ಅಯ್ಯಯ್ಯೋ... ರಶ್ಮಿಗೆ ಜಾನಕಿಯ ಸುಳಿವು ಸಿಕ್ಬಿಡ್ತು.!
Recommended Video

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಟಿ.ಎನ್.ಸೀತಾರಾಮ್ ನಿರ್ದೇಶನದ 'ಮಗಳು ಜಾನಕಿ' ಧಾರಾವಾಹಿ ರೋಚಕ ಘಟ್ಟ ತಲುಪಿದೆ.
'ಮದುವೆ ಮಾಡಿಸಿ' ಅಂತ ಕೇಳಿಕೊಂಡು ತಮ್ಮ ಮನೆಗೆ ಬಂದಿರುವವರು ಜಾನಕಿ ಹಾಗೂ ಆನಂದ್ ಬೆಳಗೂರು ಎಂಬ ಸತ್ಯ ಸಿ.ಎಸ್.ಪಿಗೆ ಗೊತ್ತಾಗಿದೆ. ಇತ್ತ ಸಿ.ಎಸ್.ಪಿ ಮನೆಯಲ್ಲಿಯೇ ಜಾನಕಿ ಇದ್ದಾಳೆ ಎಂಬ ನಂಬಿಕೆ ಮೇಲೆ ರಶ್ಮಿ ಕೂಡ ಅಲ್ಲೇ ಹಾಜರ್ ಆಗಿದ್ದಾರೆ.
''ಜಾನಕಿ ಎಲ್ಲಿದ್ದಾಳೆ ಅಂತ ನನಗೆ ಗೊತ್ತಿಲ್ಲ. ಮದುವೆ ಎಲ್ಲಿ ಆಗುತ್ತಾರೆ ಅನ್ನೋದೂ ಗೊತ್ತಿಲ್ಲ. ಗೊತ್ತಿದ್ದರೂ ಹೇಳುವುದಿಲ್ಲ'' ಅಂತ ಹೇಳ್ತಾ ಸಿ.ಎಸ್.ಪಿ ಗುಟ್ಟನ್ನ ಕಾಪಾಡಿಕೊಳ್ಳುತ್ತಿರುವಾಗಲೇ, ಹಾಲ್ ನಲ್ಲಿ ಚಾರ್ಜ್ ಗೆ ಇಟ್ಟಿದ್ದ ಜಾನಕಿ ಮೊಬೈಲ್ ರಿಂಗ್ ಆಗಿದೆ.
ಅದು ಜಾನಕಿ ರಿಂಗ್ ಟೋನ್ ಅಂತ ರಶ್ಮಿ ಕಂಡು ಹಿಡಿದಿದ್ದಾಯ್ತು. ಅಲ್ಲಿಗೆ, ಜಾನಕಿ ಅಲ್ಲೇ ಇದ್ದಾಳೆ ಅನ್ನೋದು ರಶ್ಮಿಗೆ ಖಾತ್ರಿ ಆಯ್ತು. ಮಗಳ ಮನವೊಲಿಸಿ, ಆಕೆಯನ್ನ ವಾಪಸ್ ಮನೆಗೆ ಕರೆದುಕೊಂಡು ಹೋಗ್ತಾರಾ ರಶ್ಮಿ.?

ಎಷ್ಟೇ ಜೋಪಾನ ಮಾಡಿದರೂ ಸಾಧ್ಯ ಆಗಲಿಲ್ಲ.!
ಮನೆ ಮುಂದೆ ಲಕ್ಷ್ಮಿ ತಂದಿರುವ ಗಾಡಿ ಇದ್ದರೆ ಅನುಮಾನ ಬರುತ್ತೆ ಎಂಬ ಕಾರಣಕ್ಕೆ ಆ ಗಾಡಿಯನ್ನ ಮನೆ ಹಿಂದೆ ಮರೆಯಾಗಿ ನಿಲ್ಲಿಸುವಂತೆ ಸಿ.ಎಸ್.ಪಿ ಸೂಚಿಸಿದ್ದರು. ಆದ್ರೆ, ಮನೆ ಸುತ್ತ ರೌಂಡ್ ಹಾಕಿ ಶಿವಗಿರಿ ಎಸ್ಟೇಟ್ ವಾಹನವನ್ನ ಚಂದು ಭಾರ್ಗಿ ಕಂಡು ಹಿಡಿದು ಬಿಟ್ಟರು.

ಸತ್ಯ ಬಾಯಿ ಬಿಟ್ಟ ಶ್ಯಾಮಲಾ
''ಮದುವೆ ಇವತ್ತಲ್ಲ ನಾಳೆ'' ಅಂತ ಬಾಯಿತಪ್ಪಿ ಶ್ಯಾಮಲಾ ಸತ್ಯ ಹೇಳಿದ್ದು ರಶ್ಮಿಗೆ ಖುಷಿ ಆಯ್ತು. ಇದರಿಂದ ಸಿ.ಎಸ್.ಪಿ ಇಕ್ಕಟ್ಟಿಗೆ ಸಿಲುಕಿದರು.

ದುರ್ಗಕ್ಕೆ ಬರ್ತಾರೆ ನಿರಂಜನ್.!
ಅತ್ತ ನಿರಂಜನ್ ಕೂಡ ಜಾನಕಿ ಜೊತೆಗಿನ ಮದುವೆ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ. ಈ ಮದುವೆಯಿಂದ ತಪ್ಪಿಸಿಕೊಳ್ಳಲು ಸಿ.ಎಸ್.ಪಿ ಸಲಹೆ ಕೇಳಲು ಜಂಗಮದುರ್ಗಕ್ಕೆ ಬರಲು ನಿರಂಜನ್ ನಿರ್ಧರಿಸಿದ್ದಾರೆ.

ಅಡ್ಡಗಾಲು ಹಾಕಿದ ರಶ್ಮಿ
''ಜಂಗಮದುರ್ಗಕ್ಕೆ ನಿರಂಜನ್ ಬರುವುದು ಬೇಡ'' ಅಂತ ರಶ್ಮಿ ಏನೋ ಹೇಳಿದರು. ಆದ್ರೆ, ಅದನ್ನ ನಿರಂಜನ್ ಕೇಳ್ತಾರಾ.? ಮುಂದೇನಾಗುತ್ತೆ ಅನ್ನೋದೇ ಕುತೂಹಲ.

ಅಮ್ಮನ ಜೊತೆ ಜಾನಕಿ ಹೋದರೆ.?
ಸಿ.ಎಸ್.ಪಿ ಮನೆಯಲ್ಲಿ ಜಾನಕಿ ಇರುವುದು ರಶ್ಮಿಗೆ ಖಾತ್ರಿ ಆಗಿದೆ. ಜಾನಕಿಯ ಮನವೊಲಿಸಿ ವಾಪಸ್ ಮನೆಗೆ ಕರೆದುಕೊಂಡು ಹೋಗ್ತಾರಾ ರಶ್ಮಿ.? ಇಂದಿನ ಸಂಚಿಕೆಯಲ್ಲಿ ನೋಡಿ...


Click it and Unblock the Notifications











