ತುಮಕೂರಿನ ನಟಿ ಚಂದನಾ ಅನಂತಕೃಷ್ಣ ಮತ್ತೆ ಕಿರುತೆರೆಗೆ ಕಮ್‌ಬ್ಯಾಕ್!
ಕನ್ನಡ ಕಿರುತೆರೆಯಲ್ಲಿ ಕೆಲ ಸಮಯ ಮಿಂಚಿ ಮರೆಯಾಗಿದ್ದ ಚಂದನಾ ಅನಂತಕೃಷ್ಣ ಈಗ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಚುಕ್ಕಿ ಹೆಸರಿನಿಂದಲೇ ಖ್ಯಾತಿ ಪಡೆದಿರುವ ಚಂದನಾ ಅನಂತಕೃಷ್ಣ ಸೃಷ್ಟಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಂದನಾ ಅನಂತಕೃಷ್ಣ ಕೇವಲ ನಟಿಯಷ್ಟೇ ಅಲ್ಲ. ನೃತ್ಯಗಾರ್ತಿಯೂ ಹೌದು. ಭರತನಾಟ್ಯ ಕಲಿತಿರುವ ಅನಂತಕೃಷ್ಣ ಹಲವು ಕಡೆ ಪ್ರದರ್ಶನ ನೀಡಿದ್ದಾರೆ. ಇನ್ನು ನಟನೆಗೆ ಮಾತ್ರ ಸೀಮಿತವಾಗಿರದ ನಿರೂಪಣೆಯನ್ನೂ ಮಾಡುತ್ತಾರೆ. ಜೊತೆಗೆ ಹಾಡನ್ನು ಹಾಡುತ್ತಾರೆ.
ಬಿ.ಕಾಂ ಓದಿರುವ ಚಂದನಾಗೆ ನಟಿಯಾಗಬೇಕು ಎಂಬ ಕನಸು ಮೊದಲಿನಿಂದಲೂ ಇತ್ತು. ಆ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಇದೀಗ ಸಿನಿಮಾಗಳಲ್ಲೂ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಚುಕ್ಕಿಯಾಗಿ ಮಿಂಚಿದ ಚಂದನಾ!
ಚುಕ್ಕಿ ಎಂದೇ ಪ್ರಸಿದ್ಧರಾಗಿರುವ ಚಂದನಾ ಅನಂತಕೃಷ್ಣ ಕನ್ನಡ ಕಿರುತೆರೆ ನಟಿ. ರಂಗಭೂಮಿ ಕಲಾವಿದೆ ಕೂಡ ಆಗಿರುವ ಚಂದನಾ ಮೂಲತಃ ತುಮಕೂರಿನವರು. ರಾಜಾ ರಾಣಿ ಧಾರಾವಾಹಿ ಮೂಲಕ ಮನೆ ಮಾತದ ಚಂದನಾ, ಹಲವು ನಾಟಕಗಳಿಗೆ ಬಣ್ಣ ಹಚ್ಚಿದ್ದಾರೆ. ಇವುಗಳಲ್ಲಿ ಮಹಾಮಾಯಿ ನಾಟಕ ತುಂಬಾ ಪ್ರಸಿದ್ಧಿಯಾಗಿದೆ. ಎಡವಟ್ಟು ಚುಕ್ಕಿ ಪಾತ್ರದಲ್ಲಿ ಚಂದನಾ ಪ್ರೇಕ್ಷಕರ ಮನ ಗೆದ್ದಿದ್ದರು. ರಾಜಾ ರಾಣಿ ಧಾರಾವಾಹಿಯಲ್ಲಿ ಚುಕ್ಕಿ ಪಾತ್ರದಲ್ಲಿ ಮಿಂಚಿದ್ದರು. ಹೀಗಾಗಿ ಇಂದಿಗೂ ಚಂದನಾ ಅವರನ್ನು ಚುಕ್ಕಿ ಎಂದೇ ಪ್ರೇಕ್ಷಕರು ಗುರುತಿಸುತ್ತಾರೆ.

ನಿರೂಪಣೆಯಲ್ಲೂ ಮಿಂಚಿದ ನಟಿ!
ನಟನೆಗಷ್ಟೇ ಸೀಮಿತವಾಗಿರದ ಚಂದನಾ ನಿರೂಪಣೆಯನ್ನು ಮಾಡಿದ್ದಾರೆ. ಹಾಡು ಕರ್ನಾಟಕ ಎಂಬ ಕಾರ್ಯಕ್ರಮವನ್ನು ಚಂದನಾ ಅವರು ಅದ್ಭುತವಾಗಿ ನಡೆಸಿಕೊಟ್ಟಿದ್ದರು. ಭರತನಾಟ್ಯ ಕಲಾವಿದೆಯೂ ಆಗಿರುವ ಚಂದನಾ ಹಾಡನ್ನು ಕೂಡ ಹಾಡುತ್ತಾರೆ. ಈ ಹಿಂದೆ ಎರಡು ಸಿನಿಮಾಗಳಿಗೆ ಹಿನ್ನೆಲೆ ಗಾಯಕಿಯಾಗಿ ಹಾಡಿದ್ದರು.

ರಿಯಾಲಿಟಿ ಶೋಗಳಲ್ಲೂ ಭಾಗಿ!
ಕಿರುತೆರೆಯಲ್ಲಿ ಮಿಂಚಿರುವ ಚಂದನಾ ಬಿಗ್ ಬಾಸ್ ಸೀಸನ್ ಸ್ಪರ್ಧಿಯಾಗಿದ್ದರು. ಚಂದನಾ ಅಡುಗೆ ಮಾಡುವುದರಲ್ಲಿಯೂ ಸೂಪರ್, ಹಾಡುವ ಕಂಠವೂ ಸಖತ್, ಇನ್ನು ಡ್ಯಾನ್ಸ್ ಅಂತೂ ಸೂಪರೋ ಸೂಪರ್. ಇನ್ನು ಬಿಗ್ ಬಾಸ್ ಬಳಿಕ ಚಂದನಾ ಡ್ಯಾನ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದರು. ತಾವು ಭರತನಾಟ್ಯ ಕಲಾವಿದೆಯಾಗಿರುವುದರಿಂದ, ಡ್ಯಾನ್ಸ್‌ಲ್ಲಿ ಏನಾದರೂ ಸಾಧಿಸಬೇಕು ಎಂದು ಕನಸು ಕಂಡಿದ್ದಾರೆ. ಇದು ಅವರ ತಂದೆ-ತಾಯಿಯ ಕನಸೂ ಹೌದು.

ಹೊಸ ರೂಪದಲ್ಲಿ ಬಂದ ಚಂದನಾ!
ಸದ್ಯ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದಾರೆ. ಪ್ರೇಕ್ಷಕರಿಗೆ ಚುಕ್ಕಿಯಾಗಿ ಕಾಣಿಸಿಕೊಂಡಿದ್ದ ಚಂದನಾ ಈಗ ಸೃಷ್ಟಿಯಾಗಿ ಬಂದಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯ ಸೂಪರ್ ಹಿಟ್ ಧಾರಾವಾಹಿಯಾದ 'ಮುದ್ದು ಮಣಿಗಳು' ಸೀರಿಯಲ್‌ನಲ್ಲಿ ಚಂದನಾ ಅಭಿನಯಿಸುತ್ತಿದ್ದಾರೆ. ಇದರಲ್ಲಿ ಗೆಸ್ಟ್ ರೋಲ್ ಮಾಡುತ್ತಿರುವ ಚಂದನಾ ದೃಷ್ಟಿಯ ಸಹೋದರಿ ಸೃಷ್ಟಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೃಷ್ಟಿಯ ಎಂಟ್ರಿಯನ್ನು ಅಮ್ಮಮ್ಮ, ಸೃಷ್ಟಿ ಎಲ್ಲರೂ ಒಪ್ಪಿಕೊಂಡಿದ್ದಾರೆ. ದೃಷ್ಟಿ ಜೊತೆಗೆ ಈಗ ಸೃಷ್ಟಿ ಜೋಡಿಯಾಗಿದ್ದು 'ಮುದ್ದು ಮಣಿಗಳು' ಧಾರಾವಾಹಿ ಇದೀಗ ಹೊಸ ತಿರುವು ಪಡೆದುಕೊಂಡಿದೆ.


Click it and Unblock the Notifications











