ಐ.ಪಿ.ಎಸ್ ಪಾಸ್ ಮಾಡ್ತಾರಾ 'ಮಗಳು ಜಾನಕಿ': ಬರಲಿದೆ ಹೊಸ ತಿರುವು.?
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಗಳು ಜಾನಕಿ' ಧಾರಾವಾಹಿಯ ಶೀರ್ಷಿಕೆ ಗೀತೆಯನ್ನ ನೀವು ಕಣ್ಣು ಮಿಟುಕಿಸದ ಹಾಗೆ ನೋಡಿದ್ರೆ, ನಿಮಗೊಂದು ಅಚ್ಚರಿ ಖಂಡಿತ ಆಗಿರುತ್ತೆ.
ಖಾಕಿ ತೊಟ್ಟು, ಐ.ಪಿ.ಎಸ್ ಆಫೀಸರ್ ತರಹ ಜಾನಕಿ ಮೆಟ್ಟಿಲುಗಳಿಂದ ಇಳಿದು ಬರುವ ಸೀನ್ ನ ಸದ್ಯ 'ಮಗಳು ಜಾನಕಿ' ಶೀರ್ಷಿಕೆ ಗೀತೆಯಲ್ಲಿ ಬಳಸಲಾಗಿದೆ.
ಹಾಗಾದ್ರೆ, ಧಾರಾವಾಹಿಯಲ್ಲಿ ಜಾನಕಿ ಪೊಲೀಸ್ ಅಧಿಕಾರಿ ಆಗುತ್ತಾರಾ.? ನಮಗಂತೂ ಗೊತ್ತಿಲ್ಲ. ಆದ್ರೆ, ಸದ್ಯ ಧಾರಾವಾಹಿಯ ಕಥೆ ಸಾಗುತ್ತಿರುವ ದಿಕ್ಕು ನೋಡಿದರೆ ಜಾನಕಿ ಐ.ಪಿ.ಎಸ್ ಪಾಸ್ ಮಾಡಿದರೂ ಆಶ್ಚರ್ಯ ಇಲ್ಲ.!

ಜಾನಕಿ-ಆನಂದ್ ಸಂಬಂಧ ಮುರಿದು ಬಿತ್ತು ಎನ್ನುವಷ್ಟರಲ್ಲಿ, ಆನಂದ್ ತಪ್ಪಿತಸ್ತ ಅಲ್ಲ ಎಂಬ ಸತ್ಯ ಜಾನಕಿಗೆ ಮನವರಿಕೆ ಆಯ್ತು. ಇನ್ನೇನು ನಿರಂಜನ್ ಜೊತೆ ಜಾನಕಿ ಹಸೆಮಣೆ ಏರುವ ಹೊತ್ತಲ್ಲಿ, ಆನಂದ್ ಜೊತೆ ಮದುವೆ ಆಗಲು ಜಾನಕಿ ಮನೆ ಬಿಟ್ಟು ಬಂದಿದ್ದಾಳೆ.
ತಂದೆ ಸಿ.ಎಸ್.ಪಿ ಸಮ್ಮುಖದಲ್ಲಿ ಜಾನಕಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾಳೆ. ಇದರ ಮಧ್ಯೆ ಜಾನಕಿ ತಾಯಿ ರಶ್ಮಿ ಕೂಡ ಸಿ.ಎಸ್.ಪಿ ಮನೆಗೆ ಬಂದಿದ್ದಾರೆ. ಮುಂದೇನಾಗುತ್ತೋ... ನಿರ್ದೇಶಕರೇ ಬಲ್ಲರು.!
ಅಷ್ಟಕ್ಕೂ, ಜಾನಕಿಗೆ ಐಎಎಸ್ ಮಾಡುವೆ ಆಸೆ ಇತ್ತು. ಆದ್ರೆ, ಆಕೆಗೆ ವಿದ್ಯೆ ತಲೆಗೆ ಹತ್ತಲಿಲ್ಲ. ಹೀಗಾಗಿ, ಐಪಿಎಸ್ ಅಧಿಕಾರಿಯನ್ನು ಮದುವೆ ಆಗುವ ಹಂಬಲ ಜಾನಕಿಗೆ ಬಂತು. ಜಾನಕಿ ಇಚ್ಛೆಯಂತೆ ಆನಂದ್ ಬೆಳಗೂರು ಐ.ಪಿ.ಎಸ್ ಎಕ್ಸಾಂ ಕ್ಲಿಯರ್ ಮಾಡಿದ್ದಾರೆ.
ಆನಂದ್ ಜೊತೆಗೆ ಮದುವೆ ಆದ್ಮೇಲೆ, ಜಾನಕಿ ಕೂಡ ಐಪಿಎಸ್ ಪಾಸ್ ಮಾಡಬಹುದೇನೋ.? ಉತ್ತರ ತಿಳಿದುಕೊಳ್ಳಬೇಕು ಅಂದ್ರೆ, ಜಾನಕಿಯ ಪುರಾಣವನ್ನ ನೋಡುತ್ತಲಿರಿ...


Click it and Unblock the Notifications











