ಜಾನಕಿಗೆ ಸತ್ಯ ಗೊತ್ತಾಗುತ್ತಾ.? ಮೋಸದ ಮದುವೆ ಮುರಿದು ಬೀಳುತ್ತಾ.?
ಟಿ.ಎನ್.ಸೀತಾರಾಮ್ ನಿರ್ದೇಶನದ 'ಮಗಳು ಜಾನಕಿ' ಧಾರಾವಾಹಿಯ ಕಥೆಯಲ್ಲಿ ದೊಡ್ಡ ತಿರುವು ಸಿಗುವ ಸೂಚನೆ ಲಭಿಸಿದೆ.
ಸ್ನೇಹಿತೆ ಕಾತ್ಯಾಯಿನಿ ಮೆನನ್ ಆತ್ಮಹತ್ಯೆ ಕೇಸ್ ನಲ್ಲಿ ತಗಲಾಕೊಂಡು, ಚಂದು ಭಾರ್ಗಿ ಒತ್ತಡದ ಮೇರೆಗೆ ಪೊಲೀಸರ ವಶದಲ್ಲಿದ್ದ ಆನಂದ್ ಬೆಳಗೂರು ಇದೀಗ ಬಿಡುಗಡೆ ಆಗಿದ್ದಾರೆ.
''ಕಾತ್ಯಾಯಿನಿ ಹಾಗೂ ನನ್ನ ನಡುವೆ ಫ್ರೆಂಡ್ ಶಿಪ್ ಬಿಟ್ಟರೆ ಬೇರೆ ಯಾವುದೇ ಸಂಬಂಧ ಇರಲಿಲ್ಲ. ಡೆತ್ ನೋಟ್ ನಲ್ಲಿ ನನ್ನ ಹೆಸರು ಉಲ್ಲೇಖ ಆಗಿರುವುದೇ ಬೇರೆ ಕಾರಣಕ್ಕೆ'' ಎಂಬ ಸತ್ಯವನ್ನ ಜಾನಕಿಗೆ ತಿಳಿಸುವ ಪ್ರಯತ್ನವನ್ನ ಮಾಡಿದ್ದಾರೆ ಆನಂದ್ ಬೆಳಗೂರು.

ಅಲ್ಲದೇ, ಸುಖಾಸುಮ್ಮನೆ ಕಂಬಿ ಎಣಿಸುವ ಹಾಗೆ ಮಾಡಿದ್ದು ಚಂದು ಭಾರ್ಗಿಯೇ ಎಂಬ ಅನುಮಾನ ಕೂಡ ಆನಂದ್ ಗಿದೆ. ಹೀಗಾಗಿ, ಜಾನಕಿಯ ಸ್ನೇಹಿತೆಗೆ ಇರುವ ಸತ್ಯವನ್ನೆಲ್ಲಾ ಆನಂದ್ ಹೇಳಿದ್ದಾರೆ.
ಜಾನಕಿಗೆ ಆಕೆಯ ಸ್ನೇಹಿತೆ ಫೋನ್ ಮಾಡಿ 'ಸತ್ಯ' ಹೇಳಲು ಮುಂದಾಗಿದ್ದಾಳೆ. ಸಾಕ್ಷಿ ಸಮೇತ ಆನಂದ್ ಆಡಿರುವ ಮಾತುಗಳನ್ನ ಜಾನಕಿ ನಂಬುತ್ತಾಳಾ.? ನಕಲಿ ಐಪಿಎಸ್ ಅಧಿಕಾರಿ ನಿರಂಜನ್ ಜೊತೆಗಿನ ಜಾನಕಿ ಮದುವೆ ಮುರಿದು ಬೀಳುತ್ತಾ.? ಎಂಬುದೇ ಸದ್ಯದ ಕುತೂಹಲ.
ಈ ನಡುವೆ ಸಿ.ಎಸ್.ಪಿಗೆ ಕಾಡುತ್ತಿದ್ದ ಡೌಟ್ ಗಳನ್ನ ಸುಳ್ಳು ಹೇಳಿ ನಿರಂಜನ್ ಕ್ಲಿಯರ್ ಮಾಡಿದ್ದಾರೆ. ಆದ್ರೆ, ಎಷ್ಟು ದಿನ ತಾನೇ ಸುಳ್ಳನ್ನ ಬಚ್ಚಿಡಲು ಸಾಧ್ಯ.? ಚಂದು ಭಾರ್ಗಿ ನಿಶ್ಚಯ ಮಾಡಿರುವ ಮೋಸದ ಮದುವೆಗೆ ಮುಹೂರ್ತ ಎಂದು.? ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.


Click it and Unblock the Notifications











