For Quick Alerts
  ALLOW NOTIFICATIONS  
  For Daily Alerts

  ಶಾಲೆಯ ಸಂಚಿಕೆ ನೋಡಿ ಬೇಸರ ವ್ಯಕ್ತ ಪಡಿಸಿದ 'ಮಗಳು ಜಾನಕಿ' ವೀಕ್ಷಕರು

  |

  ಪತಿಯನ್ನು ನೋಡಿ ಶಾಕ್ ಆದ ಸಂಜನಾ. ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದಿರುವ ಸಂಜನಾ ಪ್ರಶಸ್ತಿ ಪಡೆಯದೆ ಪತಿಯನ್ನು ನೋಡಿದ ಶಾಕ್ ನಲ್ಲಿದ್ದಾರೆ. ಅಷ್ಟರಲ್ಲೆ ಸಂಜನಾಗೆ ಯಾರದ್ದೋ ಫೋನ್ ಬರುತ್ತೆ. ಯಾರು ಎನ್ನುವುದನ್ನು ಯೋಚಿಸದೆ ಕಾರ್ಯಕ್ರಮವನ್ನು ಅರ್ಧದಲ್ಲಿಯೆ ನಿಲ್ಲಿಸಿ ಆಟೋ ಹತ್ತಿಕೊಂಡು ಹೊರಟೋಗಿದ್ದಾರೆ.

  ಪತಿ ಗೌತಮ್ ಸಂಜನಾಗೆ ಸನ್ಮಾನ ಮಾಡಬೇಕಾಗುತ್ತೆ ಅಂತ ಸಂಜನಾರನ್ನು ಅಲ್ಲಿಂದ ಬೇರೆ ಕಡೆ ಹೋಗುವಂತೆ ಪ್ಲಾನ್ ಮಾಡಿ ಸಂಜನಾ ಅವರನ್ನು ಬೇರೆ ಕಡೆ ಕಳುಹಿಸಿದ್ದಾರೆ. ಈ ಎಪಿಸೋಡ್ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

  ಸಂಜನಾ ಮಗುವನ್ನು ಬಿಟ್ಟು ಯಾರದ್ದೋ ಫೋನ್ ಬಂತು ಅಂತ ಹೇಳಿ ದಿಢೀರನೆ ಹೊರಟು ಬಿಡುತ್ತಾರಾ? ಅವರು ಉತ್ತಮ ಶಿಕ್ಷಕಿ ಹೇಗೆ ಆಗುತ್ತಾರೆ ಎನ್ನುವ ಪ್ರೇಶ್ನೆಗಳು ಕೇಳಿ ಬರುತ್ತಿವೆ. ಅಲ್ಲದೆ ಮಗಳು ಜಾನಕಿ ಇತ್ತೀಚಿನ ದಿನಗಳಲ್ಲಿ ಸಪ್ಪೆಯಾಗತ್ತಿದೆ. ವಾಸ್ತವಕ್ಕಿಂತ ತುಂಬನೆ ದೂರ ಹೋಗುತ್ತಿದೆ. ಹೀಗೆ ಆದರೆ ಧಾರಾವಾಹಿ ನೋಡುವುದನ್ನ ಬಿಡಬೇಕಾಗುತ್ತೆ ಎನ್ನುವ ಬೇಸರವನ್ನು ಹೊರಹಾಕುತ್ತಿದ್ದಾರೆ ವೀಕ್ಷಕರು.

  ನಿರ್ಜನ ಪ್ರದೇಶದಲ್ಲಿ ಸಂಜನಾ

  ನಿರ್ಜನ ಪ್ರದೇಶದಲ್ಲಿ ಸಂಜನಾ

  ಯಾರೋ ಫೋನ್ ಮಾಡಿ ಬರಹೇಳಿದ್ದಾರೆ ಎಂದು ಸಂಜನಾ ಹಿಂದೆ ಮುಂದೆ ಯೋಚಿಸದೆ ನಿರ್ಜನ ಪ್ರದೇಶಕ್ಕೆ ಬಂದಿದ್ದಾರೆ. ಮಗಳನ್ನು ಲೆಕ್ಕಿಸದೆ ಒಬ್ಬಳೆ ಬಂದಿರುವುದು ಸರಿನಾ? ಸೀತಾರಾಮ್ ಅಂತಹ ನಿರ್ದೇಶಕರು ಇಷ್ಟು ಬಾಲೀಶವಾಗಿ ಧಾರಾವಾಹಿಯನ್ನು ಕಟ್ಟಿಕೊಡಬಾರದು ಎಂದು ಹೇಳುತ್ತಿದ್ದಾರೆ. ಹೀಗೆ ಮುಂದು ವರೆದರೆ ಬೇರೆ ಧಾರಾವಾಹಿಗೂ ಮಗಳು ಜಾನಕಿ ಧಾರಾವಾಹಿಗೂ ಏನು ವ್ಯತ್ಯಾಸವಿದ್ದಂತೆ ಆಗುತ್ತೆ ಎಂದು ವೀಕ್ಷರು ಪ್ರಶ್ನಿಸುತ್ತಿದ್ದಾರೆ.

  ಅಮ್ಮನಿಗಾಗಿ ಕಾಯುತ್ತ ಕುಳಿತ್ತಿರುವ ಇಂಚರಾ

  ಅಮ್ಮನಿಗಾಗಿ ಕಾಯುತ್ತ ಕುಳಿತ್ತಿರುವ ಇಂಚರಾ

  ಅಮ್ಮನಿಗಾಗಿ ಇಂಚರಾ ಒಬ್ಬಳೆ ಕಾಯುತ್ತ ಕುಳಿದ್ದಾಳೆ. ಇದನ್ನ ಗಮಸಿದ ಜಾನಕಿ ಇಂಚರಾಳನ್ನು ಸಮಾಧಾನಮಾಡಿ ಮನೆಗೆ ಕೆರೆದುಕೊಂಡು ಹೋಗಿದ್ದಾರೆ. ಇಂಚರಾಳನ್ನು ಮಾತ್ರ ಮನೆಗೆ ಕರೆದುಕೊಂಡು ಬಂದಿರುವುದನ್ನು ನೋಡಿ ಮನೆಯವರು ಕೂಡ ಸಂಜನಾ ಎಲ್ಲಿ ಎಂದು ಗಾಬರಿ ಆಗಿದ್ದಾರೆ. ಸಂಜನಾ ಬಂದಿಲ್ಲ ಎನ್ನುವ ವಿಚಾರ ಗೊತ್ತಾದರು, ಅಣ್ಣನಾಗಿ ನಿರಂಜನ್ ಸುಮ್ಮನೆ ಇರುವುದು ಸರಿಕಾಣಿಸಲಿಲ್ಲ ಎನ್ನುವ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ ನೋಡುಗರು.

  ನೋಡುಗರಿಂದ ತೀರ ಬೇಸರ

  ನೋಡುಗರಿಂದ ತೀರ ಬೇಸರ

  " ಬೇರೆ ಯಾವ ಧಾರಾವಾಹಿಗಳನ್ನು ನೋಡದೆ ಇದೊಂದನ್ನು ಮಾತ್ರ ನೋಡ್ತಿದ್ದೆವು. ಸೀತಾರಾಂ ಅವರ ಧಾರಾವಾಹಿ ಕೂಡ ಅದೇ ಲೆವೆಲ್ ಗೆ ಹೋದರೆ ನಮ್ಮಂತಹವರು ಅದನ್ನೂ ನೋಡವುದನ್ನ ಬಿಡ್ತೀವಿ ಅಷ್ಟೆ" "ಇದು ಧರ್ಮ ಸಂಕಟ. ಆ ಸಮಯ ಬಂದಾಗ ಮನಸ್ಸು ಟಿವಿ ನೋಡಲು ಎಳೆಯುತ್ತೆ. ಆದರೆ ಇತ್ತೀಚೆಗೆ. ಅರ್ಧ ಸಂಚಿಕೆ ನೋಡುವ ವೇಳೆಗೆ ಭ್ರಮನಿರಸನ ಆಗಿ ಎದ್ದು ಹೋಗುವಂತಾಗುತ್ತೆ" ಎಂದು ಧಾರಾವಾಹಿಯಲ್ಲಿ ಪ್ರಸಾರವಾದ ಶಾಲೆಯ ಸಂಚಿಕೆಯನ್ನು ನೋಡಿ ಬಾರಿ ಬೇಸರಕೊಂಡು ಅಸಮಾಧಾನ ಹೋರಹಾಕಿದ್ದಾರೆ.

  ಸೀರಿಯಲ್ ನೋಡಲು ಬೇಸರವಾಗುತ್ತೆ

  ಸೀರಿಯಲ್ ನೋಡಲು ಬೇಸರವಾಗುತ್ತೆ

  "ಧಾರಾವಾಹಿ ಇತ್ತೀಚಿನ ದಿನಗಳಲ್ಲಿ ಮೊನಚು ತನವನ್ನು ಕಳೆದು ಕೊಳ್ಳುತ್ತಾ ಇದೆ. ನೋಡುವುದಕ್ಕೇ ಬಹಳ ಬೇಸರ ವ್ಯಕ್ತವಾಗುತ್ತಾ ಇದೆ. ಮುಗಿದರೆ ಸಾಕು" ಹೇಳುತ್ತಿದ್ದಾರೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಧಾರವಾಹಿಯ ಕಥೆಯನ್ನು ತುಂಬಾ ಎಳೆಯಲಾಗುತ್ತಿದೆ ಎನ್ನುವ ದೂರು ಕೂಡ ಕೇಳಿಬರುತ್ತಿದೆ. ಸೀತರಾಮ್ ಅವರಿಂದ ಗುಣಮಟ್ಟದ ಅಪೇಕ್ಷೆ ಇರುತ್ತದೆ. ಸಂಜನಾ ಪ್ರಕರಣಕ್ಕೇ ಮೂರು ವಾರ, ಚಂಚಲಾ ನಿಶ್ಚಿತಾರ್ಥ ಒಂದೆರಡು ವಾರ. ಅಲ್ಲಿಗೆ ಅವರ ಮುಖ- ಇವರ ಮುಖ ಈ ಧಾರಾವಾಹಿ ಕೂಡ ಬೇರೆ ಧಾರಾವಾಹಿಯ ಹಾಗೆ ಆಗಿದೆ ಎನ್ನುವ ಬೇಸರವನ್ನು ಹೊರಹಾಕುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ.

  English summary
  Kannada famous serial Magalu Janaki serial viewers are unhappy about school unnatural episod.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X