ಸೂಪರ್ ಸ್ಪೀಡ್ ಆಗಿ ಸಾಗುತ್ತಿದೆ 'ಮಗಳು ಜಾನಕಿ' ಸೀರಿಯಲ್ ಕಥೆ

By Harshitha

Recommended Video

ಮೂರು ದಿನಗಳಲ್ಲೇ ಎಲ್ಲರ ಮೆಚ್ಚುಗೆ ಪಡೆದ ಮಗಳು ಜಾನಕಿ..!!

ಟಿ.ಎನ್.ಸೀತಾರಾಮ್ ನಿರ್ದೇಶನದ 'ಮಗಳು ಜಾನಕಿ' ಧಾರಾವಾಹಿ ಶುರು ಆಗಿ ಮೂರು ದಿನಗಳು ಕಳೆದಿವೆ ಅಷ್ಟೇ. ಮೂರು ದಿನಗಳಲ್ಲಿ 'ಮಗಳು ಜಾನಕಿ'ಯ ಕಥೆ ಸೂಪರ್ ಸ್ಪೀಡ್ ಆಗಿ ಸಾಗಿದೆ.

ಅದಾಗಲೇ ಧಾರಾವಾಹಿಯಲ್ಲಿರುವ ಎಲ್ಲಾ ಪಾತ್ರಗಳ ಪರಿಚಯವೂ ಮುಗಿದು, ಜಾನಕಿಯ ಪ್ರೇಮ ಕಥೆಗೆ ಇನ್ನೇನು ಅಧಿಕೃತ ಮುದ್ರೆ ಬೀಳಬೇಕು ಎನ್ನುವಷ್ಟರಲ್ಲಿ ಜಾನಕಿಯ ಸಾಕು ತಂದೆ ಚಂದು ಬಾರ್ಗಿ ಅರೆಸ್ಟ್ ಆಗುವ ಮಟ್ಟಕ್ಕೆ ಬಂದಿದೆ.

ಜಂಗಮದುರ್ಗದ ಬೈ ಎಲೆಕ್ಷನ್ ನಲ್ಲಿ ಸ್ಪರ್ಧಿಸಲು ಚಂದು ಬಾರ್ಗಿ ಇನ್ನೂ ನಾಮಿನೇಷನ್ ಸಲ್ಲಿಸಿಲ್ಲ. ಹೀಗಿರುವಾಗಲೇ, ಜಂಗಮದುರ್ಗದ ತಮ್ಮ ಫ್ಯಾಕ್ಟರಿಯಲ್ಲಿ ಸತ್ತ ವ್ಯಕ್ತಿಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Magalu Janaki: Will Chandu Bargi gets arrested

ಫ್ಯಾಕ್ಟರಿಯಲ್ಲಿ ಸತ್ತ ವ್ಯಕ್ತಿಗೂ ಚಂದು ಬಾರ್ಗಿಗೂ ಹಳೇ ದ್ವೇಷ ಇರುವುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಹೀಗಾಗಿ, ತಡ ಮಾಡದೆ ಅರೆಸ್ಟ್ ವಾರೆಂಟ್ ಹಿಡಿದು ಚಂದು ಬಾರ್ಗಿಯನ್ನ ಬಂಧಿಸಲು ಪೊಲೀಸರು ಸಜ್ಜಾಗಿದ್ದಾರೆ.

ಎದುರಾಗಿರುವ ಆಪತ್ತಿನಿಂದ ತಪ್ಪಿಸಿಕೊಳ್ಳಲು ಚಂದು ಬಾರ್ಗಿಗೆ ಮುಖ್ಯಮಂತ್ರಿಗಳೂ ಸೇರಿದಂತೆ ಯಾರೂ ದೂರವಾಣಿ ಕರೆಗೆ ಸಿಗಲಿಲ್ಲ. ಹೀಗಾಗಿ ಬಂಧನ ಭೀತಿ ಚಂದು ಬಾರ್ಗಿಗೆ ಕಾಡುತ್ತಿದೆ.

ಇತ್ತ ಮದುವೆ ಮಾತುಕತೆ ನಡೆಸಲು ಬಂದಿದ್ದ ಜಾನಕಿ, ಸಹೋದರಿ ಚಂಚಲ ಹಾಗೂ ತಾಯಿ ರಶ್ಮಿಗೂ ಚಂದು ಬಾರ್ಗಿ ಅರೆಸ್ಟ್ ಆಗುತ್ತಿರುವ ಸಂಗತಿ ಆಘಾತ ನೀಡಿದೆ.

'ಮಗಳು ಜಾನಕಿ' ಸೀರಿಯಲ್ ಹೋಗುತ್ತಿರುವ ಸ್ಪೀಡ್ ನೋಡಿದ್ರೆ, ಮುಂದಿನ ವಾರದ ಹೊತ್ತಿಗೆ ಕೋರ್ಟ್ ಕಟಕಟೆಯ ಮುಂದೆ ಕರಿ ಕೋಟು ಧರಿಸಿ ಸಿ.ಎಸ್.ಪಿ ವಾದ ಮಾಡಲು ಶುರು ಮಾಡಿದರೂ ಅಚ್ಚರಿ ಇಲ್ಲ.

More from Filmibeat

English summary
TN Seetharam's 'Magalu Janaki' written update: Will Chandu Bargi gets arrested.?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X