ಸತ್ಯ ಬಿಚ್ಚಿಡುತ್ತಾರಾ ನಿರಂಜನ್.? ಚಂದು ಭಾರ್ಗಿ ಬಂಡವಾಳ ಬಯಲಾಗುತ್ತಾ.?
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಗಳು ಜಾನಕಿ' ಧಾರಾವಾಹಿ ದಿನೇ ದಿನೇ ಕುತೂಹಲ ಕೆರಳಿಸುತ್ತಿದೆ.
ಮದುವೆ ಆದ ಕೆಲವೇ ದಿನಗಳಲ್ಲಿ ನಿರಂಜನ್ ಐಎಎಸ್ ಆಫೀಸರ್ ಅಲ್ಲ ಎಂಬ ಸತ್ಯ ಜಾನಕಿಗೆ ಗೊತ್ತಾಯಿತು. ಅಲ್ಲದೇ, ನಿರಂಜನ್ ಐಎಎಸ್ ಆಫೀಸರ್ ಅಲ್ಲ ಎಂದು ಮದುವೆಗೂ ಮುನ್ನವೇ ತಾಯಿ ರಶ್ಮಿಗೂ ತಿಳಿದಿತ್ತು ಎಂಬುದು ಜಾನಕಿ ಅರಿವಿಗೆ ಬಂತು. ಅದಾಗಲೇ ಮಾನಸಿಕವಾಗಿ ನೊಂದಿದ್ದ ಜಾನಕಿಗೆ ಇದು ಮತ್ತಷ್ಟು ಆಘಾತ ನೀಡಿತು.
ಜಾನಕಿಗೆ ವಿಚ್ಛೇದನ ನೀಡಲು ಮುಂದಾಗಿರುವ ನಿರಂಜನ್, ಸದ್ಯ ತಂದೆ-ತಾಯಿಯನ್ನು ಭೇಟಿ ಆಗಲು ಬಂದಿದ್ದಾರೆ. ಜಾನಕಿಗೆ ಇರುವ ಸತ್ಯವನ್ನೆಲ್ಲಾ ಹೇಳಿಬಿಡಲು ನಿರಂಜನ್ ಮನಸ್ಸು ಮಾಡಿದ್ದಾರೆ. ಆದ್ರೆ, ಅದಕ್ಕೆ ಆತನ ತಂದೆಯೇ ಅಡ್ಡಗಾಲು ಹಾಕಿದರೆ ಆಶ್ಚರ್ಯ ಇಲ್ಲ.! ಮುಂದೆ ಓದಿರಿ...

ಸಿ.ಎಸ್.ಪಿಗೆ ಸತ್ಯ ತಿಳಿಯಿತು
ತಾನು ಐಎಎಸ್ ಆಫೀಸರ್ ಅಲ್ಲ ಅಂತ ಮದುವೆಗೂ ಮುನ್ನವೇ ತಾಯಿ ರಶ್ಮಿಗೆ ನಿರಂಜನ್ ತಿಳಿಸಿದ್ದಾರೆ. ಜಾನಕಿ ಒಪ್ಪಿಕೊಂಡರೆ ಮಾತ್ರ ಮದುವೆ ಅಂತ ನಿರಂಜನ್ ಹೇಳಿದ್ದರೂ ತಾಯಿ ರಶ್ಮಿ ಮಾತ್ರ ನನಗೆ ಸತ್ಯ ಹೇಳಲಿಲ್ಲ ಎಂದು ಶ್ಯಾಮಲ ಬಳಿ ಜಾನಕಿ ಹೇಳಿಕೊಂಡರು. ಇದು ಸಿ.ಎಸ್.ಪಿಗೂ ಗೊತ್ತಾಯಿತು. ನಿರಂಜನ್, ರಶ್ಮಿ ಮತ್ತು ಚಂದು ಭಾರ್ಗಿ ಸೇರಿ ಜಾನಕಿಗೆ ಮೋಸ ಮಾಡಿದ್ದಾರೆ ಎಂಬ ಅನುಮಾನ ಸಿ.ಎಸ್.ಪಿಗೆ ಕಾಡುತ್ತಿದೆ.

ಮರ್ಡರ್ ಕೇಸ್
ಜಾನಕಿಗೆ ಸತ್ಯ ಹೇಳಲು ನಿರಂಜನ್ ಮನಸ್ಸು ಮಾಡಿದ್ದಾರೆ. ಆದ್ರೆ, ನಿರಂಜನ್ ಬಾಯಿಬಿಟ್ಟರೆ, ಆತನ ತಂದೆ ಮೇಲಿನ ಮರ್ಡರ್ ಕೇಸ್ ಮತ್ತೆ ರೀ-ಓಪನ್ ಆಗುವ ಸಾಧ್ಯತೆ ಇದೆ. ಹೀಗಾಗಿ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ನಿರಂಜನ್ ಸಿಲುಕಿದ್ದಾರೆ.

ಚಂದು ಭಾರ್ಗಿ ಮೇಲೆ ನಿರಂಜನ್ ತಂದೆಗೆ ಅಪಾರ ಗೌರವ
ಚಂದು ಭಾರ್ಗಿ ಮೇಲೆ ನಿರಂಜನ್ ತಂದೆಗೆ ಅಪಾರ ಗೌರವ ಇದೆ. ಹೀಗಾಗಿ, ಚಂದು ಭಾರ್ಗಿ ಮಾತಿಗೆ ವಿರುದ್ಧವಾಗಿ ನಡೆಯಲು ನಿರಂಜನ್ ತಂದೆ ಒಪ್ಪಿಕೊಳ್ಳುತ್ತಾರಾ ಅನ್ನೋದೇ ಸದ್ಯದ ಕುತೂಹಲ.

ಸಣ್ಣ ಸಾಕ್ಷಿ ಸಿಕ್ಕರೂ ಸಾಕು.!
ಚಂದು ಭಾರ್ಗಿ ವಿರುದ್ಧ ಸಣ್ಣ ಸಾಕ್ಷಿ ಸಿಕ್ಕರೂ, ಕೇಸ್ ಹಾಕುವೆ ಅಂತ ಸಿ.ಎಸ್.ಪಿ ನಿರ್ಧಾರ ಮಾಡಿದ್ದಾಗಿದೆ. ಮಗಳು ಜಾನಕಿಯ ಬಾಳನ್ನು ಹಾಳು ಮಾಡಿದ ಚಂದು ಭಾರ್ಗಿಗೆ ತಕ್ಕ ಪಾಠ ಕಲಿಸಲು ಸಿ.ಎಸ್.ಪಿ ಸಿದ್ಧವಿದ್ದಾರೆ. ಮುಂದೆ ಧಾರಾವಾಹಿಗೆ ಇನ್ಯಾವ ತಿರುವು ಸಿಗುತ್ತೋ, ನೋಡಬೇಕು.


Click it and Unblock the Notifications











