'ಮಗಳು ಜಾನಕಿ' ಮದುವೆಗೆ ಇನ್ಯಾವುದೇ ಅಡ್ಡಿ ಇಲ್ಲ.!
Recommended Video

ಪ್ರೀತಿಸಿದ ಹುಡುಗ ಆನಂದ್ ಜೊತೆಗೆ ಜಾನಕಿ ಮದುವೆ ನಡೆಯಲು ಕ್ಷಣಗಣನೆ ಶುರುವಾಗಿದೆ. ಹೇಗಾದರೂ ಮಾಡಿ ಆನಂದ್-ಜಾನಕಿ ಮದುವೆ ತಪ್ಪಿಸಬೇಕು ಅಂತ ಚಂದು ಭಾರ್ಗಿ ಎಷ್ಟೇ ಪ್ರಯತ್ನ ಪಟ್ಟರೂ, ಸಾಧ್ಯ ಆಗಲಿಲ್ಲ.
ಆನಂದ್ ಜೊತೆಗೆ ಮದುವೆ ಆಗಲು ಜಾನಕಿ ಸಿ.ಎಸ್.ಪಿ ಸಹಾಯ ಪಡೆದ್ಮೇಲೆ, ಚಂದು ಭಾರ್ಗಿಗೆ ಹಿನ್ನಡೆ ಆಯ್ತು. ಸಿ.ಎಸ್.ಪಿ ಮಾಜಿ ಪತ್ನಿ ರಶ್ಮಿ ಸಾಹಸ ಮಾಡಿದರೂ ಜಾನಕಿಯ ಸುಳಿವು ಸಿಗಲಿಲ್ಲ.
ಕಡೆಗೆ ''ಜಾನಕಿ ಯಾರನ್ನಾದರೂ ಮದುವೆ ಆಗಲಿ. ಬಿಟ್ಟುಬಿಡಿ'' ಎಂದುಬಿಟ್ಟರು ಚಂದು ಭಾರ್ಗಿ. ಅಲ್ಲಿಗೆ, ಅದಾಗಲೇ ನಿಶ್ಚಯ ಆಗಿದ್ದ ಜಾನಕಿ-ನಿರಂಜನ್ ವಿವಾಹ ನಿಂತು ಹೋದ ಹಾಗೆ ಲೆಕ್ಕ.

ಅತ್ತ, ಚಂದು ಭಾರ್ಗಿ ಮನೆಗೆ ಬಂದಿದ್ದ ಅತಿಥಿಗಳು ವಾಪಸ್ ಹೊರಟಿದ್ದರೆ, ಇತ್ತ ಜಾನಕಿ-ಆನಂದ್ ಮದುವೆ ಮಾಡಿಸಲು ಲಕ್ಷ್ಮಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಳೆ.
''ಯಾವುದೇ ಕಾರಣಕ್ಕೂ ಜಾನಕಿ ಮದುವೆಗೆ ನೀವು ಹೋಗಬಾರದು'' ಅಂತ ಸಿ.ಎಸ್.ಪಿ ಬಳಿ ರಶ್ಮಿ ಮಾತು ತೆಗೆದುಕೊಂಡಿದ್ದಾರೆ. ಹೀಗಾಗಿ, 'ಮಗಳು ಜಾನಕಿ'ಯ ಮದುವೆ ನೋಡುವ ಭಾಗ್ಯ ತಂದೆ ಸಿ.ಎಸ್.ಪಿಗಿಲ್ಲ.
ಅಡೆ-ತಡೆ ಇಲ್ಲದೆ ಜಾನಕಿ-ಆನಂದ್ ಮದುವೆ ನಡೆಯುತ್ತಾ.? ಜಾನಕಿಯನ್ನ ಚಂದು ಭಾರ್ಗಿ ಕ್ಷಮಿಸುತ್ತಾರಾ.? ಕಾದು ನೋಡಬೇಕು.


Click it and Unblock the Notifications











