'ಕಾಮಿಡಿ ಕಿಲಾಡಿಗಳು-2' ವಿಜೇತರಿಗೆ ಒಲಿದ ಬಹುಮಾನ ಏನು ಗೊತ್ತಾ.?
Recommended Video

ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋಗಳ ಪೈಕಿ 'ಕಾಮಿಡಿ ಕಿಲಾಡಿಗಳು' ಕೂಡ ಒಂದು. 'ಕಾಮಿಡಿ ಕಿಲಾಡಿಗಳು' ಸೂಪರ್ ಸಕ್ಸಸ್ ಆದ ಬಳಿಕ 'ಕಾಮಿಡಿ ಕಿಲಾಡಿಗಳು-2' ಪ್ರಾರಂಭ ಆಯ್ತು.
ಹದಿನೈದು ಸಾವಿರ ಮಂದಿ 'ಕಾಮಿಡಿ ಕಿಲಾಡಿಗಳು-2' ಕಾರ್ಯಕ್ರಮಕ್ಕೆ ಆಡಿಷನ್ ಕೊಟ್ಟಿದ್ದರು. ಈ ಪೈಕಿ ಕೇವಲ ಹತ್ತು ಮಂದಿ ಮಾತ್ರ ಗ್ರ್ಯಾಂಡ್ ಫಿನಾಲೆಗೆ ಟಿಕೆಟ್ ಪಡೆದರು. ಹತ್ತು ಜನರಲ್ಲಿ 'ವಿನ್ನರ್' ಪಟ್ಟ ಸಿಕ್ಕಿರುವುದು ಒಬ್ಬರಿಗೆ ಮಾತ್ರ.
ಹಾಗಾದ್ರೆ, 'ಕಾಮಿಡಿ ಕಿಲಾಡಿಗಳು-2' ಕಾರ್ಯಕ್ರಮದ ವಿನ್ನರ್ ಯಾರು.? ವಿಜೇತರಿಗೆ ಸಿಕ್ಕ ಬಹುಮಾನ ಎಷ್ಟು.? ಸಂಪೂರ್ಣ ಮಾಹಿತಿ ಇಲ್ಲಿದೆ. ಓದಿರಿ...

ಟ್ರೋಫಿ ಎತ್ತಿ ಹಿಡಿದ ಮಡೆನೂರು ಮನು
'ಕಾಮಿಡಿ ಕಿಲಾಡಿಗಳು-2' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಮುಗಿದಿದೆ. ಈ ರಿಯಾಲಿಟಿ ಶೋನಲ್ಲಿ ವಿಜೇತರಾಗಿ ಹೊರಹೊಮ್ಮಿರುವುದು ಮಡೆನೂರು ಪ್ರತಿಭೆ ಮನು.

ಮಡೆನೂರು ಮನುಗೆ ಸಿಕ್ಕ ಬಹುಮಾನ ಏನು.?
'ಕಾಮಿಡಿ ಕಿಲಾಡಿಗಳು-2' ವಿನ್ನರ್ ಆದ ಮಡೆನೂರು ಮನುಗೆ ಜೀ ಕನ್ನಡ ವಾಹಿನಿ ಕಡೆಯಿಂದ ಐದು ಲಕ್ಷ ರೂಪಾಯಿ ಚೆಕ್ ಹಾಗೂ ಟ್ರೋಫಿ ನೀಡಲಾಗಿದೆ. ಜೊತೆಗೆ ವಾಚ್ ವೊಂದನ್ನೂ ಬಹುಮಾನವಾಗಿ ಕೊಡಲಾಗಿದೆ.

ಎರಡನೇ ಸ್ಥಾನ ಯಾರಿಗೆ.?
ರಾಮದುರ್ಗದ ಅಪ್ಪಣ್ಣ ಹಾಗೂ ಮಂಗಳೂರಿನ ಸೂರಜ್ ಜಂಟಿಯಾಗಿ 'ಕಾಮಿಡಿ ಕಿಲಾಡಿಗಳು-2' ಕಾರ್ಯಕ್ರಮದ ಎರಡನೇ ಸ್ಥಾನ ಪಡೆದಿದ್ದಾರೆ.

ಎರಡನೇ ಸ್ಥಾನಕ್ಕೆ ಬಹುಮಾನ ಏನು.?
ರಾಮದುರ್ಗದ ಅಪ್ಪಣ್ಣ ಹಾಗೂ ಮಂಗಳೂರಿನ ಸೂರಜ್ ಗೆ ಜೀ ಕನ್ನಡ ವಾಹಿನಿ ಕಡೆಯಿಂದ ಎರಡು ಲಕ್ಷ ರೂಪಾಯಿ ಬಹುಮಾನ ಹಾಗೂ ಟ್ರೋಫಿ ನೀಡಲಾಗಿದೆ.

ಮೂರನೇ ಸ್ಥಾನ ಸೂರ್ಯಗೆ.!
ನಟಿ ರಕ್ಷಿತಾಗೆ 'ಮಮ್ಮಿ' ಎಂದು ಕರೆಯುತ್ತಿದ್ದ ಕುಂದಾಪುರ ಸೂರ್ಯ 'ಕಾಮಿಡಿ ಕಿಲಾಡಿಗಳು-2' ಕಾರ್ಯಕ್ರಮದ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಸೂರ್ಯಗೆ ಜೀ ಕನ್ನಡ ವಾಹಿನಿ ಕಡೆಯಿಂದ ಒಂದು ಲಕ್ಷ ರೂಪಾಯಿ ಬಹುಮಾನ ಹಾಗೂ ಟ್ರೋಫಿ ನೀಡಲಾಗಿದೆ.

ವಿನ್ನರ್ ಆಯ್ಕೆಗೆ ಮಾನದಂಡ ಏನು.?
''ತೀರ್ಪುಗಾರರ ಅಂಕಗಳು ಜೊತೆಗೆ ವೀಕ್ಷಕರ ಎಸ್.ಎಂ.ಎಸ್ ಆಧಾರದ ಮೇಲೆ ನ್ಯಾಯಸಮ್ಮತವಾದ ತೀರ್ಪು ಪ್ರಕಟ ಮಾಡಲಾಗಿದೆ. ನಮಗೆ ಎಲ್ಲರೂ ಒಂದೇ. ಯಾರ ಮೇಲೂ ಪಾರ್ಷಿಯಾಲಿಟಿ ಇಲ್ಲ'' ಎಂದು ತೀರ್ಪುಗಾರರಲ್ಲಿ ಒಬ್ಬರಾದ ನಟ ಜಗ್ಗೇಶ್ ಸ್ಪಷ್ಟ ಪಡಿಸಿದ್ದಾರೆ.


Click it and Unblock the Notifications











