ಮಗಳ ಮದುವೆ ನಡೆಯಲಿಲ್ಲ: ಜಾನಕಿ ಕಣ್ಣೀರು ಹಾಕಲಿಲ್ಲ.!
ದೇವಸ್ಥಾನದಲ್ಲಿ ಇನ್ನೇನು ಜಾನಕಿಯ ಮದುವೆ ನಡೆದೇ ಹೋಯ್ತು ಎನ್ನುವಷ್ಟರಲ್ಲಿ, ಚಂದು ಭಾರ್ಗಿ ಅಂಡ್ ಫ್ಯಾಮಿಲಿ ದೇವಾಲಯಕ್ಕೆ ಹಾಜರ್ ಆಯ್ತು. ಜಾನಕಿ-ಆನಂದ್ ಮದುವೆಗೆ ಚಂದು ಭಾರ್ಗಿ ಅಡ್ಡಿ ಪಡಿಸುತ್ತಾರೆ ಅಂತಲೇ ಎಲ್ಲರೂ ಭಾವಿಸಿದ್ದರು. ಆದ್ರೆ, ಅಲ್ಲಾಗಿದ್ದೇ ಬೇರೆ.!
''ಜಾನಕಿ-ಆನಂದ್ ಮದುವೆಗೆ ನನ್ನ ಒಪ್ಪಿಗೆ ಇದೆ'' ಅಂತ ಚಂದು ಭಾರ್ಗಿ ಹೇಳಿದ್ದಕ್ಕೆ ಜಾನಕಿ ಹಾಗೂ ಆನಂದ್ ಮೊಗದಲ್ಲಿ ಮಂದಹಾಸ ಮೂಡಿತು. ಆದ್ರೆ, ಆ ಮಂದಹಾಸ ಜಾನಕಿ ಮುಖದ ಮೇಲೆ ಜಾಸ್ತಿ ಹೊತ್ತು ಇರಲಿಲ್ಲ. ಯಾಕಂದ್ರೆ, ಮದುವೆ ನಡೆಯುತ್ತಿದ್ದ ಜಾಗಕ್ಕೆ ಕಾತ್ಯಾಯಿನಿ ಮೆನನ್ ತಂದೆ ಕೂಡ ಬಂದಿದ್ದರು.!
''ಆನಂದ್ ಮುಗ್ಧ ಹುಡುಗ ಅಲ್ಲ. ಆತನಿಗೆ ಸಿಕ್ಕಿರುವ ಬೇಲ್ ಕ್ಯಾನ್ಸಲ್ ಮಾಡಿಸುವೆ'' ಅಂತ ಕಾತ್ಯಾಯಿನಿ ಮೆನನ್ ತಂದೆ ಹೇಳಿದ್ದು ಜಾನಕಿಗೆ ಬೇಸರ ತಂತು.
ಇಷ್ಟೆಲ್ಲಾ ನಡೆಯುತ್ತಿರುವಾಗಲೇ, ಆನಂದ್ ಇದಕ್ಕಿದ್ದಂತೆ ನಾಪತ್ತೆ ಆದರು. ಜಾನಕಿಯ ಇಷ್ಟದ ಮದುವೆ ನಡೆಯಲಿಲ್ಲ. ಅದಕ್ಕೆ ಆಕೆ ಕಣ್ಣೀರೂ ಹಾಕಲಿಲ್ಲ.! ಮುಂದೆ ಓದಿರಿ...

ಇದಕ್ಕೆಲ್ಲ ಕಾರಣ ಶ್ಯಾಮಲಾ.!
ಜಾನಕಿ-ಆನಂದ್ ಮದುವೆ ಆಗುತ್ತಿರುವ ಸ್ಥಳ ಸಿ.ಎಸ್.ಪಿ ಹಾಗೂ ಶ್ಯಾಮಲಾಗೆ ಬಿಟ್ಟರೆ, ಬೇರೆ ಯಾರಿಗೂ ಗೊತ್ತಿರಲಿಲ್ಲ. ರಶ್ಮಿ ಎಷ್ಟೇ ಒತ್ತಾಯ ಮಾಡಿ ಕೇಳಿದರೂ, ಸಿ.ಎಸ್.ಪಿ ಬಾಯಿ ಬಿಟ್ಟಿರಲಿಲ್ಲ. ಆದ್ರೆ, ಕೊನೆಗೆ ಮಗಳ ಮದುವೆಯನ್ನ ತಾಯಿ ನೋಡಲಿ ಎಂದು ರಶ್ಮಿಗೆ ಫೋನ್ ಮಾಡಿ ಜಾನಕಿ-ಆನಂದ್ ಮದುವೆ ಆಗುವ ಸ್ಥಳದ ಬಗ್ಗೆ ಶ್ಯಾಮಲಾ ಸುಳಿವು ಕೊಟ್ಟರು.

ಇಡೀ ಕುಟುಂಬ ಹಾಜರ್.!
ಜಾನಕಿ-ಆನಂದ್ ಮದುವೆಯಲ್ಲಿ ಪಾಲ್ಗೊಳ್ಳಲು ರಶ್ಮಿ, ಚಂದು ಭಾರ್ಗಿ, ಚಂಚಲ ಹಾಗೂ ಆನಂದ್ ತಂದೆ-ತಾಯಿ ಕೂಡ ದೇವಸ್ಥಾನಕ್ಕೆ ಬಂದರು. ಜಾನಕಿ-ಆನಂದ್ ಮದುವೆಗೆ ಚಂದು ಭಾರ್ಗಿ ಸಮ್ಮತಿ ಸೂಚಿಸಿದರು.

ಕಾತ್ಯಾಯಿನಿ ಮೆನನ್ ತಂದೆ ಪ್ರತ್ಯಕ್ಷ
ಜಾನಕಿ-ಆನಂದ್ ಮದುವೆ ನಡೆಯುತ್ತಿದ್ದ ಜಾಗದಲ್ಲಿ ಕಾತ್ಯಾಯಿನಿ ಮೆನನ್ ತಂದೆ ಕೂಡ ಪ್ರತ್ಯಕ್ಷರಾದರು. ಆನಂದ್ ಗೆ ಸಿಕ್ಕಿರುವ ಬೇಲ್ ಕ್ಯಾನ್ಸಲ್ ಮಾಡಿಸುವ ಬಗ್ಗೆ ಮಾತನಾಡಿದರು. ಅತ್ತ ಲಾಯರ್ ಕೂಡ ಬೇಲ್ ಕ್ಯಾನ್ಸಲ್ ಆಗುವ ಸಾಧ್ಯತೆ ಇದೆ ಎಂದರು. ಅಲ್ಲಿಗೆ, ಆನಂದ್ ಜೊತೆಗೆ ಜಾನಕಿ ಕಟ್ಟಿದ್ದ ಕನಸೆಲ್ಲಾ ನುಚ್ಚು ನೂರಾಯಿತು.

ಆನಂದ್ ನಾಪತ್ತೆ
ಚಂದು ಭಾರ್ಗಿ ಕೊಟ್ಟಿದ್ದ ಬಟ್ಟೆ ಧರಿಸಲು ಹೋದ ಆನಂದ್ ವಾಪಸ್ ಬರಲೇ ಇಲ್ಲ. ಆನಂದ್ ರನ್ನ ಪೊಲೀಸರು ಕರೆದುಕೊಂಡು ಹೋಗಿರಬಹುದು ಎಂಬ ಗುಮಾನಿ ಲಕ್ಷ್ಮಿಗಿದೆ.

ಮಗಳ ಮದುವೆ ನಿಂತು ಹೋಯ್ತು.!
ಜಾನಕಿ-ಆನಂದ್ ಮದುವೆ ನಿಂತು ಹೋಗಿರೋದು ಸಿ.ಎಸ್.ಪಿಗೆ ಗೊತ್ತಿಲ್ಲ. ಆದ್ರೆ, ಕಾತ್ಯಾಯಿನಿ ಮೆನನ್ ತಂದೆ ಬಂದು ಹೋದ್ಮೇಲೆ, ಆನಂದ್ ಬಗ್ಗೆ ಒಳ್ಳೆ ಅಭಿಪ್ರಾಯ ಸಿ.ಎಸ್.ಪಿಗಿಲ್ಲ.

ಮುಂದೆ ಜಾನಕಿ ಕಥೆ ಏನು.?
ಮದುವೆ ಮುರಿದು ಬಿದ್ಮೇಲೆ, ಜಾನಕಿ ಕಣ್ಣೀರು ಹಾಕಲಿಲ್ಲ. ಮುಂದೆ ಧೈರ್ಯವಾಗಿ ಸಾಗುವೆ ಎಂದಿದ್ದಾಳೆ ಜಾನಕಿ. ಇದೇ ಧೈರ್ಯ ಆಕೆಯನ್ನ ಐ.ಪಿ.ಎಸ್ ಆಫೀಸರ್ ಮಾಡಿಸುತ್ತಾ.? ನೋಡಬೇಕು.


Click it and Unblock the Notifications











