For Quick Alerts
  ALLOW NOTIFICATIONS  
  For Daily Alerts

  ವೀಕ್ಷಕರ ಒತ್ತಾಯದ ಮೇರೆಗೆ ಮತ್ತೆ ಬರ್ತಿದೆ 'ಮಹಾಭಾರತ' ಧಾರಾವಾಹಿ

  |

  2013ರಲ್ಲಿ ಹಿಂದಿ ಕಿರುತೆರೆಯಲ್ಲಿ ಪ್ರಸಾರವಾಗಿದ್ದ ಅದ್ದೂರಿ ಮಹಾಭಾರತ ಧಾರಾವಾಹಿಯನ್ನು ಅದೆಷ್ಟು ಮಂದಿ ಕಣ್ತುಂಬಿಕೊಂಡಿದ್ದಾರೊ ಇಲ್ವೋ ಗೊತ್ತಿಲ್ಲ. ಆದರೆ ಕಳೆದ ವರ್ಷ ಅದೇ ಧಾರಾವಾಹಿ ಕನ್ನಡಕ್ಕೆ ಬಡ್ ಆಗಿ ಪ್ರಸಾರ ಪ್ರಾರಿಭಿಸಿದ್ದಾಗ ಬಹುತೇಕ ಕನ್ನಡ ವೀಕ್ಷಕರು ಮಹಾಭಾರತ ನೋಡಿ ಆನಂದಿಸಿದ್ದರು.

  ಕನ್ನಡದಲ್ಲೂ ಇಂಥ ಧಾರಾವಾಹಿಗಳು ಬರಬೇಕೆನ್ನುವ ಬಯಕೆಯನ್ನು ಕನ್ನಡ ಪ್ರೇಕ್ಷರಿಟ್ಟಿದ್ದರು. ಕಳೆದ ವರ್ಷ ಲಾಕ್ ಡೌನ್ ಆದ ಬಳಿಕ ಸಾಕಷ್ಟು ಹಿಂದಿ ಧಾರಾವಾಹಿಗಳು ಕನ್ನಡಕ್ಕೆ ಬಡ್ ಆಗಿ ಪ್ರಸಾರ ಆರಂಭಿಸಿದ್ದವು. ಅವುಗಳಲ್ಲಿ ಕನ್ನಡಿಗರ ಮನಗೆದ್ದ ಧಾರಾವಾಹಿ ಎಂದರೆ ಮಹಾಭಾರತ.

  ಜೀ ಕನ್ನಡದಲ್ಲಿ ಹೊಸ ಧಾರಾವಾಹಿ 'ಕೃಷ್ಣ ಸುಂದರಿ' ಪ್ರಾರಂಭಜೀ ಕನ್ನಡದಲ್ಲಿ ಹೊಸ ಧಾರಾವಾಹಿ 'ಕೃಷ್ಣ ಸುಂದರಿ' ಪ್ರಾರಂಭ

  ವಿಶೇಷ ಎಂದರೆ 'ಮಹಾಭಾರತ' ಈಗ ಮತ್ತೆ ಬರ್ತಿದೆ. ಈ ವರ್ಷದ ಲಾಕ್ ಡೌನ್ ನಲ್ಲೂ ಧಾರಾವಾಹಿಯನ್ನು ಮರು ಪ್ರಸಾರ ಮಾಡಲು ವಾಹಿನಿ ನಿರ್ಧರಿಸಿದೆ. ವೀಕ್ಷಕರ ಒತ್ತಾಯದ ಮೇರೆಗೆ ಮಹಾಭಾರತ ಮತ್ತೆ ಕನ್ನಡ ಕಿರುತೆರೆಯಲ್ಲಿ ಪ್ರಸಾರ ಪ್ರಾರಂಭಿಸಲಿದೆ.

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶನಿವಾರ ಮತ್ತು ಭಾನುವಾರ ಎರಡು ದಿನ ಮಾತ್ರ ಮಹಾಭಾರತ ಧಾರಾವಾಹಿ ಪ್ರಸಾರವಾಗಲಿದೆ. ಸಂಜೆ 6 ಗಂಟೆಯಿಂದ 8.30 ರವರೆಗೆ ಮಹಾಭಾರತ ಪ್ರಸಾರವಾಗುತ್ತಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮಹಾಭಾರತದ ಪ್ರತಿಯೊಂದು ದೃಶ್ಯಗಳು ಕಣ್ಣಿಗೆ ಕಟ್ಟಿದಂತಿದೆ.

  ತಿವಾರಿ ಕುಟುಂಬ ನಿರ್ಮಿಸಿದ ಈ ಧಾರಾವಾಹಿಯಲ್ಲಿ ಅದ್ಧೂರಿ ಸೆಟ್, ಸಿನಿಮಾ ಶೈಲಿಯ ನಿರೂಪಣೆ, ಅದ್ಭುತವಾದ ವಿ ಎಫ್ ಎಕ್ಸ್ ಗಳು, ಗ್ರಾಫಿಕ್ಸ್‌ಗಳು, ಹಿನ್ನೆಲೆ ಸಂಗೀತ, ಹಲವು ಹೊಸ ಅದ್ಧೂರಿ ಲೊಕೇಶನ್‌ಗಳು, ಧಾರಾವಾಹಿಯ ಪ್ರತಿಯೊಂದು ಪಾತ್ರಗಳು ಸಹ ಪ್ರೇಕ್ಷಕರ ಮನಗೆದ್ದಿವೆ. ಪ್ರತಿಯೊಬ್ಬರ ಅಭಿನಯ ಮನೋಜ್ಞವಾಗಿದೆ. ಸೌರಭ್ ಜೈನ್, ಅಹಂ ಶರ್ಮಾ, ಶಹೀರ್ ಶೇಖ್, ಸೌರಬ್ ಗುರ್ಜರ್, ಪೂಜಾ ಶರ್ಮಾ, ರಿಯಾ ದೀಪ್ಸಿ, ಅನೂಪ್ ಸಿಂಗ್ ಸೇರಿದಂತೆ ಅನೇಕ ಕಲಾವಿದರು ಬಣ್ಣಹಚ್ಚಿದ್ದರು.

  English summary
  Mahabharata Kannada dubbed version to be re telecast on Star Suvarna.
  Saturday, May 15, 2021, 8:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X