ಚಂದು ಭಾರ್ಗಿ ಮಾಡಿದ ಕುತಂತ್ರ ಬಯಲಾಯಿತು.!

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಗಳು ಜಾನಕಿ' ಧಾರಾವಾಹಿ ದಿನೇ ದಿನೇ ಕುತೂಹಲ ಕೆರಳಿಸುತ್ತಿದೆ.

ಅದ್ಯಾಕೋ, ಏನೋ ತಮ್ಮ ಡ್ರೈವರ್ ಶಿವಕುಮಾರ್ ಪುತ್ರ ಆನಂದ್ ಬೆಳಗೂರು ಕಂಡ್ರೆ ಚಂದು ಭಾರ್ಗಿಗೆ ಕೊಂಚ ಕೂಡ ಇಷ್ಟ ಆಗಲ್ಲ. ಅದ್ರಲ್ಲೂ, ಆನಂದ್ ರನ್ನ ಪುತ್ರಿ ಜಾನಕಿ ಪ್ರೀತಿಸುತ್ತಿದ್ದಾಳೆ ಅಂತ ಗೊತ್ತಾದ್ಮೇಲಂತೂ, ಇಬ್ಬರ ಮದುವೆ ತಪ್ಪಿಸಲು ಚಂದು ಭಾರ್ಗಿ ಮಾಡಿದ ಪ್ಲಾನ್ ಗಳು ಒಂದೆರಡಲ್ಲ.

ಆನಂದ್ ಜೊತೆಗೆ ಮದುವೆ ಆಗಲು ಜಾನಕಿ ಮನೆ ಬಿಟ್ಟು ಬಂದ್ಮೇಲೂ, ಚಂದು ಭಾರ್ಗಿಯ ಚದುರಂಗದ ಆಟ ನಿಂತಿರಲಿಲ್ಲ. ಮದುವೆ ನಡೆಯುತ್ತಿದ್ದ ಜಾಗಕ್ಕೆ ಕಾತ್ಯಾಯಿನಿ ಮೆನನ್ ತಂದೆ ಬರುವ ಹಾಗೆ ನೋಡಿಕೊಂಡು ಜಾನಕಿಯ ಮದುವೆ ನಿಲ್ಲಿಸಿದರು. ಸಾಲದಕ್ಕೆ, ಆನಂದ್ ರನ್ನ ಚಂದು ಭಾರ್ಗಿ ಕಿಡ್ನ್ಯಾಪ್ ಮಾಡಿಸಿದರು.

ಚಂದು ಭಾರ್ಗಿಯ ಈ ಕಿಡ್ನ್ಯಾಪ್ ಪ್ಲಾನ್ ಇದೀಗ ಬಯಲಾಗಿದೆ. ಪತ್ನಿ ರಶ್ಮಿಗೆ ಚಂದು ಭಾರ್ಗಿ ಆಡಿದ ಆಟವೆಲ್ಲ ತಿಳಿದುಬಂದಿದೆ. ಮುಂದೆ ಓದಿರಿ...

ಶ್ಯಾಮಲಾ ಬಿಟ್ಟುಕೊಟ್ಟ ಗುಟ್ಟು

ಶ್ಯಾಮಲಾ ಬಿಟ್ಟುಕೊಟ್ಟ ಗುಟ್ಟು

''ಹೋಟೆಲ್ ನಿಂದ ಆನಂದ್ ರನ್ನ ಪೊಲೀಸರು ಕರೆದುಕೊಂಡು ಹೋಗಿಲ್ಲ. ಆತನನ್ನ ಯಾರೋ ಕಿಡ್ನ್ಯಾಪ್ ಮಾಡಿಸಿದ್ದಾರೆ. ಸಿ.ಎಸ್.ಪಿಗೆ ಚಂದು ಭಾರ್ಗಿ ಮೇಲೆ ಅನುಮಾನ ಬಂದಿದೆ'' ಎಂದು ರಶ್ಮಿಗೆ ಶ್ಯಾಮಲಾ ಹೇಳಿಬಿಟ್ಟರು. ಇದರಿಂದ ರಶ್ಮಿ ಆಘಾತಗೊಂಡರು.

ರಶ್ಮಿ ಮುಂದೆ ಸತ್ಯ ಒಪ್ಪಿಕೊಂಡ ಚಂದು ಭಾರ್ಗಿ

ರಶ್ಮಿ ಮುಂದೆ ಸತ್ಯ ಒಪ್ಪಿಕೊಂಡ ಚಂದು ಭಾರ್ಗಿ

''ಆನಂದ್ ರನ್ನ ಕಿಡ್ನ್ಯಾಪ್ ಮಾಡಿಸಿದ್ದೀರಾ.?'' ಅಂತ ಕೇಳಿದಾಗ ರಶ್ಮಿ ಮುಂದೆ ಚಂದು ಭಾರ್ಗಿ 'ಹೌದು' ಎಂದು ಸತ್ಯ ಒಪ್ಪಿಕೊಂಡರು. ಜಾನಕಿ-ಆನಂದ್ ಮದುವೆ ನಡೆಯುವುದು ತನಗೆ ಇಷ್ಟವಿಲ್ಲ ಎಂದೂ ರಶ್ಮಿಗೆ ಸ್ಪಷ್ಟವಾಗಿ ತಿಳಿಸಿದರು.

ಜಾನಕಿ ನಂಬರ್ ಚೇಂಜ್

ಜಾನಕಿ ನಂಬರ್ ಚೇಂಜ್

ಇನ್ಯಾವತ್ತೂ ಜಾನಕಿ-ಆನಂದ್ ಮಧ್ಯೆ ಮಾತುಕತೆ ನಡೆಯಬಾರದು ಎಂದು ಉಪಾಯವಾಗಿ ಜಾನಕಿಯ ಫೋನ್ ನಂಬರ್ ನ ಚಂದು ಭಾರ್ಗಿ ಬದಲಾಯಿಸಿದ್ದಾರೆ. ಸದ್ಯ ನಡೆಯುತ್ತಿರುವ ಮದುವೆಗೆ ಯಾವುದೇ ತೊಂದರೆ ಆಗದಂತೆ ಚಂದು ಭಾರ್ಗಿ ಎಚ್ಚರಿಕೆ ವಹಿಸಿದ್ದಾರೆ.

ಚಂದು ಭಾರ್ಗಿ ಪ್ಲಾನ್ ನಂತೆ ಮದುವೆ ನಡೆಯುತ್ತಾ.?

ಚಂದು ಭಾರ್ಗಿ ಪ್ಲಾನ್ ನಂತೆ ಮದುವೆ ನಡೆಯುತ್ತಾ.?

ಚಂದು ಭಾರ್ಗಿ ಇಚ್ಛೆಯಂತೆ ಜಾನಕಿ-ನಿರಂಜನ್ ಮದುವೆ ನಡೆಯುತ್ತಾ.? ಅನ್ನೋದೇ ಸದ್ಯದ ಕುತೂಹಲ. ಯಾಕಂದ್ರೆ, ಆನಂದ್ ಪೋಷಕರಿಂದ ಸಿ.ಎಸ್.ಪಿ ಕಿಡ್ನ್ಯಾಪ್ ಕಂಪ್ಲೇಂಟ್ ಕೊಡಿಸಿದರೆ, ಜಾನಕಿಗೆ ಸತ್ಯ ಗೊತ್ತಾಗಲೇ ಬೇಕಲ್ವಾ.?

More from Filmibeat

English summary
TN Seetharam's 'Magalu Janaki' written update: Rashmi got to know that Chandhu Bargi kidnapped Anand Belagooru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X