'ಮಗಳು ಜಾನಕಿ'ಗೆ ಆದ ಮೋಸ ಸಿ.ಎಸ್.ಪಿ ಮುಂದೆ ಬಯಲು.!

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಗಳು ಜಾನಕಿ' ಧಾರಾವಾಹಿ ರೋಚಕ ಘಟ್ಟ ತಲುಪಿದೆ.

ಗಂಡ ಐಎಎಸ್ ಆಫೀಸರ್ ಅಲ್ಲ, ಸುಳ್ಳು ಹೇಳಿ ಮದುವೆ ಮಾಡಿಕೊಂಡಿದ್ದಾನೆ ಎಂಬ ಸತ್ಯ ಜಾನಕಿಗೆ ಗೊತ್ತಾಗುತ್ತಿದ್ದಂತೆಯೇ, ಆಕೆ ಹೇಳದೇ ಕೇಳದೇ ರಾತ್ರೋರಾತ್ರಿ ಮನೆಯಿಂದ ಹೊರಗೆ ಬಂದಳು.

ಮನೆಯಿಂದ ಆಚೆ ಹೊರಟ ಜಾನಕಿಗೆ ತೋಚಿದ್ದು ಸಿ.ಎಸ್.ಪಿ ಮನೆಯ ದಾರಿ. ಮಧ್ಯರಾತ್ರಿ ಬಸ್ ಹತ್ತಿಕೊಂಡು ಜಂಗಮದುರ್ಗಕ್ಕೆ ಹೋದ ಜಾನಕಿ ಸದ್ಯ ಸಿ.ಎಸ್.ಪಿ ಮನೆಯಲ್ಲಿ ಇದ್ದಾಳೆ.

ಮಗಳು ಕಾಣೆಯಾಗಿರುವ ಬಗ್ಗೆ ಗಾಬರಿಗೊಂಡಿದ್ದ ಸಿ.ಎಸ್.ಪಿಗೆ ಜಾನಕಿಯನ್ನ ನೋಡಿ ಖುಷಿಯಾಗಿದೆ. ಈ ನಡುವೆ ಜಾನಕಿ ಬದುಕಿನಲ್ಲಿ ಆಗಿರುವ ಕಹಿ ಘಟನೆಗಳು ಸಿ.ಎಸ್.ಪಿಗೆ ಆಘಾತ ನೀಡಿದೆ. ಮುಂದೆ ಓದಿರಿ...

ಸಿ.ಎಸ್.ಪಿಗೆ ಸತ್ಯ ಹೇಳದ ಜಾನಕಿ

ಸಿ.ಎಸ್.ಪಿಗೆ ಸತ್ಯ ಹೇಳದ ಜಾನಕಿ

''ಮನೆ ಬಿಟ್ಟು ಬಂದಿದ್ದು ಯಾಕೆ.?'' ಅಂತ ಸಿ.ಎಸ್.ಪಿ ಎಷ್ಟೇ ಕೇಳಿದರೂ, ಅವರ ಮುಂದೆ ಜಾನಕಿ ಕಣ್ಣೀರು ಹಾಕಿದಳೇ ಹೊರತು ಸತ್ಯ ಮಾತ್ರ ಬಾಯಿ ಬಿಡಲಿಲ್ಲ. ಸಿ.ಎಸ್.ಪಿ ಮುಂದೆ ಹೇಳದ ಸತ್ಯವನ್ನ ಶ್ಯಾಮಲ ಮುಂದೆ ಜಾನಕಿ ಬಾಯ್ಬಿಟ್ಟಳು.

ಶ್ಯಾಮಲ ಮುಂದೆ ಗುಟ್ಟು ರಟ್ಟು

ಶ್ಯಾಮಲ ಮುಂದೆ ಗುಟ್ಟು ರಟ್ಟು

ಚಂದು ಭಾರ್ಗಿ ದ್ವೇಷ ಸಾಧಿಸುತ್ತಿರುವುದು, ನಿರಂಜನ್ ಧಾವಳಿ ಐಎಎಸ್ ಆಫೀಸರ್ ಅಂತ ಸುಳ್ಳು ಹೇಳಿದ್ದು, ಮಾನಸಿಕವಾಗಿ ನೊಂದಿರುವುದೆಲ್ಲವನ್ನೂ ಜಾನಕಿ, ಶ್ಯಾಮಲ ಮುಂದೆ ಹೇಳಿಕೊಂಡಳು.

ಸಿ.ಎಸ್.ಪಿಗೆ ನಿಜ ಗೊತ್ತಾಯ್ತು.!

ಸಿ.ಎಸ್.ಪಿಗೆ ನಿಜ ಗೊತ್ತಾಯ್ತು.!

''ಜಾನಕಿಗೆ ಮೋಸ ಆಗಿದೆ. ನಿರಂಜನ್ ಧಾವಳಿ ಐಎಎಸ್ ಆಫೀಸರ್ ಅಲ್ಲ. ಸಿ.ಎಂ ಆಫೀಸ್ ನಲ್ಲಿ ಜಾನಕಿಗೆ ಸತ್ಯ ಗೊತ್ತಾಗಿದೆ'' ಅಂತ ಶ್ಯಾಮಲ, ಸಿ.ಎಸ್.ಪಿಗೆ ಹೇಳಿದರು. ಇದನ್ನ ಕೇಳಿ ಸಿ.ಎಸ್.ಪಿ ಆಘಾತಗೊಂಡರು.

ಕಂಪ್ಲೇಂಟ್ ಕೊಡ್ತಾರಾ ಸಿ.ಎಸ್.ಪಿ.?

ಕಂಪ್ಲೇಂಟ್ ಕೊಡ್ತಾರಾ ಸಿ.ಎಸ್.ಪಿ.?

ನಿರಂಜನ್ ಧಾವಳಿ ವಿರುದ್ಧ ದೂರು ದಾಖಲಿಸಲು ಸಿ.ಎಸ್.ಪಿ ಮುಂದಾಗಿದ್ದಾರೆ. ಗಂಡನ ವಿರುದ್ಧ ಕಂಪ್ಲೇಂಟ್ ಕೊಡಲು ಜಾನಕಿ ಒಪ್ಪುತ್ತಾಳಾ.? ಚಂದು ಭಾರ್ಗಿ ಬಂಡವಾಳ ಈಗಲಾದರೂ ಬಯಲಾಗುತ್ತಾ.? ನೋಡೋಣ.

More from Filmibeat

English summary
TN Seetharam's 'Magalu Janaki' written update: CSP gets to know the truth about Niranjan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X