ಗಂಟು-ಮೂಟೆ ಕಟ್ಟಿಕೊಂಡು ರಾತ್ರೋರಾತ್ರಿ ಮನೆಯಿಂದ ಹೊರಬಂದ ಮಗಳು 'ಜಾನಕಿ'.!

By Harshitha

ಮನೆಯಲ್ಲಿ ಮದುವೆ ಸಡಗರ ಜೋರಾಗಿದೆ. ಮೆಹಂದಿ ಶಾಸ್ತ್ರ, ಬಳೆ ಶಾಸ್ತ್ರಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಇನ್ನು ಮೂರು ದಿನ ಕಳೆದರೆ, ಜಾನಕಿ ಕೊರಳಿಗೆ ನಿರಂಜನ್ ಧಾವಳಿ ತಾಳಿ ಕಟ್ಟುತ್ತಾರೆ. ಆದ್ರೆ, ಹೀಗಾಗುವುದು ಜಾನಕಿಗೆ ಇಷ್ಟ ಇಲ್ಲ.

ಪ್ರೀತಿಸಿದ ಹುಡುಗ ಆನಂದ್ ಬೆಳಗೂರು ಯಾವುದೇ ತಪ್ಪು ಮಾಡಿಲ್ಲ ಅನ್ನೋದು ಮನದಟ್ಟಾದ್ಮೇಲೆ, ಆನಂದ್ ಬಾಳಸಂಗಾತಿ ಆಗಲು ಜಾನಕಿ ಸಮ್ಮತಿ ಸೂಚಿಸಿದ್ದಾಳೆ.

ತಂದೆಯನ್ನ ಒಪ್ಪಿಸಿ ಆನಂದ್ ಬೆಳಗೂರು ಮದುವೆ ಆಗಬೇಕು ಅನ್ನೋದು ಜಾನಕಿ ಆಸೆ. ಆದ್ರೆ, ಚಂದು ಭಾರ್ಗಿಗೆ ವಿಷಯ ಗೊತ್ತಾದರೆ ಸುಮ್ಮನೆ ಬಿಡಲ್ಲ ಎಂಬುದು ಆನಂದ್ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ದೂರ ಹೋಗಿ ಮದುವೆ ಆಗಿ, ಬಳಿಕ ವಾಪಸ್ ಬಂದು ಕ್ಷಮೆ ಕೇಳಲು ಆನಂದ್ ಪ್ಲಾನ್ ಮಾಡಿದ್ದಾರೆ.

ಆನಂದ್ ಪ್ಲಾನ್ ಗೆ ಲಕ್ಷ್ಮಿ ಕೂಡ ಸಾಥ್ ಕೊಟ್ಟಿರೋದ್ರಿಂದ, ಈಗಾಗಲೇ ನಿಶ್ಚಯ ಆಗಿರುವ ಮದುವೆಯನ್ನ ಮುರಿದುಕೊಳ್ಳಲು ಜಾನಕಿ ನಿರ್ಧಾರ ಮಾಡಿದ್ದಾಳೆ. ಅದರಂತೆ ರಾತ್ರೋರಾತ್ರಿ ಮನೆಯಿಂದ ಜಾನಕಿ ಹೊರಗೆ ಬಂದಿದ್ದಾಳೆ. ಮುಂದೆ ಓದಿರಿ...

ಮನೆಯಿಂದ ಹೊರಗೆ ಕಾಲಿಟ್ಟ ಜಾನಕಿ

ಮನೆಯಿಂದ ಹೊರಗೆ ಕಾಲಿಟ್ಟ ಜಾನಕಿ

ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ... ಮನೆಯಲ್ಲಿ ಎಲ್ಲರೂ ನಿದ್ದೆ ಮಾಡಿರುವ ಹೊತ್ತಲ್ಲಿ... ಪತ್ರವೊಂದನ್ನು ಬರೆದಿಟ್ಟು ಹೊರಗೆ ಬಂದಿದ್ದಾಳೆ 'ಮದುಮಗಳು ಜಾನಕಿ'.

ಗೊತ್ತಾಗದ ಹಾಗೆ ಬಟ್ಟೆ ಸಾಗಿಸಿದ ಲಕ್ಷ್ಮಿ

ಗೊತ್ತಾಗದ ಹಾಗೆ ಬಟ್ಟೆ ಸಾಗಿಸಿದ ಲಕ್ಷ್ಮಿ

ಗಂಟು-ಮೂಟೆ ಸಮೇತ ಜಾನಕಿ ಹೊರಗೆ ಬಂದರೆ, ಅನುಮಾನ ಮೂಡುತ್ತೆ ಎಂಬ ಕಾರಣಕ್ಕೆ ಜಾನಕಿ ಬಟ್ಟೆಗಳನ್ನೆಲ್ಲಾ ಮೊದಲೇ ಲಕ್ಷ್ಮಿ ತೆಗೆದುಕೊಂಡು ಹೋಗಿದ್ದಾಳೆ.

ಮನೆಯಲ್ಲಿ ಸುಳ್ಳು ಹೇಳಿ ಹೊರಟ ಆನಂದ್

ಮನೆಯಲ್ಲಿ ಸುಳ್ಳು ಹೇಳಿ ಹೊರಟ ಆನಂದ್

''ಭೋಪಾಲ್ ನಲ್ಲಿ ಸ್ನೇಹಿತನ ಮದುವೆ ಇದೆ. ಹೀಗಾಗಿ ಹದಿನೈದು ದಿನಗಳ ಕಾಲ ಅಲ್ಲೇ ಇರುವೆ. ಅಷ್ಟರಲ್ಲಿ ಜಾನಕಿ ಮದುವೆ ಮುಗಿದಿರುತ್ತದೆ'' ಎಂದು ಸುಳ್ಳು ಹೇಳಿ ಬಟ್ಟೆ ಪ್ಯಾಕ್ ಮಾಡಿಕೊಂಡು ಆನಂದ್ ಮನೆಯಿಂದ ಹೊರಗೆ ಬಂದಿದ್ದಾರೆ.

ಸಿ.ಎಸ್.ಪಿ ಮುಂದೆ 'ಮಗಳ ಜಾನಕಿ' ಮದುವೆ.!

ಸಿ.ಎಸ್.ಪಿ ಮುಂದೆ 'ಮಗಳ ಜಾನಕಿ' ಮದುವೆ.!

ಚಂದು ಭಾರ್ಗಿಯನ್ನ ಎದುರಿಸುವ ತಾಕತ್ತು ಇರುವುದು ಸಿ.ಎಸ್.ಪಿಗೆ ಮಾತ್ರ ಅನ್ನೋ ಸತ್ಯ ಲಕ್ಷ್ಮಿಗೆ ಗೊತ್ತು. ಹೀಗಾಗಿ, ಸಿ.ಎಸ್.ಪಿ ಸಮಕ್ಷಮದಲ್ಲಿ ಜಾನಕಿ-ಆನಂದ್ ಮದುವೆ ಮಾಡಿಸಲು ಲಕ್ಷ್ಮಿ ಮುಂದಾಗಿದ್ದಾಳೆ.

ನಡೆಯುತ್ತಾ ಆನಂದ್-ಜಾನಕಿ ಮದುವೆ.?

ನಡೆಯುತ್ತಾ ಆನಂದ್-ಜಾನಕಿ ಮದುವೆ.?

ಪರಸ್ಪರ ಪ್ರೀತಿಸಿರುವ ಆನಂದ್-ಜಾನಕಿ ಮದುವೆ ನಡೆಯುತ್ತಾ.? ಇಲ್ಲ, ಅಷ್ಟರಲ್ಲಿ ಚಂದು ಭಾರ್ಗಿ ತಡೆಯುತ್ತಾರಾ.? ಚಂದು ಭಾರ್ಗಿ ಮಾಡುತ್ತಿರುವ ಮೋಸ ಸಿ.ಎಸ್.ಪಿಗೆ ಅರಿವಾಗುತ್ತಾ.? ಕಾದು ನೋಡಬೇಕು.

More from Filmibeat

English summary
TN Seetharam's 'Magalu Janaki' written update: Janaki moves out of the house to marry Anand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X