲ್ಲಿ ಸಹ ಸ್ಪರ್ಧಿಗಳಾಗಿರುವ ಇವರ ಪ್ರೀತಿ ಮತ್ತೆ ಒಂದಾಗುತ್ತಾ ಕಾದುನೋಡಬೇಕಿದೆ.
ಜಗನ್ ಜೊತೆ ಪ್ರೀತಿ ಮುರಿದು ಬಿದ್ದಿದ್ದೇಕೆ.? ಅನುಪಮಾ ಗೌಡ ಕಣ್ಣೀರಧಾರೆ.!

ಶ್ರುತಿ ಪ್ರಕಾಶ್ ಕಂಡ್ರೆ ಚಂದನ್ ಶೆಟ್ಟಿಗೆ ಇಷ್ಟ.!
Rap ಸಿಂಗರ್ ಚಂದನ್ ಶೆಟ್ಟಿಗೆ ಹೊರನಾಡ ಕನ್ನಡತಿ ಶ್ರುತಿ ಪ್ರಕಾಶ್ ಅವರಂದ್ರೆ ಇಷ್ಟ. ಇದನ್ನ ಸ್ವತಃ ಚಂದನ್ ಶೆಟ್ಟಿ ಮನೆಯ ಸದಸ್ಯರ ಜೊತೆ ಹೇಳಿಕೊಂಡಿದ್ದಾರೆ. ಅಷ್ಟೇ ಯಾಕೆ ಸ್ವತಃ ಶ್ರುತಿಗೂ ಈ ವಿಷ್ಯ ಗೊತ್ತಿದೆ.
'ಬಿಗ್ ಬಾಸ್' ಬೆಡಗಿ ಶ್ರುತಿ ಪ್ರಕಾಶ್ ಗೆ ಬಾಯ್ ಫ್ರೆಂಡ್ ಇದ್ದಾರಾ.?

ಶ್ರುತಿಗೆ ಜೆಕೆ ಅಂದ್ರೆ ಇಷ್ಟ.!
ಮತ್ತೊಂದೆಡೆ ಶ್ರುತಿ ಪ್ರಕಾಶ್ ಗೆ ನಟ ಕಾರ್ತಿಕ್ ಜಯರಾಂ ಅವರಂದ್ರೆ ಇಷ್ಟ ಎಂಬುದು ಬಿಗ್ ಬಾಸ್ ಮನೆಯಲ್ಲಿದೆ. ಇದನ್ನ ಕೂಡ ಚಂದನ್ ಶೆಟ್ಟಿ ಹೇಳಿದ್ದರು. ''ನನಗೆ ಶ್ರುತಿ ಅಂದ್ರೆ ಇಷ್ಟ. ಆದ್ರೆ, ಶ್ರುತಿಗೆ ಜೆಕೆ ಅಂದ್ರೆ ಇಷ್ಟ'' ಎಂದಿದ್ದರು. ಆದ್ರೆ, ಇದಕ್ಕೆ ಉತ್ತರ ಕೊಟ್ಟಿದ್ದ ಶ್ರುತಿ ''ಇಷ್ಟ ಅಂದ್ರೆ ಬೇರೆ ಪ್ರೀತಿ ಬೇರೆ'' ಹೇಳಿ ಈ ವಿಷ್ಯವನ್ನ ಮುಕ್ತಾಯ ಮಾಡಿದ್ದರು. ಆದ್ರೆ, ಹಾಗೆ ಮುಂದುವರೆಯುತ್ತಿದೆ.
ಶ್ರುತಿ ಪ್ರಕಾಶ್ ಕಂಡ್ರೆ ಚಂದನ್ ಶೆಟ್ಟಿಗೆ ಇಷ್ಟ.! ಆದ್ರೆ, ಶ್ರುತಿಗೆ ಯಾರಂದ್ರೆ ಇಷ್ಟ.?

ಜಗನ್ ಮೇಲೆ ಆಶಿತಾ ಕಣ್ಣು.!
ಇನ್ನು ಜಗನ್ ಮೇಲೆ ನಟಿ ಆಶಿತಾ ಕಣ್ಣು ಹಾಕಿದ್ದಾರೆ ಎಂಬ ಮಾತು ಬಿಗ್ ಬಾಸ್ ವೀಕ್ಷಕರ ವಲಯದಲ್ಲಿ ಕೇಳಿ ಬರುತ್ತಿದೆ. ಯಾಕಂದ್ರೆ, ಜಗನ್ ಪರವಾಗಿ ಸದಾ ಆಶಿತಾ ಮಾತನಾಡುತ್ತಿರುವುದು ಇದಕ್ಕೆ ಕಾರಣವಾಗಿದೆ.

ಯಾವುದು ಪಕ್ಕಾ ಲವ್ ಇದ್ದಂಗಿಲ್ಲ.!
ಇದೆನ್ನಲ್ಲಾ ಗಮನಿಸಿದ್ರೆ, ಬಿಗ್ ಬಾಸ್ ಮನೆಯಲ್ಲಿ ಯಾವುದು ಪಕ್ಕಾ ಲವ್ ಇಲ್ಲ. ಎಲ್ಲ ಒನ್ ಸೈಡ್ ಲವ್ ಗಳೇ. ಆದ್ರೂ ವೀಕ್ಷಕರಿಗೆ ಇವರು ಲವ್ ಕಹಾನಿ ಮೇಲೆ ಒಂದು ಕಣ್ಣು ಇದ್ದೇ ಇದೆ.