ಅಂತೂ ಸತ್ಯ ಹೊರ ಕಕ್ಕಿದ ನಿರಂಜನ್: ಚಂದು ಭಾರ್ಗಿ ಇನ್ ಡೇಂಜರ್.!
Recommended Video

ದಿನೇ ದಿನೇ ಕುತೂಹಲ ಹೆಚ್ಚಿಸುತ್ತಿರುವ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಗಳು ಜಾನಕಿ' ಧಾರಾವಾಹಿ ರೋಚಕ ಘಟ್ಟ ತಲುಪಿದೆ.
'ಮಗಳು ಜಾನಕಿ' ಬಾಳು ನಾಶ ಆಗಲು.. ಜಾನಕಿ ಗಂಡ ಸುಳ್ಳು ಹೇಳಲು ಚಂದು ಭಾರ್ಗಿ ನೇರ ಕಾರಣ ಅಂತ ಎಲ್ಲರ ಮುಂದೆ ನಿರಂಜನ್ ಸತ್ಯ ಹೊರ ಕಕ್ಕಿದ್ದಾರೆ. ನಿರಂಜನ್ ಬಿಚ್ಚಿಟ್ಟ ಸತ್ಯವನ್ನು ಕೇಳಿ ಜಾನಕಿ, ಚಂಚಲ ಮತ್ತು ತಾಯಿ ರಶ್ಮಿ ಆಘಾತಗೊಂಡಿದ್ದಾರೆ.
ನಿರಂಜನ್ ಸತ್ಯ ಹೇಳಬಾರದು.. ನಿರಂಜನ್ ಬಾಯಿ ಬಿಡುವ ಮುನ್ನ ಆತನ ಕಿಡ್ನ್ಯಾಪ್ ಆಗಬೇಕು ಅಂತ ಚಂದು ಭಾರ್ಗಿ ಎಷ್ಟೋ ಪ್ರಯತ್ನ ಪಟ್ಟರು. ಆದ್ರೆ, ಅದು ಸಾಧ್ಯವಾಗಲೇ ಇಲ್ಲ. ಅಂದುಕೊಂಡಿದ್ದನ್ನ ಜಾನಕಿ ಮುಂದೆ ಹೇಳುವಲ್ಲಿ ನಿರಂಜನ್ ಯಶಸ್ವಿ ಆದರು. ಸದ್ಯ ಚಂದು ಭಾರ್ಗಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಮುಂದೆ ಓದಿರಿ...

ಮುಚ್ಚಿಟ್ಟ ಸತ್ಯ ಬಟಾಬಯಲು.!
ಇಷ್ಟು ದಿನ ಚಂದು ಭಾರ್ಗಿ ಮುಚ್ಚಿಟ್ಟಿದ್ದ ಜಾನಕಿ ಮದುವೆ ರಹಸ್ಯ ಬಟಾ ಬಯಲಾಗಿದೆ. ಜಾನಕಿ ಜೊತೆ ಮದುವೆ ಆಗಲು ಚಂದು ಭಾರ್ಗಿ ಬ್ಲಾಕ್ ಮೇಲ್ ಮಾಡಿದ್ದರು... ಇದಕ್ಕಾಗಿ ಹಣ ಕೂಡ ನೀಡಿದ್ದರು ಎಂದು ನಿರಂಜನ್ ಹೇಳಿಬಿಟ್ಟರು.

ನಿರಂಜನ್ ಹೇಳಿದ್ದೆಲ್ಲಾ ಸುಳ್ಳು.!
ಸತ್ಯವನ್ನೆಲ್ಲಾ ನಿರಂಜನ್ ಹೇಳಿದ್ಮೇಲೆ, ''ಎಲ್ಲವೂ ಸುಳ್ಳು'' ಎಂದು ಚಂದು ಭಾರ್ಗಿ ವಾದಿಸಿದರು. ಸಾಲದಕ್ಕೆ, ನಿರಂಜನ್ ಕಪಾಳಕ್ಕೆ ಬಾರಿಸಿದರು. ಅಲ್ಲದೇ, ಜಾನಕಿಗೆ ನಿರಂಜನ್ ನ ನಂಬದಿರಲು ಚಂದು ಭಾರ್ಗಿ ಸೂಚಿಸಿದರು.

ಗೊಂದಲದಲ್ಲಿ ಜಾನಕಿ
ನಿರಂಜನ್ ಹೇಳಿದನ್ನ ನಂಬಬೇಕೋ, ಬೇಡ್ವೋ ಎಂಬ ಗೊಂದಲದಲ್ಲಿ ಸದ್ಯ ಜಾನಕಿ ಇದ್ದಾರೆ. ತಂದೆ ಮೇಲೆ ಕೋಪವಿದ್ದರೂ, ಚಂದು ಭಾರ್ಗಿ ಬ್ಲಾಕ್ ಮೇಲ್ ಮಾಡ್ತಾರಾ ಎಂಬ ಅನುಮಾನ ಜಾನಕಿಗೆ ಕಾಡುತ್ತಿದೆ.

ನಂಬಲು ರಶ್ಮಿ ತಯಾರಿಲ್ಲ.!
ಚಂದು ಭಾರ್ಗಿ ವಿರುದ್ಧ ಆರೋಪ ಮಾಡಿರುವ ನಿರಂಜನ್ ನ ನಂಬಲು ರಶ್ಮಿ ರೆಡಿ ಇಲ್ಲ. ಯಾಕಂದ್ರೆ, ಮದುವೆಗೂ ಮುನ್ನವೇ ತಾನು ಐಎಎಸ್ ಆಫೀಸರ್ ಅಲ್ಲ ಎಂಬ ಸತ್ಯವನ್ನ ರಶ್ಮಿಗೆ ನಿರಂಜನ್ ತಿಳಿಸಿದ್ದರು. ಆದ್ರೆ, ಇದರ ಹಿಂದೆ ಚಂದು ಭಾರ್ಗಿ ಇದ್ದಾರೆ ಅಂತ ಅಂದು ನಿರಂಜನ್ ಹೇಳಿರಲಿಲ್ಲ. ಹೀಗಾಗಿ, ನಿರಂಜನ್ ನ ನಂಬಲು ರಶ್ಮಿ ರೆಡಿ ಇಲ್ಲ.

ಮುಂದೇನಾಗುತ್ತೋ.?
ಒಂದ್ಕಡೆ, ನಿರಂಜನ್ ಗೆ ಚಂದು ಭಾರ್ಗಿ ದುಡ್ಡು ಕೊಟ್ಟಿರುವುದಕ್ಕೆ ಯಾವುದೇ ಸಾಕ್ಷಿ ಇಲ್ಲ. ಇನ್ನೊಂದ್ಕಡೆ, ನಿರಂಜನ್ ತಂದೆ ನಾಪತ್ತೆ ಆಗಿದ್ದಾರೆ. ಅತ್ತ ಸಿ.ಎಸ್.ಪಿ ಇದ್ಯಾವುದೇ ವಿಚಾರ ಗೊತ್ತಿಲ್ಲ. ಗೊತ್ತಾದರೆ, ಮುಂದೇನಾಗುತ್ತೋ.?


Click it and Unblock the Notifications











