ಸಿ.ಎಸ್.ಪಿ ಮುಂದೆ ನಿರಂಜನ್: ಇಷ್ಟು ದಿನ ಬಚ್ಚಿಟ್ಟ ಸತ್ಯ ಈಗ ಬಯಲು.?

ಲಾಯರ್ ಸಿ.ಎಸ್.ಪಿ ಸಹೋದರಿ ಶ್ಯಾಮಲ ಮನೆಯಲ್ಲಿ ಬಾಡಿಗೆಗೆ ಇದ್ದ ನಿರಂಜನ್, ಮದುವೆ ಆದ್ಮೇಲೆ ಅತ್ತ ಕಡೆ ತಲೆ ಹಾಕಿಯೂ ಮಲಗಿಲ್ಲ. ಇತ್ತ 'ಮಗಳು' ಜಾನಕಿ ಮದುವೆ ಆಗಿರುವ ಹುಡುಗನ ಹೆಸರು ನಿರಂಜನ್ ಧಾವಳಿ ಅಂತ ಸಿ.ಎಸ್.ಪಿಗೆ ಗೊತ್ತು. ಆದ್ರೆ, ಆ ನಿರಂಜನ್.. ಈ ನಿರಂಜನ್ ಇಬ್ಬರೂ ಒಬ್ಬರೇ ಎಂಬ ಸತ್ಯ ಮಾತ್ರ ಸಿ.ಎಸ್.ಪಿಗೆ ತಿಳಿದಿಲ್ಲ.

ಇನ್ನೂ ಸಿ.ಎಸ್.ಪಿಗೂ ನಿರಂಜನ್ ಗೂ ಪರಿಚಯ ಇದೆ ಎಂಬುದು ಇಲ್ಲಿಯವರೆಗೂ ಜಾನಕಿ ಅರಿವಿಗೆ ಬಂದಿಲ್ಲ.

ಇಷ್ಟು ದಿನ ಜಾನಕಿ ಮತ್ತು ಸಿ.ಎಸ್.ಪಿಯಿಂದ ನಿರಂಜನ್ ದೊಡ್ಡ ಸತ್ಯವನ್ನು ಮುಚ್ಚಿಟ್ಟಿದ್ದರು. ಆ ಸತ್ಯ ಬಟಾ ಬಯಲಾಗುವ ಸಮಯ ಹತ್ತಿರಕ್ಕೆ ಬಂದಿದೆ. ಭಯ ಪಟ್ಟುಕೊಂಡು ಜೀವನ ಸಾಗಿಸುವ ಬದಲು ಸಿ.ಎಸ್.ಪಿ ಮುಂದೆ ಎಲ್ಲಾ ಸತ್ಯ ಬಾಯಿಬಿಡಲು ನಿರಂಜನ್ ಮನಸ್ಸು ಮಾಡಿದ್ದಾರೆ. ಮುಂದೆ ಓದಿರಿ...

ತನಿಖೆ ಚಾಲ್ತಿಯಲ್ಲಿದೆ

ತನಿಖೆ ಚಾಲ್ತಿಯಲ್ಲಿದೆ

ಮದುವೆ ಆಗುವಾಗ ನಿರಂಜನ್ ಸುಳ್ಳು ಹೇಳಿ ಜಾನಕಿಗೆ ಮೋಸ ಮಾಡಿದ್ದಾರೆ ಎಂಬ ಅನಾಮಿಕ ಕಂಪ್ಲೇಂಟ್ ಸಿ.ಎಂ ಕಛೇರಿ ತಲುಪಿತ್ತು. ಪರಿಣಾಮ, ತನಿಖೆ ನಡೆಸಲು ಸಿ.ಎಂ ಸಾಹೇಬ್ರು, ಆನಂದ್ ಬೆಳಗೂರು ರನ್ನ ನೇಮಿಸಿದ್ದರು. ಸದ್ಯ ತನಿಖೆ ಚಾಲ್ತಿಯಲ್ಲಿದ್ದು, ನಿರಂಜನ್ ಸುಳ್ಳು ಹೇಳಿರುವ ಬಗ್ಗೆ ಆನಂದ್ ಮುಂದೆ ಜಾನಕಿ ಒಪ್ಪಿಕೊಂಡಿದ್ದಾರೆ.

ಸಂಕಷ್ಟದಲ್ಲಿ ನಿರಂಜನ್

ಸಂಕಷ್ಟದಲ್ಲಿ ನಿರಂಜನ್

ನಿರಂಜನ್ ಮೋಸ ಮಾಡಿರುವ ಬಗ್ಗೆ ಪೊಲೀಸರ ಮುಂದೆ ಜಾನಕಿ ಹೇಳಿಕೆ ಕೊಟ್ಟಿರುವ ಕಾರಣ ನಿರಂಜನ್ ಗೆ ಬಂಧನ ಭೀತಿ ಎದುರಾಗಿದೆ. ಸಂಕಷ್ಟದಲ್ಲಿ ಇರುವ ನಿರಂಜನ್ ರನ್ನ ಬಚಾವ್ ಮಾಡಲು ಸಿ.ಎಸ್.ಪಿ ಮನೆಗೆ ಬರುವಂತೆ ಪತಿಗೆ ಜಾನಕಿ ಸೂಚಿಸಿದ್ದರು.

ಸಿ.ಎಸ್.ಪಿ ಮನೆಯಲ್ಲಿ ನಿರಂಜನ್

ಸಿ.ಎಸ್.ಪಿ ಮನೆಯಲ್ಲಿ ನಿರಂಜನ್

ಜಾನಕಿ ಬರುವ ಮೊದಲೇ ಸಿ.ಎಸ್.ಪಿ ಮನೆಯಲ್ಲಿ ನಿರಂಜನ್ ಪ್ರತ್ಯಕ್ಷವಾಗಿದ್ದಾರೆ. ಧೈರ್ಯ ಮಾಡಿ ಇರುವ ಸತ್ಯವನ್ನ ಸಿ.ಎಸ್.ಪಿ ಮುಂದೆ ನಿರಂಜನ್ ಹೇಳುತ್ತಾರಾ.? ಎಂಬುದೇ ವೀಕ್ಷಕರ ತಲೆಯಲ್ಲಿ ಕೊರೆಯುತ್ತಿರುವ ಪ್ರಶ್ನೆ.

ಮುಂದೇನಾಗುತ್ತೆ.?

ಮುಂದೇನಾಗುತ್ತೆ.?

ಮೋಸದ ಮದುವೆ ಹಿಂದೆ ಚಂದು ಭಾರ್ಗಿ ಕೈವಾಡ ಇತ್ತು ಅಂತ ನಿರಂಜನ್ ಬಾಯ್ಬಿಟ್ಟರೆ, ಸಿ.ಎಸ್.ಪಿ ಸುಮ್ಮನೆ ಕೂರುತ್ತಾರೆಯೇ.? ಖಂಡಿತ ಇಲ್ಲ. ಮಗಳಿಗೆ ಮೋಸ ಮಾಡಿರುವವರ ವಿರುದ್ಧ ಸಿ.ಎಸ್.ಪಿ ಸಮರ ಸಾರುವುದು ಗ್ಯಾರೆಂಟಿ. ಒಟ್ನಲ್ಲಿ, ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಗಳು ಜಾನಕಿ' ಧಾರಾವಾಹಿಗೆ ಸದ್ಯ ದೊಡ್ಡ ತಿರುವು ಸಿಗುವುದು ಖಚಿತ.

More from Filmibeat

English summary
TN Seetharam's 'Magalu Janaki' written update: Will Niranjan reveal truth in front of CSP.?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X