'ಮಗಳು ಜಾನಕಿ': ಮೊದಲ ಸಂಚಿಕೆಯಲ್ಲೇ ವೀಕ್ಷಕರನ್ನು ಕಟ್ಟಿಹಾಕಿ ಕೂರಿಸಿದ ಟಿ.ಎನ್.ಎಸ್

By Harshitha

ಕಡೆಗೂ ವೀಕ್ಷಕರ ಕನವರಿಕೆ ಈಡೇರಿದೆ. ಟಿ.ಎನ್.ಸೀತಾರಾಮ್ ಯಾವಾಗ ಇನ್ನೊಂದು ಧಾರಾವಾಹಿಯನ್ನು ಹೊತ್ತು ತರ್ತಾರೋ ಅಂತ ಐದು ವರ್ಷಗಳಿಂದ ಬಕಪಕ್ಷಿಗಳಂತೆ ಕಾಯುತ್ತಿದ್ದ ವೀಕ್ಷಕರಿಗೆ ಸಿ.ಎಸ್.ಪಿ ನೀಡಿರುವುದು ಅಪ್ಪ-ಮಗಳ ಅನುಬಂಧ ಸಾರುವ 'ಮಗಳು ಜಾನಕಿ'.

'ಮಗಳು ಜಾನಕಿ'ಯ ಮೊದಲ ಸಂಚಿಕೆ ಪ್ರಸಾರ ಆಗಿದೆ. ಮೊಟ್ಟ ಮೊದಲ ಸಂಚಿಕೆಯಲ್ಲೇ ವೀಕ್ಷಕರನ್ನ ಟಿವಿ ಮುಂದೆ ಕಟ್ಟಿಹಾಕಿ ಕೂರಿಸುವಲ್ಲಿ ಟಿ.ಎನ್.ಸೀತಾರಾಮ್ ಯಶಸ್ವಿ ಆಗಿದ್ದಾರೆ.

ಸದ್ಯ ಪ್ರಸಾರ ಆಗುತ್ತಿರುವ ಇತರೆ ಧಾರಾವಾಹಿಗಳಂತೆ 'ಮಗಳು ಜಾನಕಿ' ಧಾರಾವಾಹಿಯಲ್ಲಿ ಕಣ್ಣಿಗೆ ರಾಚುವ ಅದ್ಧೂರಿತನ ಇಲ್ಲ. ದೊಡ್ಡ ದೊಡ್ಡ ಬಂಗಲೆಗಳು, 'ಅತಿ' ಎನಿಸುವ ಮೇಕಪ್, ಆಡಂಬರದ ಕಾಸ್ಟ್ಯೂಮ್ಸ್ ಇಲ್ಲ. ಸುಮ್ ಸುಮ್ನೆ ಮ್ಯೂಸಿಕ್ ಸೇರಿಸಿ ಒಂದೇ ಫ್ರೇಮ್ ನ ಮೂರ್ಮೂರು ಬಾರಿ ರಿಪೀಟ್ ಹಾಕಿ ತೋರಿಸಿಲ್ಲ. ಒಂದು ಡೈಲಾಗ್ ಹೇಳಲು ಕಾಲು ಗಂಟೆ ಕೂಡ ತೆಗೆದುಕೊಂಡಿಲ್ಲ.

ಹಾಗ್ನೋಡಿದ್ರೆ, ಕಥೆಯನ್ನ ಎಲಾಸ್ಟಿಕ್ ನಂತೆ ಎಳೆಯದೆ, ಮೊದಲ ಸಂಚಿಕೆಯಲ್ಲಿ ಪಾತ್ರಗಳ ಪರಿಚಯವೂ ಮಾಡಿ ಮುಗಿಸಿ ಕಥೆಯನ್ನ ಒಂದು ಹಂತಕ್ಕೆ ತಂದು ನಿಲ್ಲಿಸಿದ್ದಾರೆ ಟಿ.ಎನ್.ಸೀತಾರಾಮ್. ಇದು ವೀಕ್ಷಕರಿಗೆ ಸಮಾಧಾನದ ಜೊತೆಗೆ ಸಂತಸವನ್ನೂ ತಂದಿದ್ದರೆ ಅಚ್ಚರಿ ಪಡಲೇಬೇಕಾಗಿಲ್ಲ. ಮುಂದೆ ಓದಿರಿ...

ಫ್ಲ್ಯಾಶ್ ಬ್ಯಾಕ್ ಸ್ಟೋರಿ

ಫ್ಲ್ಯಾಶ್ ಬ್ಯಾಕ್ ಸ್ಟೋರಿ

ವೃತ್ತಿಯಲ್ಲಿ ಕ್ರಿಮಿನಲ್ ಲಾಯರ್ ಆಗಿರುವ ಸಿ.ಎಸ್.ಪಿಗೆ ಜಾನಕಿ ಮತ್ತು ಮಧುಕರ ಎಂಬ ಅವಳಿ ಮಕ್ಕಳು. 22 ವರ್ಷಗಳ ಹಿಂದೆ ಸಿ.ಎಸ್.ಪಿಯಿಂದ ವಿಚ್ಛೇದನ ಪಡೆಯುವ ರಶ್ಮಿ ಶ್ರೀಮಂತ ರಾಜಕಾರಣಿ ಚಂದು ಬಾರ್ಗಿಯನ್ನ ಕೈಹಿಡಿಯುತ್ತಾಳೆ.

ಅಪ್ಪನ ಜೊತೆ ಮಧುಕರ

ಅಪ್ಪನ ಜೊತೆ ಮಧುಕರ

ಸಿ.ಎಸ್.ಪಿ ಜೊತೆ ಮಧುಕರನನ್ನು ಬಿಟ್ಟು, ಜಾನಕಿಯನ್ನು ಕರೆದುಕೊಂಡು ಹೋಗುತ್ತಾಳೆ ರಶ್ಮಿ. ಜಾನಕಿಗೆ ತಮ್ಮ ತಂದೆ ಸಿ.ಎಸ್.ಪಿ ಎಂಬ ಸತ್ಯ ಗೊತ್ತಿಲ್ಲ. ಚಂದು ಬಾರ್ಗಿಯೇ ತಮ್ಮ ತಂದೆ ಎಂದುಕೊಂಡಿರುವ ಜಾನಕಿಗೆ ಅಪ್ಪನ ಕಂಡ್ರೆ ಭಯ. ಅಮ್ಮನ ಕಂಡರೆ ಪ್ರೀತಿ.

ಜಾನಕಿಯ ಆಸೆ

ಜಾನಕಿಯ ಆಸೆ

ಜಾನಕಿಗೆ ಐಎಎಸ್ ಮಾಡುವ ಆಸೆ. ಆದ್ರೆ, ಆಕೆಗೆ ವಿದ್ಯೆ ತಲೆಗೆ ಹತ್ತಲ್ಲ. ಹೀಗಾಗಿ ಐಪಿಎಸ್ ಅಧಿಕಾರಿಯನ್ನು ಮದುವೆ ಆಗುವ ಹಂಬಲ. ಅದಾಗಲೇ, ಐಪಿಎಸ್ ಎಕ್ಸಾಂ ಕ್ಲಿಯರ್ ಮಾಡಿರುವ ತಮ್ಮನೆ ಕಾರ್ ಡ್ರೈವರ್ ಶಿವಕುಮಾರ್ ಪುತ್ರ ಆನಂದ್ ಬೆಳಗೂರು ಮೇಲೆ ಜಾನಕಿಗೆ ಪ್ರೀತಿ.

ಬಾಂಬೆ ಹುಡುಗ ಹುಡುಕಿರುವ ಅಪ್ಪ

ಬಾಂಬೆ ಹುಡುಗ ಹುಡುಕಿರುವ ಅಪ್ಪ

ಜಾನಕಿಗೆ ತಂದೆ ಚಂದು ಬಾರ್ಗಿ ಬಾಂಬೆ ಹುಡುಗ ಹುಡುಕಿದ್ದಾರೆ. ಆದ್ರೆ, ಬಾಂಬೆ ಹುಡುಗನ ಜೊತೆ ಹಸೆಮಣೆ ಏರಲು ಜಾನಕಿ ರೆಡಿ ಇಲ್ಲ. ಆನಂದ್ ಬೆಳಗೂರು ಜೊತೆಗಿನ ಪ್ರೀತಿ ವಿಷಯವನ್ನ ತಂದೆಗೆ ತಿಳಿಸುತ್ತಾಳೆ ಜಾನಕಿ. ಮಗಳ ಪ್ರೀತಿ ವಿಷಯ ತಿಳಿದ ಕೂಡಲೆ ಚಂದು ಬಾರ್ಗಿ ಸಮ್ಮತಿ ಕೂಡ ಸೂಚಿಸುತ್ತಾರೆ.

ಚಂದು ಬಾರ್ಗಿಗೂ ಆನಂದ್ ಬೆಳಗೂರಿಗೂ ಅಷ್ಟಕಷ್ಟೆ.!

ಚಂದು ಬಾರ್ಗಿಗೂ ಆನಂದ್ ಬೆಳಗೂರಿಗೂ ಅಷ್ಟಕಷ್ಟೆ.!

ಚಂದು ಬಾರ್ಗಿಗೂ ಆನಂದ್ ಬೆಳಗೂರಿಗೂ ಅಷ್ಟಕಷ್ಟೆ. ಯಾಕಂದ್ರೆ, ರಾಜಕಾರಣಿ ಚಂದು ಬಾರ್ಗಿ ವಿರುದ್ಧ ಬಿಸಿ ರಕ್ತದ ಹುಡುಗ ಆನಂದ್ ಬೆಳಗೂರು ಫೇಸ್ ಬುಕ್ ನಲ್ಲಿ ಏನೇನೋ ಬರೆದು, ಕಡೆಗೆ ಕ್ಷಮೆ ಕೇಳಿದ್ದ.

ಎಲೆಕ್ಷನ್ ನಲ್ಲಿ ಸ್ಪರ್ಧಿಸುತ್ತಿರುವ ಚಂದು ಬಾರ್ಗಿ

ಎಲೆಕ್ಷನ್ ನಲ್ಲಿ ಸ್ಪರ್ಧಿಸುತ್ತಿರುವ ಚಂದು ಬಾರ್ಗಿ

ಜಂಗಮದುರ್ಗದ ಬೈ ಎಲೆಕ್ಷನ್ ನಲ್ಲಿ ಸ್ಪರ್ಧಿಸಲು ಚಂದು ಬಾರ್ಗಿಗೆ ಮುಖ್ಯಮಂತ್ರಿಗಳು ಟಿಕೆಟ್ ಕೊಟ್ಟಿದ್ದಾರೆ. ಹೀಗಿರುವಾಗಲೇ, ಜಂಗಮದುರ್ಗದ ಚಂದು ಬಾರ್ಗಿ ಫ್ಯಾಕ್ಟರಿಯಲ್ಲಿ ಓರ್ವ ವ್ಯಕ್ತಿ ಸತ್ತು ಬಿದ್ದಿರುವ ಸುದ್ದಿ ಬೇರೆ. ಇದು ಚಂದು ಬಾರ್ಗಿಗೆ ಕಂಟಕ ಆಗುತ್ತಾ.? ಎಂಬುದನ್ನ ಇಂದಿನ ಸಂಚಿಕೆಯಲ್ಲಿ ನೋಡಬೇಕು.

More from Filmibeat

English summary
TN Seetharam's 'Magalu Janaki' written update: CSP reveals his heart wrenching story.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X