ತಂದೆ ಸಿ.ಎಸ್.ಪಿ ಮುಂದೆ 'ಮಗಳು ಜಾನಕಿ' ಮದುವೆ.!

By Harshitha

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಗಳು ಜಾನಕಿ' ಧಾರಾವಾಹಿ ಇದೀಗ ರೋಚಕ ಘಟ್ಟ ತಲುಪಿದೆ. ಇಪ್ಪತ್ತು ವರ್ಷಗಳ ಹಿಂದೆ ವಿಚ್ಛೇದನ ಕೊಟ್ಟು ಪುಟಾಣಿ ಜಾನಕಿ ಜೊತೆಗೆ ರಶ್ಮಿ ಹೊರಟು ಹೋದ್ಮೇಲೆ, 'ಮಗಳು ಜಾನಕಿ'ಯ ಮುಖ ದರ್ಶನ ತಂದೆ ಸಿ.ಎಸ್.ಪಿಗೆ ಆಗೇ ಇಲ್ಲ.

ಜಾನಕಿ ಹೇಗಿದ್ದಾಳೆ, ಹೇಗೆ ಕಾಣ್ತಾಳೆ ಅನ್ನೋದು ಸಿ.ಎಸ್.ಪಿಗೆ ಗೊತ್ತೇ ಇಲ್ಲ. ಇತ್ತ ತನ್ನ ನಿಜವಾದ ತಂದೆ ಕ್ರಿಮಿನಲ್ ಲಾಯರ್ ಚಂದ್ರಶೇಖರ್ ಪ್ರಸಾದ್ (ಸಿ.ಎಸ್.ಪಿ) ಅನ್ನೋ ಸತ್ಯ ಕೂಡ ಜಾನಕಿಗೆ ಅರಿವಿಲ್ಲ.

ಹೀಗಿರುವಾಗಲೇ, ವಿಧಿ ಲಿಖಿತ ಎಂಬಂತೆ 'ಮಗಳು ಜಾನಕಿ' ಹಾಗೂ ತಂದೆ ಸಿ.ಎಸ್.ಪಿ ಮುಖಾಮುಖಿ ಆಗಿದ್ದಾರೆ. ಜಾನಕಿಯ ಮದುವೆ ಮಾಡಿಸಲು ಸಿ.ಎಸ್.ಪಿ ಮನೆಗೆ ಜಾನಕಿ-ಆನಂದ್ ರನ್ನ ಸ್ನೇಹಿತೆ ಲಕ್ಷ್ಮಿ ಕರೆದುಕೊಂಡು ಬಂದಿದ್ದಾಳೆ.

ಒಳ್ಳೆ ಹುಡುಗನ ಜೊತೆಗೆ ಜಾನಕಿ ಮದುವೆ ಆದರೆ ಸಾಕು ಎಂಬುದು ಸಿ.ಎಸ್.ಪಿ ಬಯಕೆ ಆಗಿತ್ತು. ಆ ಬಯಕೆ ಇದೀಗ ಸಿ.ಎಸ್.ಪಿ ಸಮಕ್ಷಮದಲ್ಲಿಯೇ ನೆರವೇರಲಿದೆ. ಮುಂದೆ ಓದಿರಿ...

ದೂರ ಇರಬೇಕು ಅಂದುಕೊಂಡರೂ ಆಗುತ್ತಿಲ್ಲ.!

ದೂರ ಇರಬೇಕು ಅಂದುಕೊಂಡರೂ ಆಗುತ್ತಿಲ್ಲ.!

ಚಂದು ಭಾರ್ಗಿ ಹಾಗೂ ಕುಟುಂಬದಿಂದ ದೂರ ಇರಬೇಕು ಅಂತ ಸಿ.ಎಸ್.ಪಿ ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯ ಆಗುತ್ತಿಲ್ಲ. ಚಂದು ಭಾರ್ಗಿ ವಿರುದ್ಧ ಒಂದಲ್ಲಾ ಒಂದು ಕೇಸ್ ಸಿ.ಎಸ್.ಪಿ ರನ್ನ ಹುಡುಕಿಕೊಂಡು ಬರುತ್ತಿದೆ. ಇದೀಗ, ಜಾನಕಿ ಕೂಡ ಸಿ.ಎಸ್.ಪಿ ರನ್ನ ಅರಸಿ ಬಂದಿದ್ದಾಳೆ.

ಅಂತೂ ಸಿ.ಎಸ್.ಪಿ ಮನೆ ಸೇರಿದ ಜಾನಕಿ

ಅಂತೂ ಸಿ.ಎಸ್.ಪಿ ಮನೆ ಸೇರಿದ ಜಾನಕಿ

ಕುಟುಂಬದವರ ಕಣ್ತಪ್ಪಿಸಿ, ದಾರಿ ಮಧ್ಯೆ ಎದುರಾದ ಗಂಡಾಂತರಗಳಿಂದ ತಪ್ಪಿಸಿಕೊಂಡು ಜಾನಕಿ-ಆನಂದ್ ರನ್ನ ಸಿ.ಎಸ್.ಪಿ ಮನೆಗೆ ತಲುಪಿಸುವಲ್ಲಿ ಗೆಳತಿ ಲಕ್ಷ್ಮಿ ಯಶಸ್ವಿ ಆದಳು.

ಸಿ.ಎಸ್.ಪಿ ಮುಂದೆ ಸುಳ್ಳು.!

ಸಿ.ಎಸ್.ಪಿ ಮುಂದೆ ಸುಳ್ಳು.!

ಸಿ.ಎಸ್.ಪಿಗೂ ಚಂದು ಭಾರ್ಗಿಗೂ ಆಗ್ಬರಲ್ಲ ಎಂಬ ಸತ್ಯ ಜಾನಕಿಗೆ ಗೊತ್ತು. ಹೀಗಾಗಿ ತಾನು ಚಂದು ಭಾರ್ಗಿ ಮಗಳು ಅಂತ ಸಿ.ಎಸ್.ಪಿ ಹೇಳದೇ ಇರಲು ಜಾನಕಿ ನಿರ್ಧರಿಸಿದಳು. ಅದರಂತೆ ಸಿ.ಎಸ್.ಪಿ ಮುಂದೆ ಲಕ್ಷ್ಮಿ ಸುಳ್ಳು ಹೇಳಿದಳು.

ಕರುಳು ಅರಿಯದೆ.?

ಕರುಳು ಅರಿಯದೆ.?

''ಕಣ್ಣರಿಯದಿದ್ದರೇನು...ಕರುಳು ಅರಿಯದೇ.?'' ಎಂಬ ಮಾತಿನಂತೆ ಜಾನಕಿಯನ್ನ ನೋಡಿದ ಕೂಡಲೆ ತಂದೆ ಸಿ.ಎಸ್.ಪಿ ಮನದಲ್ಲಿ ಏನೋ ಒಂಥರಾ ತಳಮಳ. ''ನನ್ನ ಹೆಸರು ಚಾರುಲತಾ'' ಅಂತ ಜಾನಕಿ ಸುಳ್ಳು ಹೇಳಿದ್ದು ಸಿ.ಎಸ್.ಪಿಗೆ ಗೊತ್ತಾಯಿತು.

ಸಿ.ಎಸ್.ಪಿ ಮನೆಗೆ ರಶ್ಮಿ

ಸಿ.ಎಸ್.ಪಿ ಮನೆಗೆ ರಶ್ಮಿ

ಇತ್ತ ಜಾನಕಿ ಹಾಗೂ ಆನಂದ್, ಸಿ.ಎಸ್.ಪಿ ಮನೆಗೆ ಹೋಗಿರುವುದು ಚಂದು ಭಾರ್ಗಿ ಹಾಗೂ ರಶ್ಮಿಗೆ ಖಾತ್ರಿ ಆಗಿದೆ. ಹೀಗಾಗಿ, ನೇರವಾಗಿ ಹೋಗಿ ಸಿ.ಎಸ್.ಪಿ ಜೊತೆಗೆ ಮಾತನಾಡಲು ರಶ್ಮಿಗೆ ಚಂದು ಭಾರ್ಗಿ ಸೂಚಿಸಿದ್ದಾರೆ.

ಮುಂದೇನಾಗುತ್ತೋ.?

ಮುಂದೇನಾಗುತ್ತೋ.?

ಅತ್ತ ಜಾನಕಿ, ಸಿ.ಎಸ್.ಪಿ ಮುಂದೆ ಸುಳ್ಳು ಹೇಳಿರಬಹುದು. ಆದ್ರೆ, ರಶ್ಮಿ ಬಂದ್ಮೇಲೆ ಸಿ.ಎಸ್.ಪಿಗೆ ಸತ್ಯ ಗೊತ್ತಾಗಲೇಬೇಕಲ್ಲವೇ.? ಸಿ.ಎಸ್.ಪಿ ಸಮ್ಮುಖದಲ್ಲಿ 'ಮಗಳು ಜಾನಕಿ' ಮದುವೆ ನಡೆಯುತ್ತಾ.? ಜಾನಕಿಗೆ ಸತ್ಯ ಗೊತ್ತಾಗುತ್ತಾ.? ಉತ್ತರ ಇಂದಿನ ಸಂಚಿಕೆಯಲ್ಲಿ....

More from Filmibeat

English summary
TN Seetharam's 'Magalu Janaki' written update: Janaki to marry Anand with the help of her father CSP.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X