ಆನಂದ್ ಬೆಳಗೂರು ಕಿಡ್ನ್ಯಾಪ್ ಹಿಂದೆ ಚಂದು ಭಾರ್ಗಿ ಕೈವಾಡ.?
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಗಳು ಜಾನಕಿ' ಧಾರಾವಾಹಿ ರೋಚಕ ಘಟ್ಟ ತಲುಪಿದೆ.
ಸಿ.ಎಸ್.ಪಿ ಮುಂದೆ ನಿಂತು ಮಾಡಬೇಕಿದ್ದ ಜಾನಕಿ-ಆನಂದ್ ಬೆಳಗೂರು ಮದುವೆ ನಿಂತು ಹೋಯ್ತು. ಮದುವೆ ನಡೆಯುತ್ತಿದ್ದ ಜಾಗಕ್ಕೆ ಕಾತ್ಯಾಯಿನಿ ಮೆನನ್ ತಂದೆ ಬಂದು ಆನಂದ್ ಬೆಳಗೂರು ವಿರುದ್ಧ ಆರೋಪ ಮಾಡಿದರು. ಆನಂದ್ ಗೆ ಸಿಕ್ಕಿರುವ ಜಾಮೀನು ಕ್ಯಾನ್ಸಲ್ ಮಾಡಿಸುವುದಾಗಿ ಹೇಳಿದ್ದರು.
ಇದರಿಂದ ಮನನೊಂದ ಜಾನಕಿ ಮದುವೆಯಿಂದ ಹಿಂದೆ ಸರಿದಳು. ಅತ್ತ ಹೋಟೆಲ್ ರೂಮ್ ಗೆ ಹೋಗಿದ್ದ ಆನಂದ್ ಬೆಳಗೂರು ವಾಪಸ್ ಬರಲೇ ಇಲ್ಲ. ಪೊಲೀಸರೇ ಆನಂದ್ ರನ್ನ ಕರೆದುಕೊಂಡು ಹೋಗಿರಬೇಕು ಅಂತ ಎಲ್ಲರೂ ಭಾವಿಸಿದ್ದರು.
ಆದ್ರೆ, ಆನಂದ್ ರನ್ನ ಪೊಲೀಸರು ಕರೆದುಕೊಂಡು ಹೋಗಿಲ್ಲ ಅಂತ ಸಿ.ಎಸ್.ಪಿಗೆ ಗೊತ್ತಾಗಿದೆ. ಆನಂದ್ ಕಿಡ್ನ್ಯಾಪ್ ಆಗಿರಬೇಕು ಎಂಬ ಗುಮಾನಿ ಅವರಿಗಿದೆ. ಆನಂದ್ ಕಿಡ್ನ್ಯಾಪ್ ಹಿಂದೆ ಚಂದು ಭಾರ್ಗಿ ಕೈವಾಡ ಇದೆ ಅಂತಿದ್ದಾರೆ ಸಿ.ಎಸ್.ಪಿ. ಮುಂದೆ ಓದಿರಿ...

ಸಿ.ಎಸ್.ಪಿ ಮನೆಯಲ್ಲಿ ಆನಂದ್ ತಂದೆ-ತಾಯಿ
ಕಳೆದ ಐದು ದಿನಗಳಿಂದ ಆನಂದ್ ನಾಪತ್ತೆ ಆಗಿರುವ ಕಾರಣ, ಅವನನ್ನು ಹುಡುಕಿಸಿಕೊಡುವಂತೆ ಆನಂದ್ ತಂದೆ-ತಾಯಿ ಸಿ.ಎಸ್.ಪಿ ಮನೆಗೆ ಬಂದಿದ್ದಾರೆ. ಆನಂದ್ ರನ್ನ ಪೊಲೀಸರು ಬಂಧಿಸಿಲ್ಲ ಎಂಬ ಸಂಗತಿ ಸಿ.ಎಸ್.ಪಿಗೆ ಗೊತ್ತಾಗಿದ್ದು ಆಗಲೇ.!

ಇದೆಲ್ಲ ಚಂದು ಭಾರ್ಗಿ ಪ್ಲಾನ್.?
ಆನಂದ್ ಕಿಡ್ನ್ಯಾಪ್ ಬಗ್ಗೆ ಯಾರಿಗೂ ಅನುಮಾನ ಬರಬಾರದು ಎಂದು ಕಾತ್ಯಾಯಿನಿ ಮೆನನ್ ತಂದೆ ಬಾಯಲ್ಲಿ ಜಾಮೀನು ಕ್ಯಾನ್ಸಲ್ ಮಾಡಿಸುವ ವಿಚಾರವನ್ನ ಎಲ್ಲರ ಬಳಿಯೂ ಹೇಳಿಸಲಾಗಿದೆ. ಈ ಪ್ಲಾನ್ ಹಿಂದೆ ಚಂದು ಭಾರ್ಗಿ ಇದ್ದಾರೆ ಎಂಬ ಗುಮಾನಿ ಸಿ.ಎಸ್.ಪಿಗೆ ಕಾಡುತ್ತಿದೆ.

ದೂರು ಕೊಡಲು ಹೇಳಿದ ಸಿ.ಎಸ್.ಪಿ
ಚಂದು ಭಾರ್ಗಿ ವಿರುದ್ಧ ಕಿಡ್ನ್ಯಾಪ್ ಕಂಪ್ಲೇಂಟ್ ಕೊಡಲು ಆನಂದ್ ತಂದೆ-ತಾಯಿಗೆ ಸಿ.ಎಸ್.ಪಿ ಸೂಚಿಸಿದ್ದಾರೆ. ಕೆಲಸ ಕೊಟ್ಟ ಧಣಿ ವಿರುದ್ಧ ಆನಂದ್ ತಂದೆ-ತಾಯಿ ತಿರುಗಿ ಬೀಳ್ತಾರಾ.? ಕಾದು ನೋಡಬೇಕು.

ಜಾನಕಿ-ನಿರಂಜನ್ ಮದುವೆ ನಡೆಯುತ್ತಾ.?
ಅತ್ತ ಜಾನಕಿ ಮದುವೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಬಳೆ ಶಾಸ್ತ್ರ ನೆರವೇರುತ್ತಿದೆ. ಜಾನಕಿ-ನಿರಂಜನ್ ಮದುವೆ ನಡೆಯುತ್ತಾ.? ಇಲ್ಲ, ಅಷ್ಟರಲ್ಲಿ ಕಿಡ್ನ್ಯಾಪ್ ದೂರಿನ ಅನ್ವಯ ಚಂದು ಭಾರ್ಗಿಯನ್ನ ಪೊಲೀಸರು ಅರೆಸ್ಟ್ ಮಾಡುತ್ತಾರಾ.? ಜಾನಕಿಯ ಜೀವನದಲ್ಲಿ ಇನ್ನೂ ಏನೇನ್ ಆಗುತ್ತೋ.?!


Click it and Unblock the Notifications











