ಸತ್ಯ ಗೊತ್ತಿದ್ದರೂ ಮುಚ್ಚಿಟ್ಟ ತಾಯಿ: ನೊಂದ 'ಮಗಳು ಜಾನಕಿ'!
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಗಳು ಜಾನಕಿ' ಧಾರಾವಾಹಿ ರೋಚಕ ಘಟ್ಟ ತಲುಪಿದೆ.
ಅಪ್ಪ-ಅಮ್ಮನ ಮಾತನ್ನು ನಂಬಿ ನಿರಂಜನ್ ಧಾವಳಿಯನ್ನ ಮದುವೆ ಆದ ಜಾನಕಿಗೆ ಆತ ಐಎಎಸ್ ಆಫೀಸರ್ ಅಲ್ಲ, ಸುಳ್ಳು ಹೇಳಿ, ಮೋಸ ಮಾಡಿ, ಮದುವೆ ಆಗಿದ್ದಾನೆ ಎಂಬ ಸತ್ಯ ಅರಿವಾಗಿದೆ.
ನಿರಂಜನ್ ಮಾಡಿದ ಮೋಸದಿಂದ ನೊಂದ ಜಾನಕಿ ರಾತ್ರೋರಾತ್ರಿ ಮನೆ ಬಿಟ್ಟು ಸಿ.ಎಸ್.ಪಿ ಮನೆ ಸೇರಿದ್ರು. ಕೊನೆಗೆ ತಾಯಿಯ ಮಾತಿಗೆ ಬೆಲೆ ಕೊಟ್ಟು ಮನೆಗೆ ವಾಪಸ್ ಬಂದ ಜಾನಕಿ, ನಿರಂಜನ್ ಗೆ ವಿಚ್ಛೇದನ ಕೊಟ್ಟು ಆತನ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಮನಸ್ಸು ಮಾಡಿದ್ದಾರೆ.
ಅತ್ತ ''ನಿರಂಜನ್ ಮೋಸಗಾರ ಅಲ್ಲ, ಮದುವೆಗೂ ಮುನ್ನವೇ ನನಗೆ ಸತ್ಯ ಗೊತ್ತಿತ್ತು'' ಅಂತ ತಾಯಿ ರಶ್ಮಿ ಹೇಳಿದ್ದು ಜಾನಕಿಗೆ ಆಘಾತ ನೀಡಿದೆ. ಸತ್ಯ ಗೊತ್ತಿದ್ದರೂ ಮಗಳ ಬಾಳನ್ನು ಹಾಳು ಮಾಡಿದ ತಾಯಿ ರಶ್ಮಿ ವಿರುದ್ಧ ಜಾನಕಿ ಮುನಿಸಿಕೊಂಡಿದ್ದಾರೆ. ಮುಂದೆ ಓದಿರಿ...

ತಾಯಿ ರಶ್ಮಿ ವಿರುದ್ಧ ಜಾನಕಿಗೆ ಸಿಟ್ಟು
ನಿರಂಜನ್ ಐಎಎಸ್ ಆಫೀಸರ್ ಅಲ್ಲ ಎಂಬ ಸತ್ಯ ಮದುವೆಗೂ ಮುನ್ನವೇ ರಶ್ಮಿ ಭಾರ್ಗಿಗೆ ಗೊತ್ತಿತ್ತು. ಹೀಗಿದ್ದರೂ, ಅನಿವಾರ್ಯ ಕಾರಣಗಳಿಂದ ಜಾನಕಿಗೆ ರಶ್ಮಿ ಭಾರ್ಗಿ ಸತ್ಯ ತಿಳಿಸಲಿಲ್ಲ. ಹೀಗಾಗಿ ತಾಯಿ ರಶ್ಮಿ ಬಗ್ಗೆ ಜಾನಕಿ ಬೇಸರಗೊಂಡಿದ್ದಾರೆ.

ಇಕ್ಕಟ್ಟಿನಲ್ಲಿ ಸಿಲುಕಿದ ರಶ್ಮಿ ಭಾರ್ಗಿ
ಚಂದು ಭಾರ್ಗಿ ಮಾಡಿರುವ ಮಾಸ್ಟರ್ ಪ್ಲಾನ್ ರಶ್ಮಿ ಭಾರ್ಗಿಗೆ ತಿಳಿದಿಲ್ಲ. ಮಗಳ ಬಾಳು ಹಾಳಾಗಬಾರದು ಎಂದುಕೊಂಡು ಮದುವೆ ಮಾಡಲು ಮುಂದಾದ ರಶ್ಮಿ ಭಾರ್ಗಿ ಇದೀಗ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

ವಿಚ್ಛೇದನ ನೀಡಲು ಮುಂದಾದ ಜಾನಕಿ
ಮೋಸ ಮಾಡಿ ಮದುವೆ ಆದ ನಿರಂಜನ್ ಗೆ ವಿಚ್ಛೇದನ ನೀಡಲು ಜಾನಕಿ ಮನಸ್ಸು ಮಾಡಿದ್ದಾರೆ. ವಿಚ್ಛೇದನ ನೀಡಲು ನಿರಂಜನ್ ಕೂಡ ಒಪ್ಪಿಗೆ ಸೂಚಿಸಿದ್ದಾರೆ. ನಿರಂಜನ್ ವಿರುದ್ಧ ಆರೋಪ ಕೇಳಿಬಂದರೂ, ಸತ್ಯವನ್ನ ಮಾತ್ರ ನಿರಂಜನ್ ಬಾಯ್ಬಿಟ್ಟಿಲ್ಲ.

ಚಂದು ಭಾರ್ಗಿ ಮುಖವಾಡ ಬಯಲು ಯಾವಾಗ.?
ಜಾನಕಿಗೆ ಇಷ್ಟೆಲ್ಲ ಮೋಸ ಆಗಲು ನೇರ ಕಾರಣ ಚಂದು ಭಾರ್ಗಿ. ಇಷ್ಟವಿಲ್ಲದಿದ್ದರೂ, ಬ್ಲಾಕ್ ಮೇಲ್ ಮಾಡಿ ನಿರಂಜನ್ ನ ಜಾನಕಿಗೆ ಕೊಟ್ಟು ಮದುವೆ ಮಾಡಿದ್ದು ಚಂದು ಭಾರ್ಗಿ. ಆದರೂ, ಸದ್ಯ ವಿಲನ್ ಆಗಿರುವಾಕೆ ತಾಯಿ ರಶ್ಮಿ ಭಾರ್ಗಿ. ಚಂದು ಭಾರ್ಗಿ ಮುಖವಾಡ ಎಂದು ಬಯಲಾಗುತ್ತೋ, ನೋಡಬೇಕು.


Click it and Unblock the Notifications











