ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಮಗಳು ಜಾನಕಿ' ಧಾರಾವಾಹಿಯ ಖ್ಯಾತ ನಟಿ ಪೂಜಾ
Recommended Video
ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ ಒಂದಾಗಿರುವ ಮಗಳು ಜಾನಕಿ ಖ್ಯಾತಿಯ ನಟಿ ಪೂಜಾ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ ಪೂಜಾ ಎನ್ನುವುದಕ್ಕಿಂತ ಚಂಚಲಾ ಎಂದರೆ ಥಟ್ ಅಂತ ಗೊತ್ತಾಗುತ್ತೆ. ಅದ್ಭುತ ಅಭಿನಯದ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿರುವ ಪೂಜಾ ಈಗ ಮದುವೆ ಸಂಭ್ರಮದಲ್ಲಿದ್ದಾರೆ.
ಟಿ.ಎನ್ ಸೀತಾರಾಮ್ ನಿರ್ದೇಶನದ ಧಾರಾವಾಹಿಯಲ್ಲಿ ಜಾನಕಿ ತಂಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಚಂಚಲಾ ನಿನ್ನೆ ರಂಜಿತ್ ಕೆಕುನ್ನಾಯ ಜೊತೆ ಸಪ್ತಪದಿ ತುಳಿಸಿದ್ದಾರೆ. ಮನೆಯವರು ನಿಶ್ಚಯ ಮಾಡಿದ ಹುಡುಗನ ಜೊತೆ ಪೂಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರ ಮದುವೆ ಸಮಾರಂಭಕ್ಕೆ ಕಿರುತೆರೆ ಕಲಾವಿದರು ಮತ್ತು ಸ್ನೇಹಿತರು ಭಾಗಿಯಾಗಿದ್ದರು.

ಧಾರಾವಾಹಿಯಲ್ಲಿ ಚಂಚಲಾ ಮದುವೆ ಮುರಿದು ಬಿದ್ದಿದೆ. ಚಂಚಲಾ ಜೊತೆ ಹಸೆಮಣೆ ಏರಲು ತಯಾರಾಗಿದ್ದ ಚಿರಂತನ್ ಜೈಲು ಸೇರಿದ್ದಾರೆ. ಮಗಳು ಜಾನಕಿ ಧಾರಾವಾಹಿ ರೋಚಕ ತಿರುವುಗಳನ್ನು ಪಡೆದುಕೊಂಡು ಸಾಗುತ್ತಿದೆ. ಚಂಚಲ ಮದುವೆ ಮುರಿದು ಬಿತ್ತೆಂದು ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದರು. ಆದರೀಗ ಚಂಚಲಾ ರಿಯಲ್ ಲೈಫ್ ನಲ್ಲಿ ಹಸೆಮಣೆ ಏರಿರುವುದು ವೀಕ್ಷಕರಿಗೆ ಸಂತಸ ತಂದಿದೆ.

ಪೂಜಾ ಮತ್ತು ರಂಜಿತ್ ಮದುವೆಯ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇಬ್ಬರ ಮದುವೆ ಸಮಾರಂಭಕ್ಕೆ ಕುಟುಂಬದವರು, ಸ್ನೇಹಿತರು ಮತ್ತು ಕಿರುತೆರೆಯ ಕಲಾವಿದರು ಭಾಗಿಯಾಗಿ ಶುಭ ಹಾರೈಸಿದ್ದಾರೆ. ಮದುವೆ ನಂತರವು ಪೂಜಾ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











