ಅಂತೂ ಇಂತೂ 'ಮಗಳು ಜಾನಕಿ'ಯ ಮದುವೆ ನಡೆದೇ ಹೋಯ್ತು.!

Recommended Video

ಸತ್ಯ ತಿಳಿದ್ರೆ ಜಾನಕಿ ಜೀವನ ಹೇಗೆ ಆಗುತ್ತೋ..! | Filmibeat Kannada

ಯಾವುದು ಆಗಬಾರದು ಅಂತ ವೀಕ್ಷಕರು ಅಂದುಕೊಂಡಿದ್ರೋ, ಅದು 'ಮಗಳು ಜಾನಕಿ' ಧಾರಾವಾಹಿಯಲ್ಲಿ ನಡೆದೇ ಹೋಯ್ತು. ಮುಗ್ಧ ಹುಡುಗಿ ಜಾನಕಿಗೆ ಮೋಸ ಆಗಬಾರದು ಅಂತ ವೀಕ್ಷಕರು ಬಯಸುತ್ತಿದ್ದರು. ಆದ್ರೆ, ಕಡೆಗೂ ಮೋಸದ ಮದುವೆಗೆ ಜಾನಕಿ ಕೊರಳೊಡ್ಡಿದಳು.

ಕಡೆ ಕ್ಷಣದಲ್ಲಿ ಜಾನಕಿ-ನಿರಂಜನ್ ಮದುವೆಯನ್ನ ಆನಂದ್ ಬೆಳಗೂರು ನಿಲ್ಲಿಸಬಹುದು ಎಂಬ ನಿರೀಕ್ಷೆ ವೀಕ್ಷಕರಲ್ಲಿ ಇತ್ತು. ಆದ್ರೆ, ಎಲ್ಲರ ನಿರೀಕ್ಷೆ ಹುಸಿಯಾಗಿದೆ. ಚಂದು ಭಾರ್ಗಿ ಪ್ಲಾನ್ ಪ್ರಕಾರ ಜಾನಕಿ-ನಿರಂಜನ್ ಮದುವೆ ಸರಾಗವಾಗಿ ನೆರವೇರಿದೆ.

ಮದುವೆ ನಡೆಯುತ್ತಿದ್ದ ಜಾಗಕ್ಕೆ ಆನಂದ್ ಬೆಳಗೂರು ಬಂದರೂ, ಮದುವೆ ನಿಲ್ಲಿಸಲಿಲ್ಲ. ಇತ್ತ ಸತ್ಯವನ್ನ ತಿಳಿದುಕೊಳ್ಳದೇ, ಅಪ್ಪ-ಅಮ್ಮನ ಮಾತು ನಂಬಿಕೊಂಡು ನಿರಂಜನ್ ನ ಜಾನಕಿ ಮದುವೆ ಆಗಿದ್ದಾಳೆ.

ನಿರಂಜನ್ ಐಎಎಸ್ ಆಫೀಸರ್ ಅಂತ ಜಾನಕಿ ಇನ್ನೂ ನಂಬಿಕೊಂಡಿದ್ದಾಳೆ. ನಿರಂಜನ್ ಬಗ್ಗೆ ಸತ್ಯ ಗೊತ್ತಿದ್ದರೂ, ಅದನ್ನ ಮಗಳಿಗೆ ಹೇಳುವ ಧೈರ್ಯವನ್ನ ತಾಯಿ ರಶ್ಮಿ ಮಾಡಲಿಲ್ಲ. 'ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬಂತೆ' ಬರೀ ಸುಳ್ಳುಗಳಿಂದಲೇ ಜಾನಕಿ ಮದುವೆ ಮುಗಿದಿದೆ. ಮುಂದೆ ಓದಿರಿ...

ಸರಳವಾಗಿ ನಡೆದ ಜಾನಕಿ ಮದುವೆ

ಸರಳವಾಗಿ ನಡೆದ ಜಾನಕಿ ಮದುವೆ

ಎಲ್ಲರಿಗೂ ಆಹ್ವಾನ ಕೊಟ್ಟು ಧಾಂ ಧೂಂ ಅಂತ ಮದುವೆ ಮಾಡಿದರೆ, ನಿರಂಜನ್ ಅಸಲಿಯತ್ತು ಯಾರ ಮುಂದಾದರೂ ಬಯಲಾಗಬಹುದು ಎಂಬ ಆತಂಕದಿಂದ ಮನೆಯಲ್ಲಿಯೇ ಜಾನಕಿ-ನಿರಂಜನ್ ಮದುವೆಯನ್ನ ಸರಳವಾಗಿ ಮಾಡಿ ಮುಗಿಸಿಬಿಟ್ಟರು ಚಂದು ಭಾರ್ಗಿ.

ತಾಳಿ ಕಟ್ಟುವ ವೇಳೆ ಬಂದ ಆನಂದ್

ತಾಳಿ ಕಟ್ಟುವ ವೇಳೆ ಬಂದ ಆನಂದ್

ಜಾನಕಿ ಕೊರಳಿಗೆ ನಿರಂಜನ್ ತಾಳಿ ಕಟ್ಟುವ ವೇಳೆಗೆ ಕರೆಕ್ಟಾಗಿ ಆನಂದ್ ಬೆಳಗೂರು ಎಂಟ್ರಿಕೊಟ್ಟರೂ, ಮದುವೆ ನಿಲ್ಲಿಸಲಿಲ್ಲ. ಸೆಕ್ಯೂರಿಟಿ ಕೂಡ ಟೈಟ್ ಆಗಿದ್ರಿಂದ ಆನಂದ್ ಗೆ ಮದುವೆ ಮನೆಯೊಳಗೆ ಪ್ರವೇಶ ಸಿಗಲಿಲ್ಲ.

ಅಂದುಕೊಂಡಿದ್ದನ್ನ ಸಾಧಿಸಿದ ಚಂದು ಭಾರ್ಗಿ

ಅಂದುಕೊಂಡಿದ್ದನ್ನ ಸಾಧಿಸಿದ ಚಂದು ಭಾರ್ಗಿ

ಜಾನಕಿ-ನಿರಂಜನ್ ಮದುವೆ ನಡೆಯಬೇಕು ಅನ್ನೋದು ಚಂದು ಭಾರ್ಗಿ ಪ್ಲಾನ್ ಆಗಿತ್ತು. ಅದನ್ನ ಚಂದು ಭಾರ್ಗಿ ಸಾಧಿಸಿಯೇಬಿಟ್ಟರು. ''ಜಾನಕಿ ಹಾಗೂ ನಿರಂಜನ್ ನನ್ನ ಎರಡು ಅಸ್ತ್ರಗಳು'' ಅಂತ ಚಂದು ಭಾರ್ಗಿ ಹೇಳಿದ್ದಾರೆ. ಈ ಅಸ್ತ್ರಗಳನ್ನ ಸಿ.ಎಸ್.ಪಿ ವಿರುದ್ಧ ಚಂದು ಭಾರ್ಗಿ ಹೇಗೆ ಪ್ರಯೋಗಿಸುತ್ತಾರೋ, ನೋಡಬೇಕು.

ಜಾನಕಿಗೆ ಸತ್ಯ ಗೊತ್ತಾದರೆ.?

ಜಾನಕಿಗೆ ಸತ್ಯ ಗೊತ್ತಾದರೆ.?

ನಿರಂಜನ್ ಐಎಎಸ್ ಆಫೀಸರ್ ಅಲ್ಲ... ಕೇವಲ ಪದವೀಧರ ಮಾತ್ರ ಅನ್ನೋದು ಜಾನಕಿಗೆ ಗೊತ್ತಾದರೆ ಆಕೆಯ ಪ್ರತಿಕ್ರಿಯೆ ಹೇಗಿರಬಹುದು.? ಚಂದು ಭಾರ್ಗಿಯ ಮಾಸ್ಟರ್ ಪ್ಲಾನ್ ಅರಿವಿಗೆ ಬಂದರೆ ಜಾನಕಿ ಏನು ಮಾಡಬಹುದು.? ಎಂಬುದೇ ಸದ್ಯದ ಕುತೂಹಲ.

More from Filmibeat

English summary
TN Seetharam's 'Magalu Janaki' written update: Janaki got married to Niranjan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X