'ಬಿಗ್ ಬಾಸ್'ನಲ್ಲಿ ಅನಾಹುತ: ಆತ್ಮಹತ್ಯೆಗೆ ಯತ್ನಿಸಿದ ಸ್ಪರ್ಧಿ ಮಧುಮಿತಾ
ಬಿಗ್ ಬಾಸ್ ತಮಿಳು ಇತಿಹಾಸದಲ್ಲಿ ಮತ್ತೊಮ್ಮೆ ವಿಷಾದಕರ ಘಟನೆ ನಡೆದಿದೆ. ಮೊದಲ ಆವೃತ್ತಿಯಲ್ಲಿ ನಟಿ ಓವಿಯಾ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದರು. ಇದೀಗ, ಮತ್ತೊಮ್ಮೆ ಇಂತಹ ದುರ್ಘಟನೆಗೆ ಬಿಗ್ ಬಾಸ್ ಶೋ ಸಾಕ್ಷಿಯಾಗಿದೆ.
ಸಾಮಾನ್ಯವಾಗಿ ಬಿಗ್ ಬಾಸ್ ನಲ್ಲಿ ಗಲಾಟೆ, ನಿಂದನೆ ಕೆಲವೊಮ್ಮೆ ದೈಹಿಕ ಹಲ್ಲೆ ಆಗಿರುವುದನ್ನ ಕೂಡ ನೋಡಿದ್ದೇವೆ. ಈಗ ಬಿಗ್ ಬಾಸ್ ಮನೆಯಿಲ್ಲಿ ಸ್ಪರ್ಧಿಯೊಬ್ಬರು ಆತ್ಮಹತ್ಯೆಗೆ ಯತ್ನ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಹೌದು, ಕಳೆದ ವಾರದ ಮಧುಮಿತಾ ಎಂಬ ಸ್ಪರ್ಧಿ, ಬಿಗ್ ಬಾಸ್ ಮನೆಯಲ್ಲೇ ಆತ್ಮಹತ್ಯೆಕ್ಕೆ ಪ್ರಯತ್ನ ಪಟ್ಟಿದ್ದರಂತೆ.
ಇದನ್ನ ಗಮನಿಸಿದ ಆಯೋಜಕರು ಕೂಡಲೇ ಮನೆಯಿಂದ ಹೊರಗಡೆ ಕರೆದುಕೊಂಡು ಹೋಗಿ, ಚಿಕಿತ್ಸೆ ನೀಡಿದ್ದಾರೆ. ಅಷ್ಟಕ್ಕೂ, ಮಧುಮಿತಾ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದು ಯಾರು?

ಕೈ ಕಟ್ ಮಾಡಿಕೊಂಡ ಮಧುಮಿತಾ
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಗೆದ್ದು ಮನೆಯ ಕ್ಯಾಪ್ಟನ್ ಆಗಿದ್ದ ಮಧುಮತಾ, ಮನೆಯೊಳಗೆ ನಡೆದ ಜಗಳವೊಂದರಲ್ಲಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬ ಮಾಹಿತಿ ತಿಳಿದಿದೆ. ಸ್ವತಃ ಕಮಲ್ ಹಾಸನ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಗಲಾಟೆಯಿಂದ ತೀವ್ರವಾಗಿ ನೊಂದ ಮಧುಮಿತಾ ಕೈ ಕಟ್ ಮಾಡಿಕೊಂಡಿದ್ದರು ಎಂದು ಬಹಿರಂಗವಾಗಿದೆ.

ಈ ಘಟನೆ ಬಳಿಕ ಮನೆಯಿಂದ ಔಟ್
ಈ ಘಟನೆ ನಡೆದ ಬಳಿಕ ಕೂಡಲೇ ಮಧುಮಿತಾ ಅವರನ್ನ ಆಯೋಜಕರು ಮನೆಯಿಂದ ಹೊರಗಡೆ ಕರೆದುಕೊಂಡು ಬಂದಿದ್ದಾರೆ. ಹೆಚ್ಚಿನ ಚಿಕಿತ್ಸೆ ನೀಡಿ ಆಕೆಯ ಆರೋಗ್ಯ ಯಥಾಸ್ಥಿತಿಯನ್ನ ಕಾಪಾಡಿಕೊಂಡಿದ್ದಾರೆ. ಬಳಿಕ, ಮನೆಯೊಳಗೆ ಮತ್ತೆ ಕಳುಹಿಸಿ, ಆಕೆಯನ್ನ ಮನೆಯಿಂದ ಹೊರಕಳುಹಿಸಿದ್ದಾರೆ. ಪ್ರಾಣಾಪಾಯ ಏನು ಸಂಭವಿಸಿಲ್ಲ. ಮಧುಮಿತಾ ಸುರಕ್ಷಿತವಾಗಿದ್ದಾರೆ.

ಬಾಯ್ಸ್ ಗ್ಯಾಂಗ್ ಜೊತೆ ಗಲಾಟೆ
ಮಧುಮಿತಾ ಅವರು ಈ ರೀತಿ ಯಾಕೆ ಮಾಡಿಕೊಂಡಿರು ಎಂಬುದು ಪ್ರಸಾರವಾಗಿಲ್ಲ. ಆದ್ರೆ, ಈ ಘಟನೆ ನಡೆಯುವುದಕ್ಕು ಮುಂಚೆ ಕೆವೀನ್, ಸ್ಯಾಂಡಿ, ಲೂಲ್ಸ್ಲಿಯಾ ಅವರ ಜೊತೆ ಕಿತ್ತಾಡಿಕೊಂಡಿದ್ದರು. ಮನೆಯ ಕ್ಯಾಪ್ಟನ್ ಆಗಿದ್ದ ಮಧುಮಿತಾ ಮೇಲೆ ಗಂಭೀರ ಆರೋಪ ಕೂಡ ಮಾಡಿದ್ದರಂತೆ. ಇದರಲ್ಲಿ ನನ್ನ ತಪ್ಪು ಇಲ್ಲ ಎಂದು ತೋರಿಸಲು ಈ ರೀತಿ ಮಾಡಿಕೊಂಡರಂತೆ. ಈ ಬಗ್ಗೆ ಕಮಲ್ ಹಾಸನ್ ಬಳಿಯೂ ಮಧುಮಿತಾ ಸ್ಪಷ್ಟನೆ ನೀಡಿದ್ದಾರೆ.

ಇಂತಹ ಘಟನೆ ಬಿಗ್ ಬಾಸ್ ಪ್ರಚೋದಿಸಿಲ್ಲ
ಈ ವಾರದ ಎಲಿಮಿನೇಷನ್ ನಲ್ಲಿ ಮಧುಮಿತಾ ಕೂಡ ನಾಮಿನೇಟ್ ಆಗಿದ್ದರಂತೆ. ಬಟ್, ಟಾಸ್ಕ್ ಗಳಲ್ಲಿ ಚೆನ್ನಾಗಿ ಪ್ರದರ್ಶನ ನೀಡಿದ್ದ ಮಧುಮಿತಾ ಸೇಫ್ ಆಗುವ ಸಾಧ್ಯತೆ ಇತ್ತಂತೆ. ಈ ಮಧ್ಯೆ ಇಂತಹದೊಂದು ಘಟನೆ ನಡೆದ ಕಾರಣ, ಬಿಗ್ ಬಾಸ್ ಆಯೋಜಕರು ತಕ್ಷಣವೇ ಮಧುಮಿತಾ ಅವರನ್ನ ಮನೆಯಿಂದ ಹೊರಗೆ ಕಳುಹಿಸಿದ್ದಾರೆ. ಇಂತಹ ಘಟನೆಗಳನ್ನ ಬಿಗ್ ಬಾಸ್ ಪ್ರಚೋದಿಸುವುದಿಲ್ಲ ಎಂದು ಕಮಲ್ ಹಾಸನ್ ಕೂಡ ತಿಳಿಸಿದ್ದಾರೆ.

ನೆಟ್ಟಿಗರು ತೀವ್ರ ಟೀಕೆ
ಈ ಘಟನೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲೂ ಭಾರಿ ಚರ್ಚೆಯಾಗುತ್ತಿದೆ. ಹಲವರು, ಹಲವು ರೀತಿಯಲ್ಲಿ ಈ ಘಟನೆಯನ್ನ ಖಂಡಿಸಿದ್ದಾರೆ. ಏನೇ ಆದರೂ ಇಂತಹ ನಡೆಗೆ ಯಾರೂ ಮುಂದಾಗಬಾರದು ಎಂದು ಮಧುಮಿತಾ ಮಾಡಿಕೊಂಡಿದ್ದನ್ನ ವಿರೋಧಿಸುತ್ತಿದ್ದಾರೆ. ಮತ್ತೆ ಕೆಲವರು ಬಿಗ್ ಬಾಸ್ ಮೇಲೂ ಟೀಕೆ ಮಾಡುತ್ತಿದ್ದಾರೆ. ಅದೇನೇ ಆಗಲಿ, ಬಿಗ್ ಬಾಸ್ ಶೋ ಎನ್ನುವುದು ಕೇವಲ ಮನರಂಜನೆ ಕಾರ್ಯಕ್ರಮದಲ್ಲಿ. ಅತಿರೇಕಕ್ಕೆ, ಆಕ್ರೋಶಕ್ಕೆ ಒಳಗಾಗಿ ತಮ್ಮ ವ್ಯಕ್ತಿತ್ವ ಮತ್ತು ಪ್ರಾಣಕ್ಕೆ ಅಪಾಯ ಮಾಡಿಕೊಳ್ಳಬಾರದು.


Click it and Unblock the Notifications











