ನಿರಂಜನ್ ಬಂಡವಾಳ ಬಯಲಾಯಿತು: 'ಮಗಳು ಜಾನಕಿ'ಗೆ ಘೋರ ಸತ್ಯ ತಿಳಿಯಿತು!

Recommended Video

Magalu Janaki : ಮಗಳು ಜಾನಕಿಗೆ ಗಂಡ ನಿರಂಜನ್ ಬಗ್ಗೆ ಸತ್ಯ ಗೊತ್ತಾಯ್ತು | ಮುಂದೇನು? | FILMIBEAT KANNADA

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಗಳು ಜಾನಕಿ' ಧಾರಾವಾಹಿ ರೋಚಕ ಘಟ್ಟ ತಲುಪಿದೆ. ಅಪ್ಪ-ಅಮ್ಮನ ಮಾತನ್ನು ನಂಬಿ ನಿರಂಜನ್ ಧಾವಳಿ ಎಂಬ ಐಎಎಸ್ ಆಫೀಸರ್ ರನ್ನ ಮಗಳು ಜಾನಕಿ ಮದುವೆ ಆಗಿದ್ದರು.

ಮದುವೆ ಆದ ಕೆಲವೇ ದಿನಗಳಲ್ಲಿ ನಿರಂಜನ್ ಧಾವಳಿ ಐಎಎಸ್ ಆಫೀಸರ್ ಅಲ್ಲ ಎಂಬ ಸತ್ಯ ಜಾನಕಿಗೆ ಗೊತ್ತಾಗಿದೆ. ನಿರಂಜನ್ ಮಾಡಿದ ಮೋಸ ಜಾನಕಿ ಅರಿವಿಗೆ ಬಂದಿದೆ.

ಅತ್ತ ಮನೆಯಿಂದ ಹೊರಗೆ ನಡೆಯಲು ಪ್ಲಾನ್ ಮಾಡಿದ್ದ ಜಾನಕಿಗೆ ಇದೀಗ ದಿಕ್ಕು ತೋಚದಂತಾಗಿದೆ. ಹೀಗಾಗಿ, ರಾತ್ರೋರಾತ್ರಿ ಜಾನಕಿ ಮನೆಬಿಟ್ಟು ಹೋಗಿದ್ದಾರೆ. ಮನೆಯಲ್ಲಿ ಜಾನಕಿ ಇಲ್ಲದಿರುವುದಕ್ಕೆ ನಿರಂಜನ್ ಹಾಗೂ ತಾಯಿ ರಶ್ಮಿ ಗಾಬರಿ ಆಗಿದ್ದಾರೆ. ಮುಂದೆ ಓದಿರಿ...

ಮುಖ್ಯಮಂತ್ರಿ ಕಛೇರಿಯಲ್ಲಿ ಸತ್ಯ ಬಯಲು

ಮುಖ್ಯಮಂತ್ರಿ ಕಛೇರಿಯಲ್ಲಿ ಸತ್ಯ ಬಯಲು

ತವರು ಮನೆಯಲ್ಲಿ ಇರಲು ಇಷ್ಟಪಡದ ಜಾನಕಿ, ನಿರಂಜನ್ ಗೆ ವಾಷಿಂಗ್ಟನ್ ನಲ್ಲೇ ಪೋಸ್ಟ್ ಹಾಕಿಸಿಕೊಂಡು ಅಲ್ಲೇ ಸೆಟಲ್ ಆಗುವ ಪ್ಲಾನ್ ಮಾಡಿದ್ದರು. ಅದಕ್ಕಾಗಿ ಮುಖ್ಯಮಂತ್ರಿಗಳ ಕಛೇರಿಗೆ ಜಾನಕಿ ತೆರಳಿದ್ದರು. ಆದ್ರೆ, ಅಲ್ಲಿ ನಿರಂಜನ್ ಹೆಸರು ಐಎಎಸ್ ಆಫೀಸರ್ ಗಳ ಪಟ್ಟಿಯಲ್ಲಿ ಇಲ್ಲ ಎಂಬ ಸಂಗತಿ ಜಾನಕಿಗೆ ತಿಳಿದುಬಂತು.

ಪಾರ್ಕ್ ನಲ್ಲಿ ಬನ್ ತಿನ್ನುತ್ತಿರುವಾಗಲೇ ಡೌಟ್ ಬಂತು.!

ಪಾರ್ಕ್ ನಲ್ಲಿ ಬನ್ ತಿನ್ನುತ್ತಿರುವಾಗಲೇ ಡೌಟ್ ಬಂತು.!

ಅಂದು ಪಾರ್ಕ್ ನಲ್ಲಿ ಟೀ-ಬನ್ ತಿನ್ನುತ್ತಿರುವಾಗಲೇ, ನಿರಂಜನ್ ಮೇಲೆ ಜಾನಕಿಗೆ ಡೌಟ್ ಬಂದಿತ್ತು. ಅದೀಗ ನಿಜ ಆಯ್ತು. ನಿರಂಜನ್ ಐಎಎಸ್ ಆಫೀಸರ್ ಅಲ್ಲ ಎಂಬ ಸತ್ಯ ತಿಳಿದು ಜಾನಕಿ ಆಘಾತಗೊಂಡರು. ನಿರಂಜನ್ ಜೊತೆಗೆ ಬೇಸರದಿಂದ ಮಾತನಾಡಿದರು.

ಮನೆ ಬಿಟ್ಟು ಹೋದ ಜಾನಕಿ

ಮನೆ ಬಿಟ್ಟು ಹೋದ ಜಾನಕಿ

ತಂದೆ ಚಂದು ಭಾರ್ಗಿ ಬಗ್ಗೆ ಅದಾಗಲೇ ನೊಂದಿರುವ ಜಾನಕಿಗೆ ನಿರಂಜನ್ ಬಗ್ಗೆ ಸತ್ಯ ತಿಳಿದು ಶಾಕ್ ಆಗಿದ್ದಾರೆ. ಬೇರೆ ದಾರಿ ಕಾಣದೆ, ರಾತ್ರೋರಾತ್ರಿ ಜಾನಕಿ ಮನೆಯಿಂದ ಹೊರಗೆ ನಡೆದಿದ್ದಾರೆ. ನಾಪತ್ತೆ ಆಗಿರುವ ಜಾನಕಿಯನ್ನ ಹುಡುಕುವ ಪ್ರಯತ್ನ ನಡೆಯುತ್ತಿದೆ.

ದೂರು ಕೊಡಲು ಹೋದ ಅತ್ತೆ-ಅಳಿಯ

ದೂರು ಕೊಡಲು ಹೋದ ಅತ್ತೆ-ಅಳಿಯ

ಜಾನಕಿ ಕಾಣೆಯಾಗಿರುವ ಬಗ್ಗೆ ದೂರು ಕೊಡಲು ರಶ್ಮಿ ಹಾಗೂ ನಿರಂಜನ್ ಪೊಲೀಸ್ ಠಾಣೆಗೆ ತೆರಳಿದ್ದಾರೆ. ದೂರು ಕೊಟ್ಟರೆ ತಮ್ಮ ಬಂಡವಾಳ ಬಯಲಿಗೆ ಬರುವುದು ಎಂದು ದೂರು ಕೊಡುವುದನ್ನು ತಪ್ಪಿಸಲು ಚಂದು ಭಾರ್ಗಿ ತೀರ್ಮಾನ ಮಾಡಿದ್ದಾರೆ. ಮುಂದೇನಾಗುತ್ತೋ, ನೋಡಬೇಕು.

More from Filmibeat

English summary
TN Seetharam's 'Magalu Janaki' written update: Janaki gets to know the truth about Niranjan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X