Ganavi Laxman: ನಟಿ ಗಾನವಿ ಲಕ್ಷ್ಮಣ್ ಅವರ ಕಣ್ಣಿನ ನೋಟಕ್ಕೆ ಫಿದಾ ಆದ ಅಭಿಮಾನಿಗಳು!
ನಟಿ ಗಾನವಿ ಲಕ್ಷ್ಮಣ್ ಇದೀಗ ಬಹಳ ಗ್ಲಾಮರ್ ಆಗಿ ಕಾಣಿಸಿಕೊಂಡು ಇದ್ದಾರೆ. ಮಗಳು ಜಾನಕಿ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟು ತನ್ನದೇ ಆದ ಛಾಪು ಮೂಡಿಸಿದವರು ಗಾನವಿ. ತಮ್ಮ ಸಹಜ ಅಭಿನಯದಿಂದ ಜನರ ಮನಗೆದ್ದಿದ್ದ ನಟಿ ನೋಡಲು ಕೂಡ ಬಹಳ ಸುಂದರವಾಗಿ ಇದ್ದಾರೆ.
ಇದೀಗ ಗಾನವಿ ಹೋಸ ಫೋಟೋಶೂಟ್ ಮಾಡಿಸಿಕೊಂಡು ಎಲ್ಲರ ಮನ ಗೆದ್ದಿದ್ದಾರೆ. ಏಷ್ಟು ಸುಂದರವಾಗಿ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಗಾನವಿ ಲಕ್ಷ್ಮಣ್ ಅವರ ಫೋಟೋ ನೋಡಿದ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಕನಸಿನ ರಾಣಿ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ.

ಹೊಸ ಕಲ್ಪನೆಯ ಕಲಾತ್ಮಕ ಫೋಟೋಶೂಟ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡ ನಟಿ ವಿಭಿನ್ನವಾಗಿಯೇ ಕಾಣಿಸುತ್ತಿದ್ದಾರೆ. ಇದೇ ರೀತಿ ಈಗೀನ ಫೋಟೋಗಳು ಕಲಾತ್ಮಕವಾಗಿಯೇ ಇವೆ. ಗಾನವಿ ಲಕ್ಷ್ಮಣ್ ಕಿರುತೆರೆಯಿಂದ ಹಿರಿತೆರೆಯಲ್ಲಿ ಮಿಂಚಿ, ಈ ಪರ ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಹಲವು ಸಿನಿಮಾಗಳಲ್ಲಿ ಗಾನವಿ ನಟನೆ
ಗಾನವಿಗೆ ಈಗಾಗಲೇ ಹಲವು ಸಿನಿಮಾಗಳಲ್ಲಿ ನಟನೆ ಮಾಡಲು ಸಾಕಷ್ಟು ಆಫರ್‌ಗಳು ಬರುತ್ತಿದೆ. ಪರ ಭಾಷೆಯಿಂದಲೇ ಸಾಕಷ್ಟು ಆಫರ್‌ಗಳು ಬರುತ್ತಿದೆ. ಇನ್ನೂ ವೇದಾ ಸಿನಿಮಾದಲ್ಲಿ ಕೂಡ ಈ ನಟಿ ಅದ್ಭುತವಾಗಿ ನಟನೆ ಮಾಡಿದ್ದು ನೋಡುಗರಿಗೆ ಬಹಳ ಖುಷಿ ನೀಡಿದೆ. ತೆಲುಗು ಭಾಷೆಯಲ್ಲಿ ರಿಲೀಸ್ ಆದ ಈ ಚಿತ್ರದಿಂದ ಅಲ್ಲಿಯ ಜನರ ಮನಸ್ಸು ಕದ್ದಿದ್ದಾರೆ ಈ ನಟಿ.
ಗಾನವಿ ಲಕ್ಷ್ಮಣ್ ಕಣ್ಣು ನೋಡಿ ಫಿದಾ ಆದ ಅಭಿಮಾನಿಗಳು
ಸದ್ಯ ಗಾನವಿ ಯಾವ ಚಿತ್ರದಲ್ಲಿಯೂ ಕೂಡ ನಟನೆ ಮಾಡುತ್ತಾ ಇಲ್ಲ. ಗಾನವಿ ಅವರ ಫೋಟೋ ನೋಡಿದ ಜನರು ಸಖತ್ ಕ್ರಿಯೇಟಿವ್ ಆಗಿ ಬಂದಿದೆ ಈ ಫೋಟೋ ಮೂಡಿ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ. ಅಭಿಮಾನಿಗಳಿಗೆ ಈ ನಟಿಯ ಮೇಲೆ ಹೊಸ ನಿರೀಕ್ಷೆ ಮೂಡಿ ಬಂದಿದೆ. ಇನ್ನೂ ಗಾನವಿ ಕಣ್ಣುಗಳನ್ನು ಹೆಚ್ಚಾಗಿ ಫೋಕಸ್ ಮಾಡಿ ಈ ಫೋಟೋ ತೆಗೆಯಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಉತ್ತಮ ಕಥೆಗಾಗಿ ಕಾಯುತ್ತಿರುವ ನಟಿ
ಗಾನವಿ ಅವರ ಕಣ್ಣುಗಳು ಆಕೆಯ ಅಂದವನ್ನು ಇನ್ನಷ್ಟು ಇಮ್ಮಡಿಗೊಳಿಸಿದೆ. ಹಾಗಾಗಿಯೇ ಇವರ ಅಭಿಮಾನಿಗಳು ಗಾನವಿ ಕಣ್ಣುಗಳನ್ನ ನೋಡಿ ನಿಮ್ಮ "ಕಣ್ಣುಗಳು ತುಂಬಾನೆ ಚೆನ್ನಾಗಿವೆ" ಅಂತಲೇ ಹಾಡಿ ಹೊಗಳಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ಮಾತ್ರ ಸಖತ್ ಕ್ಯೂಟ್ ಆಗಿ ಮೂಡಿ ಬಂದಿದೆ ಫೋಟೋ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಗಾನವಿ ಮಾತ್ರ ಕಾಮೆಂಟ್ ಗಳಿಗೆ ರಿಪ್ಲೈ ಕೊಟ್ಟಿಲ್ಲ. ಸದ್ಯ ಗಾನವಿ ಒಂದೊಳ್ಳೆಯ ಕಥೆಗಾಗಿ ಕಾಯುತ್ತಿದ್ದಾರೆ.


Click it and Unblock the Notifications











