twitter
    For Quick Alerts
    ALLOW NOTIFICATIONS  
    For Daily Alerts

    12 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿದ ಮಹಾಭಾರತದ 'ಕೃಷ್ಣ': ವಿಚ್ಛೇದನ ಘೋಷಣೆ

    |

    ಭಾರತೀಯ ಸಿನಿಮಾರಂಗದ ಇತಿಹಾಸದಲ್ಲಿ ವಿಚ್ಛೇದನ ಸರಣಿ ಮುಂದುವರೆದಿದೆ. ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ ಪ್ರಕರಣ ಇನ್ನೇನು ತಣ್ಣಗಾಗುತ್ತಿದೆ ಅನ್ನುವಾಗಲೇ ದಕ್ಷಿಣ ಭಾರತದಲ್ಲಿ ಮತ್ತೊಂದು ಡಿವೋರ್ಸ್ ಪ್ರಕರಣ ಎದುರಾಗಿತ್ತು. ಸೂಪರ್‌ಸ್ಟಾರ್ ರಜನಿಕಾಂತ್ ಅಳಿಯ ಧನುಷ್ ಹಾಗೂ ಮಗಳು ಐಶ್ವರ್ಯಾ ವಿಚ್ಛೇದನ ಘೋಷಿಸಿದ್ದರು. ಈಗ ಸುಪ್ರಸಿದ್ಧ ಧಾರಾವಾಹಿ ಮಹಾಭಾರತದಲ್ಲಿ ಕೃಷ್ಣ ಪಾತ್ರ ನಿರ್ವಹಿಸಿದ್ದ ನಿತಿಶ್ ಭಾರದ್ವಾಜ್ ವಿಚ್ಚೇದನ ನೀಡಿರುವ ಸುದ್ದಿ ಸದ್ದು ಮಾಡುತ್ತಿದೆ ಮಾಡಿದ್ದಾರೆ.

    ಸೆಲೆಬ್ರೆಟಿಗಳು ಒಬ್ಬೊಬ್ಬರಾಗಿಯೇ ದಾಂಪತ್ಯ ಜೀವನದಿಂದ ಹಿಂದೆ ಸರಿಯುತ್ತಿದ್ದಾರೆ. ಚಿತ್ರರಂಗದಲ್ಲಿ ಶುರುವಾಗಿರುವ ಹೊಸ ಟ್ರೆಂಡ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅದರಲ್ಲೂ ಎಲ್ಲರಿಗೂ ಆದರ್ಶವಾಗಿ ಕಂಡಿದ್ದ ಮಹಾಭಾರತದ ಧಾರಾವಾಹಿಯ ಕೃಷ್ಣನ ಪಾತ್ರ ನಿರ್ವಹಿಸಿದ್ದ ನಿತಿಶ್ ಭಾರದ್ವಾಜ್ ವಿಚ್ಛೇದನದ ಸುದ್ದಿ ಚಿತ್ರರಂಗದಲ್ಲಿ ಮತ್ತಷ್ಟು ಸಂಚಲನ ಸೃಷ್ಟಿಸಿದೆ.

    ವಿಚ್ಛೇದನ ಘೋಷಿಸಿದ ಮಹಾಭಾರತದ ಕೃಷ್ಣ

    ವಿಚ್ಛೇದನ ಘೋಷಿಸಿದ ಮಹಾಭಾರತದ ಕೃಷ್ಣ

    ಬಿಆರ್ ಚೋಪ್ರಾ ನಿರ್ಮಾಣದ ಮೆಗಾ ಧಾರಾವಾಹಿ ಮಹಾಭಾರತದಲ್ಲಿ ನಿತಿಶ್ ಭಾರದ್ವಾಜ್ ಕೃಷ್ಣ ಪಾತ್ರ ನಿರ್ವಹಿಸಿದ್ದರು. ಇದೇ ಪಾತ್ರದ ಮೂಲಕ ದೇಶದ ಪ್ರತಿ ಮನೆಯಲ್ಲೂ ಹೆಸರು ವಾಸಿಯಾಗಿದ್ದ ನಟ. ಈಗ ಪತ್ನಿ ಸ್ಮಿತಾ ಘಾಟೆ ಜೊತೆಗಿನ 12 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿದ ಸುದ್ದಿಯ ಮೂಲಕ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. 2019 ಸೆಪ್ಟೆಂಬರ್‌ನಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಗಿ ಖಾಸಗಿ ಮಾಧ್ಯಮಗಳಿಗೆ ಬಹಿರಂಗ ಪಡಿಸಿದ್ದಾರೆ.

    ಫ್ಯಾಮಿಲಿ ಕೋರ್ಟ್‌ನಲ್ಲಿ ವಿಚ್ಛೇದನದ ದೂರು

    ಫ್ಯಾಮಿಲಿ ಕೋರ್ಟ್‌ನಲ್ಲಿ ವಿಚ್ಛೇದನದ ದೂರು

    "ಹೌದು ನಾನು ಸೆಪ್ಟೆಂಬರ್ 2019ರಂದು ಮುಂಬೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನ ನೀಡುವಂತೆ ಅರ್ಜಿ ಸಲ್ಲಿಸಿದ್ದೇನೆ. ನಾವು ಯಾಕೆ ಬೇರೆಯಾಗುತ್ತಿದ್ದೇವೆ ಎಂಬುದನ್ನು ಈಗ ಹೇಳಲು ಸಾಧ್ಯವಿಲ್ಲ. ಈ ವಿಷಯ ಇನ್ನೂನ್ಯಾಯಾಲಯದಲ್ಲಿ ಇದೆ. ನನಗೆ ಮದುವೆಯಲ್ಲಿ ನಂಬಿಕೆ ಇದೆ, ಆದರೆ ನಾನು ಅದೃಷ್ಟವಂತನಲ್ಲ. ಕೆಲವೊಮ್ಮೆ ಹೊಂದಾಣಿಕೆ ಮಾಡಿಕೊಳ್ಳಲಾಗದ ವರ್ತನೆ, ಅಹಂ ಇವೆಲ್ಲವೂ ಕುಟುಂಬದ ಮೇಲೆ ಪರಿಣಾಮ ಬೀರುತ್ತವೆ." ಎಂದು ವಿಚ್ಛೇದನದ ಬಗ್ಗೆ ನಿತಿಶ್ ಭಾರದ್ವಾಜ್ ಮಾಧ್ಯಮಕ್ಕೆ ತಿಳಿಸಿದ್ದಾರೆ

    ನಿತಿಶ್ ಭಾರದ್ವಾಜ್ 2ನೇ ಮದುವೆ

    ನಿತಿಶ್ ಭಾರದ್ವಾಜ್ 2ನೇ ಮದುವೆ

    ನಿತಿಶ್ ಭಾರದ್ವಾಜ್ ಎರಡನೇ ಪತ್ನಿ ಸ್ನಿತಾ ಘಾಟೆಯನ್ನು 2009ರಲ್ಲಿ ವಿವಾಹವಾಗಿದ್ದರು. ವೃತ್ತಿಯಲ್ಲಿ ಸ್ಮಿತಾ ಘಾಟೆ ಐಎಎಸ್ ಅಧಿಕಾರಿಯಾಗಿದ್ದಾರೆ. ಇವರಿಬ್ಬರಿಗೂ ಅವಳಿ-ಜವಳಿ ಹೆಣ್ಣು ಮಕ್ಕಳಿದ್ದಾರೆ. ಸದ್ಯ ಸ್ಮಿತಾ ಹಾಗೂ ಅವರ ಮಕ್ಕಳು ಇಂದೋರ್‌ನಲ್ಲಿ ವಾಸವಿದ್ದಾರೆ. ಸದ್ಯ ಫ್ಯಾಮಿಲಿ ಕೋರ್ಟ್‌ನಲ್ಲಿ ವಿಚ್ಛೇದನದ ಕೇಸ್ ನಡೆಯುತ್ತಿದೆ. ಆದರೆ, ನಿತಿಶ್ ಭಾರದ್ವಾಜ್ 1991ರಲ್ಲಿ ಮೋನಿಶಾ ಪಟೇಲ್ ಎಂಬುವವರು ಮೊದಲ ವಿವಾಹವಾಗಿದ್ದರು. 14 ವರ್ಷಗಳ ಬಳಿಕ ಅಂದರೆ, 2005ರಲ್ಲಿ ಮೋನಿಶಾರಿಂದ ವಿಚ್ಛೇದನ ಪಡೆದಿದ್ದರು.

    ವಿಚ್ಛೇದನದ ಬಗ್ಗೆ ಹೆಚ್ಚಿದ ಆತಂಕ

    ವಿಚ್ಛೇದನದ ಬಗ್ಗೆ ಹೆಚ್ಚಿದ ಆತಂಕ

    ಇತ್ತೀಚೆಗೆ ತಾರೆಯರ ವಿಚ್ಛೇದನದ ಪ್ರಕರಣಗಳು ಒಂದೊಂದಾಗೇ ಹೊರಗೆ ಬರುತ್ತಿವೆ. ಇದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ನೆಟ್ಟಿಗರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. "ಆಶ್ಚರ್ಯ ನಿನ್ನೆವರೆಗೂ ಕೊರೊನಾ, ಸಾವುಗಳ ಬಗ್ಗೆ ವರದಿ ಬರುತ್ತಿತ್ತು. ಇಂದು ವಿಚ್ಛೇದನದ ಬಗ್ಗೆ ಸುದ್ದಿಯಾಗುತ್ತಿದೆ. ಸಮಂತಾ, ನಾಗಚೈತನ್ಯ ಆಯ್ತು. ಧನುಷ್ ಹಾಗೂ ಐಶ್ವರ್ಯಾ ಆಯ್ತು. ಈಗ ನಿತಿಶ್ ಭಾರದ್ವಾಜ್ ವಿಚ್ಛೇದನ ಸುದ್ದಿಯನ್ನು ಕೇಳಬೇಕಿದೆ." ಎಂದು ನೆಟ್ಟಿಗರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

    English summary
    Popular serial 'Mahabharata' Krishna actor Nitish Bharadwaj announces divorce with wife Smita. He revealed that he filed for a divorce in the Family Court in Mumbai in September 2019.
    Wednesday, January 19, 2022, 9:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X