ಲಾಕ್ ಡೌನ್ ನಡುವೆಯೂ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ಖ್ಯಾತ ನಟಿ ಸುಪ್ರಿಯಾ

ಕೊರೊನಾ ಲಾಕ್ ಡೌನ್ ಇದ್ದರೂ ಮದುವೆ ಸಮಾರಂಭಗಳಿಗೆ ಬ್ರೇಕ್ ಬಿದ್ದಿಲ್ಲ. ಮೇ ತಿಂಗಳಲ್ಲಿ ನಿಗದಿಯಾದ ಮದುವೆಗಳು ನಡೆಯುತ್ತಿವೆ. ಮಾಮುಲಿಯಂತೆ, ಜನ ಜಂಗುಳಿ, ಅದ್ದೂರಿ ಸಂಭ್ರಮ ಇಲ್ಲದಿದ್ದರೂ, ಸುರಕ್ಷತೆಯ ಕ್ರಮಗಳ ಜೊತೆಗೆ ನಿಗದಿಯಾದ ಮುಹೂರ್ತಕ್ಕೆ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

Recommended Video

ಶೈನ್ ಶೆಟ್ಟಿ ಬರ್ತ್ ಡೇಗೆ ದೀಪಿಕಾ ದಾಸ್ ಕೊಟ್ಟ ಗಿಫ್ಟ್ ಏನು ಗೊತ್ತಾ? | Shine Shetty & Deepika Das

ಸದ್ಯ ಕಿರುತೆರೆಯ ಖ್ಯಾತ ನಟಿ ಸುಪ್ರಿಯಾ ರಾವ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ ವಿಜಯ್ ಜೊತೆ ಸುಪ್ರಿಯಾ ಹಸೆಮಣೆ ಏರಿದ್ದಾರೆ. ಸುಪ್ರಿಯಾ ಎನ್ನುವುದಕ್ಕಿಂತ ಮಗಳು ಜಾನಕಿ ಧಾರಾವಾಹಿಯ ಸಂಜನಾ ಅಂದರೆ ಎಲ್ಲರಿಗೂತ್ತಾಗುತ್ತೆ. ಸಂಜನಾ ಪಾತ್ರದ ಮೂಲಕ ಸುಪ್ರಿಯಾ ಕನ್ನಡಿಗರ ಮನೆಮಾತಾಗಿದ್ದಾರೆ.

ಸುಪ್ರಿಯಾ ಮೂಲತಹ ಶಿವಮೊಗ್ಗದವರು. ಪತಿ ವಿಜಯ್ ಚಿತ್ರದುರ್ಗದವರು. ಇವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ಪತಿ ವಿಜಯ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ವರ್ಷಗಳಿಂದ ಪ್ರೀತಿಸುತ್ತಿದ್ದ ಸುಪ್ರಿಯಾ ಮತ್ತು ವಿಜಯ್ ಚಿತ್ರದುರ್ಗದಲ್ಲಿ ಗುರುಹಿರಿಯ ಆಶೀರ್ವಾದ ನಡುವೆ ಸಪ್ತಪದಿ ತುಳಿದಿದ್ದಾರೆ.

Magalu Janaki Fame Artist Supriya Rao Gets Marriage With Vijay

ಕೊರೊನಾ ವೈರಸ್ ಹಾವಳಿಯ ಪರಿಣಾಮ ಇವರ ಮದುವೆ ತೀರ ಆಪ್ತರು ಮಾತ್ರ ಭಾಗಿಯಾಗಿದ್ದರು. ಕುಟುಂಬ ಕೆಲವೇ ಕೆಲವು ಸದಸ್ಯರು ಹಾಜರಾಗಿ ನವ ಜೋಡಿಗೆ ಶುಭಹಾರೈಸಿದ್ದಾರೆ.

Magalu Janaki Fame Artist Supriya Rao Gets Marriage With Vijay

ನಟಿ ಸುಪ್ರಿಯಾ ಮೂಲತಹ ರಂಗಭೂಮಿ ಹಿನ್ನಲೆಯಿಂದ ಬಂದವರು. ಸುಪ್ರಿಯಾ ತಂದೆ ಕೂಡ ರಂಗಭೂಮಿ ಕಲಾವಿದರು. ತಾಯಿ ಸುಗಮ ಸಂಗೀತ ಕಲಾವಿದೆ. ಅಭಿನಯ ತಂದೆಯಿಂದ ಬಂದ ಬಳುವಳಿ. ಸುಪ್ರಿಯಾ ಚಿಕ್ಕ ವಯಸ್ಸಿನಲ್ಲಿದ್ದಾಗಲೆ ತಂದೆಯನ್ನು ಕಳೆದುಕೊಳ್ಳುತ್ತಾರೆ. ಸುಪ್ರಿಯಾ ಅದ್ಭುತ ನಟಿಮಾತ್ರವಲ್ಲ ಗಾಯಕಿ ಕೂಡ ಹೌದು. ಸದ್ಯ ಹೊಸ ಬಾಳಿಗೆ ಕಾಲಿಟ್ಟಿರುವ ಸುಪ್ರಿಯಾಗೆ ಕಿರುತೆರೆ ಸ್ಟಾರ್ಸ್ ಶುಭಹಾರೈಸುತ್ತಿದ್ದಾರೆ.

More from Filmibeat

English summary
Kannada serial Magalu Janaki fame Artist Supriya rao gets marriage with Vijay.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X