twitter
    For Quick Alerts
    ALLOW NOTIFICATIONS  
    For Daily Alerts

    ಮಹಾಭಾರತದ 'ಭೀಮ' ಪಾತ್ರಧಾರಿ ಸಾಧನೆ ಒಂದೆರಡಲ್ಲ: ಒಲಿಂಪಿಕ್ಸ್‌, ಏಷ್ಯನ್ ಗೇಮ್ಸ್: ಅದೆಷ್ಟು ಸಾಧನೆ?

    |

    80 ಹಾಗೂ 90ರ ದಶಕದಲ್ಲಿ ಜನಿಸಿದ ಮಕ್ಕಳಿಗೆ ಮಹಾಭಾರತದ ಭೀಮನ ಬಗ್ಗೆ ಚೆನ್ನಾಗಿ ಗೊತ್ತಿರುತ್ತೆ. ಶಾಲೆಯ ಪಠ್ಯಗಳಲ್ಲಿ ಓದುವುದಕ್ಕಿಂತ ಹೆಚ್ಚಾಗಿ ಬಿ ಆರ್ ಚೋಪ್ರಾ ನಿರ್ಮಿಸಿದ್ದ ಪೌರಾಣಿಕ ಮೆಗಾ ಧಾರಾವಾಹಿ 'ಮಹಾಭಾರತ'ವೇ ಕಣ್ಮುಂದೆ ಬರುತ್ತಿತ್ತು. ಈ ಧಾರಾವಾಹಿಯ ಒಂದೊಂದು ಪಾತ್ರ ಇಂದಿಗೂ ನೆನೆಪಿನಲ್ಲಿ ಉಳಿಯುತ್ತೆ. ಅದರಲ್ಲೊಂದು 'ಭೀಮ'ನ ಪಾತ್ರ. ಇದೂವರೆಗೂ ಈ ಪಾತ್ರದಲ್ಲಿ ನಟಿಸಿದ ನಟನನ್ನು ಭೀಮ ಎಂತಲೇ ಗುರುತಿಸುವುದುಂಟು. ಅಸಲಿಗೆ ಮಹಾಭಾರತ ಮೆಗಾ ಧಾರಾವಾಹಿಯ ಭೀಮನ ಅಸಲಿ ಹೆಸರು ಪ್ರವೀಣ್ ಕುಮಾರ್ ಸೋಬ್ತಿ.

    ಮಹಾಭಾರತದಲ್ಲಿ ಭೀಮನ ಪಾತ್ರದ ಮೂಲಕ ಜನಪ್ರಿಯರಾಗಿದ್ದ ನಟ ಪ್ರವೀಣ್ ಕುಮಾರ್ ಸೋಬ್ತಿ 74 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಒಂದು ಪಾತ್ರ ಅವರ ಅಸಲಿ ಹೆಸರನ್ನೇ ಮರೆಮಾಚುವಷ್ಟು ಪ್ರಬುದ್ಧವಾಗಿ ಬೆಳೆದಿತ್ತು. ಸೋಬ್ತಿಯನ್ನು ಸಾಕಷ್ಟು ಮಂದಿ ಕೇವಲ ನಟ ಅಂತಷ್ಟೇ ಗುರುತಿಸುವುದೂ ಉಂಟು. ಆದರೆ, ಸೋಬ್ತಿ ಒಳ್ಳೆಯ ಕ್ರೀಡಾಪಟು. ಕ್ರೀಡೆಯಲ್ಲಿ ಇವರು ಸಾಧನೆ 'ಭೀಮ'ನ ಪಾತ್ರದೊಳಗೆ ಮುಳುಗಿ ಹೋಗಿತ್ತು.

    ಭೀಮನ ಪಾತ್ರಕ್ಕೆ ತಕ್ಕಂತಹ ಮೈಕಟ್ಟು

    ಭೀಮನ ಪಾತ್ರಕ್ಕೆ ತಕ್ಕಂತಹ ಮೈಕಟ್ಟು

    ಪ್ರವೀಣ್ ಕುಮಾರ್‌ ಸೋಬ್ತಿ ತನ್ನ ಕಟುಮಸ್ತಾದ ಮೈಕಟ್ಟುಗೆ ಜನಪ್ರಿಯರಾಗಿದ್ದರು. ಪೌರಾಣಿಕ ಮೆಗಾ ಧಾರಾವಾಹಿ ಮಹಾಭಾರತದಲ್ಲಿ ಭೀಮ ಪಾತ್ರಕ್ಕೆ ತಕ್ಕಂತೆ ಇವರ ದೇಹವಿತ್ತು. ಪಂಜಾಬ್ ಮೂಲದ ಪ್ರವೀಣ್ ಅದ್ಯಾವಾಗ ಭೀಮ ಪಾತ್ರದಲ್ಲಿ ಕಾಣಿಸಿಕೊಂಡರೋ ಅಲ್ಲಿಂದ ಅವರನ್ನು ಜನರು ಭೀಮ ಎಂದೇ ಗುರುತಿಸುತ್ತಿದ್ದರು. ಪ್ರವೀಣ್ ಕುಮಾರ್ ಸೋಬ್ತಿ ಎಂದರೆ ಗುರುತು ಹಿಡಿಯದಷ್ಟು ಭೀಮನ ಪಾತ್ರ ಜನಪ್ರಿಯವಾಗಿತ್ತು. ಇದೇ ಜನಪ್ರಿಯತೆ ಕ್ರೀಡಾ ಲೋಕದಲ್ಲಿ ಮಾಡಿದ ಸಾಧನೆಯನ್ನು ಮರೆಮಾಡಿತ್ತು.

     ಭೀಮ ಉತ್ತಮ ಕ್ರೀಡಾಪಟು

    ಭೀಮ ಉತ್ತಮ ಕ್ರೀಡಾಪಟು

    ನಿಮಗೆ ಗೊತ್ತಾ 'ಮಹಾಭಾರತ' ಮೆಗಾ ಧಾರಾವಾಹಿಯ ಭೀಮ ಒಬ್ಬ ಒಳ್ಳೆಯ ಕ್ರೀಡಾ ಪಟು. ನಟನೆಗೆ ಮರಳುವ ಮುನ್ನ ಪ್ರವೀಣ್ ಕುಮಾರ್ ಸೋಬ್ತಿ ಹ್ಯಾಮರ್ ಮತ್ತು ಡಿಸ್ಕಸ್ ಥ್ರೋ ಅಥ್ಲೀಟ್ ಆಗಿದ್ದವರು. ಈ ಎರಡೂ ಪ್ರಕಾರಗಳಲ್ಲಿ ಭಾರತವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದರು. ಏಪ್ಯನ್ ಗೇಮ್ಸ್ ನಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ ನಾಲ್ಕು ಬಾರಿ ಪದಕ ಗೆದ್ದಿದ್ದಾರೆ. ಎರಡು ಬಾರಿ ಚಿನ್ನ, ಒಮ್ಮೆ ಬೆಳ್ಳಿ ಹಾಗೂ ಒಮ್ಮೆ ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದ್ದರು. ಇಷ್ಟೇ ಅಲ್ಲ 1968ರಲ್ಲಿ ಮೆಕ್ಸಿಕೋದಲ್ಲಿ ನಡೆದ ಒಲಿಂಪಿಕ್ಸ್ ಹಾಗೂ 1972ರಲ್ಲಿ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

     ಭಾರತೀಯ ಸೇನೆಯಲ್ಲಿ ಡೆಪ್ಯುಟಿ ಕಮಾಂಡೆಂಟ್

    ಭಾರತೀಯ ಸೇನೆಯಲ್ಲಿ ಡೆಪ್ಯುಟಿ ಕಮಾಂಡೆಂಟ್

    ಪ್ರವೀಣ್ ಕುಮಾರ್ ಸೋಬ್ತಿ ಕ್ರೀಡಾ ವಿಭಾಗದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದರು. ಹ್ಯಾಮರ್ ಮತ್ತು ಡಿಸ್ಕಸ್ ಥ್ರೋ ಅಥ್ಲಿಟ್ ಆಗಿದ್ದ ಪ್ರವೀಣ್‌ಗೆ ಭಾರತೀಯ ಸೇನೆ (ಬಿಎಸ್‌ಎಫ್‌)ನಲ್ಲಿ ಡೆಪ್ಯುಟಿ ಕಮಾಂಡೆಂಟ್ ಹುದ್ದೆಯನ್ನು ಗಿಟ್ಟಿಸಿಕೊಂಡಿದ್ದರು. ಇವರ ಸಾಧನೆಗೆ ಅರ್ಜುನಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಮಹಾಭಾರತ ಧಾರಾವಾಹಿಯ ಭೀಮ ಹೆಸರಿಗೆ ತಕ್ಕಂತೆ ಸಾಧನೆಯಲ್ಲೂ ಭೀಮನಾಗಿದ್ದರು.

     50 ಸಿನಿಮಾಗಳಲ್ಲಿ ಪ್ರವೀಣ್ ನಟನೆ

    50 ಸಿನಿಮಾಗಳಲ್ಲಿ ಪ್ರವೀಣ್ ನಟನೆ

    ಮಹಾಭಾರತ ಧಾರಾವಾಹಿ ಕ್ರೀಡೆಯಷ್ಟೇ ಅಲ್ಲ. ಸಿನಿಮಾಗಳಲ್ಲೂ ನಟಿಸಿದ್ದರು. ಸುಮಾರು 50 ಸಿನಿಮಾಗಳಲ್ಲಿ ಅಭಿನಯಿಸಿ ಮನಗೆದ್ದಿದ್ದರು. ಅಮಿತಾಭ್ ಬಚ್ಚನ್‌ ನಟಿಸಿದ 'ಶಾಹೆನ್‌ಶಾ'ದಲ್ಲಿ ಮುಖ್ತಾರ್ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರೊಂದಿಗೆ ಕರಿಷ್ಮಾ ಕುದ್ರತ್ ಕಾ, ಯುದ್, ಜಬರ್ದಸ್ತ್, ಸಿಂಘಸನ್, ಖುದ್ಗರ್ಜ್, ಲೋಹಾ, ಮೊಹಬ್ಬತ್ ಕೆ ದುಷ್ಮನ್, ಇಲಾಖಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ 'ಮಹಾಭಾರತ'ದ ಭೀಮನ ಪಾತ್ರ ಅವರ ಸಾವಿನ ಬಳಿಕವೂ ಅಮರಗೊಳಿಸಿದೆ.

    English summary
    Mahabharat Bheem Praveen Kumar Sobti passes away. Before Entering into cinema he was represented India twice in Olympics, four time four-time Asian Games medallist and also served in India Army.
    Tuesday, February 8, 2022, 14:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X