For Quick Alerts
  ALLOW NOTIFICATIONS  
  For Daily Alerts

  ಪ್ರೀತಿಗೆ ಕೊಳ್ಳಿ ಇಟ್ಟು ನಕಲಿ ಐಎಎಸ್ ಅಧಿಕಾರಿ ಜೊತೆ ಮದುವೆ ಆಗ್ತಾಳಾ ಜಾನಕಿ.?

  By Harshitha
  |

  'ಮಗಳು ಜಾನಕಿ'ಗೆ ಯಾವುದು ಆಗಬಾರದು ಅಂತ ತಂದೆ ಸಿ.ಎಸ್.ಪಿ ದೇವರ ಬಳಿ ಬೇಡಿಕೊಳ್ತಿದ್ರೋ, ಅದೇ ಆಗುವ ಹಾಗೆ ಕಾಣುತ್ತಿದೆ.

  ಪುಟ್ಟ 'ಮಗಳು ಜಾನಕಿ'ಯನ್ನ ಹೆಚ್ಚು ಹಚ್ಚಿಕೊಂಡಿದ್ದವರು ತಂದೆ ಸಿ.ಎಸ್.ಪಿ. ಆದ್ರೆ, ಸಿ.ಎಸ್.ಪಿಯಿಂದ ವಿಚ್ಛೇದನ ಪಡೆದ ಬಳಿಕ ಅವರ ಬಳಿ ಮಗ ಮಧುಕರನನ್ನ ಬಿಟ್ಟು ಜಾನಕಿಯನ್ನ ತಮ್ಮ ವಶಕ್ಕೆ ಪಡೆದುಕೊಂಡರು ರಶ್ಮಿ.

  ಚಂದು ಬಾರ್ಗಿ ರಾಜಕಾರಣಿ ಆಗಿದ್ದರೂ, ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಇದೆ ಎಂಬ ವಿಚಾರ ರಶ್ಮಿ ಹಾಗೂ ಸಿ.ಎಸ್.ಪಿಗೆ ಗೊತ್ತು. ಚಂದು ಬಾರ್ಗಿ ಬಗ್ಗೆ ಎಲ್ಲಾ ಗೊತ್ತಿದ್ದರೂ, ಆತನನ್ನೇ ವಿವಾಹವಾದರು ರಶ್ಮಿ.

  ಈಗ ಬೆಳೆದು ದೊಡ್ಡವಳಾಗಿರುವ 'ಮಗಳು ಜಾನಕಿ'ಗೆ ಸಾಕು ತಂದೆ ಚಂದು ಬಾರ್ಗಿ ಒಳ್ಳೆ ಹುಡುಗನನ್ನು ಹುಡುಕಿ ಮದುವೆ ಮಾಡಿದರೆ ಸಾಕು ಅನ್ನೋದು ಸಿ.ಎಸ್.ಪಿ ಬಯಕೆ. ಆದ್ರೆ, ಅದು ಈಡೇರುವ ಸಾಧ್ಯತೆ ಕಮ್ಮಿ. ಮುಂದೆ ಓದಿರಿ...

  ದ್ವೇಷ ಸಾಧಿಸುತ್ತಿರುವ ಚಂದು ಬಾರ್ಗಿ

  ದ್ವೇಷ ಸಾಧಿಸುತ್ತಿರುವ ಚಂದು ಬಾರ್ಗಿ

  ಜಾನಕಿ ಜೊತೆಗಿನ ಮದುವೆ ಮಾತುಕತೆ ನಡೆಸಲು ಚಂದು ಬಾರ್ಗಿ ಬಳಿ ಇನ್ನೇನು ಆನಂದ್ ಬೆಳಗೂರು ಬರಬೇಕಿತ್ತು. ಆದ್ರೆ, ಅಷ್ಟರಲ್ಲಿ ಚಂದು ಬಾರ್ಗಿ ಅರೆಸ್ಟ್ ಆದರು. ಹಾಗಾಗಲು ಸಿ.ಎಸ್.ಪಿ ಕಾರಣ ಎಂಬ ಸಿಟ್ಟು ಚಂದು ಬಾರ್ಗಿಗೆ. ಹೀಗಾಗಿ, ಸಿ.ಎಸ್.ಪಿ ವಿರುದ್ಧ ಸೇಡು ತೀರಿಸಿಕೊಳ್ಳಲು ಜಾನಕಿಯನ್ನ ಹಳ್ಳಕ್ಕೆ ತಳ್ಳುತ್ತಿದ್ದಾರೆ ಚಂದು ಬಾರ್ಗಿ.

  'ಮಗಳು ಜಾನಕಿ': ಮರಳುಗಾಡಿನಲ್ಲಿ ವೀಕ್ಷಕರಿಗೆ ಒಯಾಸಿಸ್ ಸಿಕ್ಕ ಹಾಗಿದೆ.!'ಮಗಳು ಜಾನಕಿ': ಮರಳುಗಾಡಿನಲ್ಲಿ ವೀಕ್ಷಕರಿಗೆ ಒಯಾಸಿಸ್ ಸಿಕ್ಕ ಹಾಗಿದೆ.!

  ಕೇರಳ ಪೊಲೀಸ್ ಠಾಣೆಯಲ್ಲಿ ಆನಂದ್

  ಕೇರಳ ಪೊಲೀಸ್ ಠಾಣೆಯಲ್ಲಿ ಆನಂದ್

  ಸ್ನೇಹಿತೆ ಕಾತ್ಯಾಯಿನಿ ಮೆನನ್ ಆತ್ಮಹತ್ಯೆ ಮಾಡಿಕೊಂಡ ಕೇಸ್ ನಲ್ಲಿ ಆನಂದ್ ಬೆಳಗೂರು ಸಿಲುಕಿದ್ದಾರೆ. ಕಾತ್ಯಾಯಿನಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಆನಂದ್ ಗೂ ಸಂಬಂಧವಿಲ್ಲ. ಆದ್ದರೂ, ಜಾನಕಿಗೆ ಬೇರೆ ಮದುವೆ ಮಾಡಿಸುವ ಉದ್ದೇಶದಿಂದ ಕೇರಳ ಪೊಲೀಸ್ ಠಾಣೆಯಲ್ಲಿಯೇ ಆನಂದ್ ಕೊಳೆಯುವಂತೆ ಚಂದು ಬಾರ್ಗಿ ಮಾಡಿದ್ದಾರೆ.

  ಪ್ರೀತಿಯಲ್ಲಿ ಬಿರುಕು: 'ಮಗಳು ಜಾನಕಿ'ಯ ಹೃದಯ ಚೂರು ಚೂರು.!ಪ್ರೀತಿಯಲ್ಲಿ ಬಿರುಕು: 'ಮಗಳು ಜಾನಕಿ'ಯ ಹೃದಯ ಚೂರು ಚೂರು.!

  ಪ್ರೀತಿಗೆ ಕೊಳ್ಳಿ ಇಟ್ಟ ಜಾನಕಿ

  ಪ್ರೀತಿಗೆ ಕೊಳ್ಳಿ ಇಟ್ಟ ಜಾನಕಿ

  ಜಾನಕಿ ಮನಸ್ಸಿನಲ್ಲಿ ಆನಂದ್ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುವಲ್ಲಿ ಚಂದು ಬಾರ್ಗಿ ಯಶಸ್ವಿ ಆದರು. ಹೀಗಾಗಿ, ಒಲ್ಲದ ಮನಸ್ಸಿನಿಂದಲೇ ಆನಂದ್ ಬೆಳಗೂರು ಪ್ರೀತಿಗೆ ಜಾನಕಿ ಕೊಳ್ಳಿ ಇಟ್ಟರು.

  'ಮಗಳು ಜಾನಕಿ': ಮರಳುಗಾಡಿನಲ್ಲಿ ವೀಕ್ಷಕರಿಗೆ ಒಯಾಸಿಸ್ ಸಿಕ್ಕ ಹಾಗಿದೆ.!'ಮಗಳು ಜಾನಕಿ': ಮರಳುಗಾಡಿನಲ್ಲಿ ವೀಕ್ಷಕರಿಗೆ ಒಯಾಸಿಸ್ ಸಿಕ್ಕ ಹಾಗಿದೆ.!

  ಮೋಸದ ಮದುವೆ

  ಮೋಸದ ಮದುವೆ

  ಸಿ.ಎಸ್.ಪಿ ಸಹೋದರಿ ಮನೆಯಲ್ಲಿ ಬಾಡಿಗೆ ಕೊಡದೆ ನೆಲೆಸಿರುವ ನಿರಂಜನ್ ರನ್ನ ಕರೆತಂದು 'ಐಎಎಸ್ ಅಧಿಕಾರಿ' ಅಂತ ಸುಳ್ಳು ಹೇಳಿ ಮೋಸದಿಂದ ಜಾನಕಿಗೆ ಮದುವೆ ಮಾಡಿಸಲು ಚಂದು ಬಾರ್ಗಿ ಸಕಲ ತಯಾರಿ ನಡೆಸಿದ್ದಾರೆ.

  ಸಾಕು ತಂದೆ ಮಾತಿಗೆ ಬೆಲೆ ಕೊಟ್ಟು ಮದುವೆ ಆಗ್ತಾರಾ ಜಾನಕಿ.?

  ಸಾಕು ತಂದೆ ಮಾತಿಗೆ ಬೆಲೆ ಕೊಟ್ಟು ಮದುವೆ ಆಗ್ತಾರಾ ಜಾನಕಿ.?

  ಇಷ್ಟವಿಲ್ಲದೇ ಇದ್ದರೂ, ನಿರಂಜನ್ ಜೊತೆಗಿನ ಮದುವೆಗೆ ಜಾನಕಿ ಒಪ್ಪಿಗೆ ಕೊಟ್ಟಿದ್ದಾರೆ. ಇತ್ತ ಆನಂದ್ ಗೆ ಜಾಮೀನು ಸಿಗುವ ಸೂಚನೆ ಸಿಕ್ಕಿದೆ. ಜಾಮೀನು ಪಡೆದು ಜಾನಕಿಯನ್ನ ಭೇಟಿ ಮಾಡಿ ಮನವೊಲಿಸುತ್ತಾನಾ ಆನಂದ್.? ಇಲ್ಲ, ಸಾಕು ತಂದೆ ಮಾತಿಗೆ ಬೆಲೆ ಕೊಟ್ಟು ನಿರಂಜನ್ ರನ್ನ ಮದುವೆ ಆಗ್ತಾರಾ ಜಾನಕಿ.? ಈ ಪ್ರಶ್ನೆಗೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.

  English summary
  TN Seetharam's 'Magalu Janaki' written update: Will Janaki get married to Niranjan.?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X