»   » ವಾವ್.. ಎರಡು ಕಾಲುಗಳ ಆಧಾರ ಇಲ್ಲದೆ ನಿಂತ ರಚಿತಾ ರಾಮ್!

ವಾವ್.. ಎರಡು ಕಾಲುಗಳ ಆಧಾರ ಇಲ್ಲದೆ ನಿಂತ ರಚಿತಾ ರಾಮ್!

Posted By:
Subscribe to Filmibeat Kannada

ನಟಿ ರಚಿತಾ ರಾಮ್ ಅವರ ಕಿರುತೆರೆಯ 'ಕಾಮಿಡಿ ಟಾಕೀಸ್' ಕಾರ್ಯಕ್ರಮ ಎರಡನೇ ವಾರ ಮುಗಿಸಿ ಮೂರನೇ ವಾರಕ್ಕೆ ಕಾಲಿಟ್ಟಿದೆ. ಇದೀಗ ಇದೇ ಕಾರ್ಯಕ್ರಮದಲ್ಲಿ ರಚಿತಾ ತಮ್ಮ ಎರಡು ಕಾಲುಗಳ ಆಧಾರ ಇಲ್ಲದೆ ನಿಂತಿದ್ದಾರೆ.

ರಚಿತಾ ರಾಮ್ 'ಕಾಮಿಡಿ ಟಾಕೀಸ್' ಡಬ್ಬಾ, ಡುಬಾಕ್ ಪ್ರೋಗ್ರಾಂ ಅಂತೆ.!

'ಕಾಮಿಡಿ ಟಾಕೀಸ್' ಕಾರ್ಯಕ್ರಮಕ್ಕೆ ಖ್ಯಾತ ಜಾದುಗಾರ ಗಣೇಶ್ ಅತಿಥಿ ಆಗಿ ಆಗಮಿಸಿದ್ದರು. ಈ ವೇಳೆ ತಮ್ಮ ಕೈಚಳಕ ತೋರಿಸಿದ ಅವರು ಮ್ಯಾಜಿಕ್ ಮಾಡಿ ರಚಿತಾ ಅವರು ತಮ್ಮ ಕಾಲುಗಳ ಸಹಾಯವಿಲ್ಲದೆ ನಿಲ್ಲುವಂತೆ ಮಾಡಿ ಬಿಟ್ಟರು.

Magician Ganesh did a magic in 'Comedy Talkies'

ಗಣೇಶ್ ಅವರ ಮ್ಯಾಜಿಕ್ ನೋಡಿ 'ಕಾಮಿಡಿ ಟಾಕೀಸ್' ಸೆಟ್ ನಲ್ಲಿ ಇರುವವರೆಲ್ಲ ಒಂದು ಕ್ಷಣ ಆಶ್ಚರ್ಯವಾದರು. ಸೃಜನ್, ಕುರಿ ಪ್ರತಾಪ್ ಇಬ್ಬರು ಹಾಗೆ ನೋಡುತ್ತಿದ್ದರು. ಇನ್ನು 'ಕಲರ್ಸ್ ಕನ್ನಡ' ವಾಹಿನಿಯ ಫೇಸ್ ಬುಕ್ ಪೇಜ್ ನಲ್ಲಿ ಈ ವಿಡಿಯೋ ಸಖತ್ ಚರ್ಚೆ ಮಾಡುತ್ತಿದೆ. ಅಂದಹಾಗೆ, 'ಕಾಮಿಡಿ ಟಾಕೀಸ್' ಕಾರ್ಯಕ್ರಮದ ಈ ಸಂಚಿಕೆ ಈಗಾಗಲೇ ಪ್ರಸಾರ ಆಗಿದೆ.

English summary
Popular magician Ganesh's magic in 'Comedy Talkies' program.
Please Wait while comments are loading...