ಪ್ರೀತಿಯಲ್ಲಿ ಬಿರುಕು: 'ಮಗಳು ಜಾನಕಿ'ಯ ಹೃದಯ ಚೂರು ಚೂರು.!
ಎಷ್ಟೇ ಆಗಲಿ ಚಂದು ಬಾರ್ಗಿಗೆ ಜಾನಕಿ ಸಾಕು ಮಗಳು. ಜಾನಕಿಯ ನಿಜವಾದ ತಂದೆ ಸಿ.ಎಸ್.ಪಿ ಎಂಬ ಸತ್ಯ ಗೊತ್ತಾಗದ ಹಾಗೆ ಚಂದು ಬಾರ್ಗಿ ಜಾನಕಿಯನ್ನ ಸಾಕಿದ್ದಾರೆ.
ಆದ್ರೀಗ, ಉಪ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪುವುದಕ್ಕೆ ಸಿ.ಎಸ್.ಪಿ ಕಾರಣ ಅಂತ ಬಲವಾಗಿ ನಂಬಿದ್ದಾರೆ ಚಂದು ಬಾರ್ಗಿ. ಹೀಗಾಗಿ ಸಿ.ಎಸ್.ಪಿ ವಿರುದ್ಧ ಚಂದು ಬಾರ್ಗಿ ದ್ವೇಷ ಸಾಧಿಸುತ್ತಿದ್ದಾರೆ.
ಸಿ.ಎಸ್.ಪಿಗೆ ಮಗಳು ಜಾನಕಿ ಅಂದ್ರೆ ಪ್ರಾಣ. ಆದ್ದರಿಂದ ಜಾನಕಿಗೆ ಚಿತ್ರಹಿಂಸೆ ಕೊಟ್ಟು ಪರೋಕ್ಷವಾಗಿ ಸಿ.ಎಸ್.ಪಿಗೆ ನೋವು ಕೊಡಬೇಕು ಎಂಬುದೇ ಚಂದು ಬಾರ್ಗಿ ಉದ್ದೇಶ. ಮುಂದೆ ಓದಿರಿ...

ಆನಂದ್ ಬೆಳಗೂರುಗೆ ಸಂಕಟ
ಆನಂದ್ ಬೆಳಗೂರು-ಜಾನಕಿ ಪ್ರೀತಿಗೆ ಚಂದು ಬಾರ್ಗಿ ಸಮ್ಮತಿ ಕೊಟ್ಟಾಗಿತ್ತು. ಇನ್ನೇನು ಮದುವೆ ಮಾತುಕತೆ ನಡೆಯಬೇಕು ಎನ್ನುವಷ್ಟರಲ್ಲಿ ಚಂದು ಬಾರ್ಗಿ ಅರೆಸ್ಟ್ ಆದರು.

ಜಾನಕಿ ಜೊತೆ ಆನಂದ್ ಇರಲಿಲ್ಲ.!
ಕಷ್ಟದ ಸಮಯದಲ್ಲಿ ಆನಂದ್ ಜೊತೆಯಲ್ಲಿ ಇರಲಿಲ್ಲ ಎಂಬ ಬೇಸರ ಜಾನಕಿಗೆ ಇದೆ. ಜೊತೆಗೆ ಪದೇ ಪದೇ ಆನಂದ್ ಗೆ ಕಾತ್ಯಾಯಿನಿ ಮೆನನ್ ಫೋನ್ ಬರುತ್ತಿದ್ದರಿಂದ ಜಾನಕಿ ಮನಸ್ಸಿನಲ್ಲಿ ಅನುಮಾನ ಮೂಡಿದೆ.

ಆತ್ಮಹತ್ಯೆ ಮಾಡಿಕೊಂಡ ಕಾತ್ಯಾಯಿನಿ ಮೆನನ್
ಆನಂದ್ ಬೆಳಗೂರು ಕ್ಲಾಸ್ ಮೇಟ್ ಆಗಿದ್ದ ಕಾತ್ಯಾಯಿನಿ ಮೆನನ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತನಿಖೆ ಸಲುವಾಗಿ ಕೇರಳ ಪೊಲೀಸರು ಆನಂದ್ ನ ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ.

ಮೊದಲ ಪೆಟ್ಟು ಕೊಟ್ಟ ಚಂದು ಬಾರ್ಗಿ
ಕೇರಳ ಪೊಲೀಸರು ಇನ್ನೇನು ಆನಂದ್ ನ ಬಿಡುಗಡೆ ಮಾಡಬೇಕಿತ್ತು. ಆದ್ರೆ, ಅಷ್ಟರಲ್ಲಿ ಪೊಲೀಸರಿಗೆ ಫೋನ್ ಮಾಡಿದ ಚಂದು ಬಾರ್ಗಿ, ಆನಂದ್ ನ ಬಿಡುಗಡೆ ಮಾಡದಂತೆ ಹೇಳಿದ್ದಾರೆ.

ಜಾನಕಿಗೆ ವಿಷಯ ಗೊತ್ತಾಯಿತು.!
ಕಾತ್ಯಾಯಿನಿ ಮೆನನ್ ಹಾಗೂ ಆನಂದ್ ನಡುವೆ ಏನೋ ಇದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಆನಂದ್ ಜೊತೆಗೆ ಕಾತ್ಯಾಯಿನಿ ಮಾತುಕತೆ ಮಾಡಿದ್ದಾಳೆ. ಡೆತ್ ನೋಟ್ ನಲ್ಲೂ ಆನಂದ್ ಹೆಸರಿದೆ ಅಂತ ಜಾನಕಿಗೆ ಚಂದು ಬಾರ್ಗಿ ಹೇಳಿದ್ದಾರೆ. ಇದನ್ನ ಕೇಳಿ ಜಾನಕಿಗೆ ಶಾಕ್ ಆಗಿದೆ.

ಕೇರಳ ಕಡೆ ಹೊರಟ ಜಾನಕಿ
ಸತ್ಯ ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಜಾನಕಿ ಕೇರಳ ಕಡೆ ಹೊರಟಿದ್ದಾಳೆ. ಅಲ್ಲಿ ಜಾನಕಿಗೆ ಏನು ಕಾದಿದೆಯೋ.?

ಮರೆತು ಬಿಡು
''ಆನಂದ್ ನ ಮರೆತು ಬಿಡಿ. ಅವನಿಗಿಂತ ಒಳ್ಳೆಯ ಹುಡುಗನ ಜೊತೆ ಮದುವೆ ಮಾಡಿಸುವೆ'' ಅಂತ ಜಾನಕಿಗೆ ಚಂದು ಬಾರ್ಗಿ ಹೇಳಿದ್ದಾರೆ. ಅಪ್ಪನ ಮಾತಿಗೆ ಜಾನಕಿ ಒಪ್ಪಿಗೆ ನೀಡುತ್ತಾಳಾ.? ನೋಡಬೇಕು.


Click it and Unblock the Notifications











