ಹೆತ್ತ ತಾಯಿ ವಿರುದ್ಧ ದೂರು, ಮುರಿದು ಬಿದ್ದ ಮದುವೆ- ಮಹಾಭಾರತದ ಕುಂತಿಯಾಗಿದ್ದ ಮುಸ್ಲಿಂ ನಟಿ ಬದುಕಿನಲ್ಲಿ ಹೊಸ ಬೆಳಕು
ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ, ಪ್ರೀತಿಯ ಕೆಲವೊಮ್ಮೆ ಕಾಡುತ್ತೆ. ಪ್ರೀತಿಯಲ್ಲಿ ನೋವು ಸಹಜವಾದರೂ ಅದನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಅದರಿಂದಾಗುವ ನೋವು ಶಾಶ್ವತವಾಗಿಲ್ಲದಿದ್ದರೂ ಆ ಕ್ಷಣಕ್ಕೆ ಮಾತ್ರ ಅದು ನುಂಗಲಾರದ ತುತ್ತು. ಎಲ್ಲಾ ಉತ್ಸಾಹ, ಆಸಕ್ತಿ, ಖುಷಿಯ ಕ್ಷಣಗಳನ್ನು ಕಸಿದುಕೊಳ್ಳೋ ಆ ಬ್ರೇಕ್ ಅಪ್‌ನ ನೋವು ಸಹಿಸಿಕೊಳ್ಳೋದಕ್ಕೆ ಸಾಧ್ಯ ಆಗದೇ ಇರುವುದಕ್ಕೆ ಕಾರಣಗಳೇನು ಎಂಬುದು ಹೃದಯವಂತರ ಪ್ರಶ್ನೆ.
ಈ ಪ್ರಶ್ನೆಗೆ ಲವ್ ಗುರುಗಳು ಇನ್ನು ಉತ್ತರವನ್ನು ನೀಡದೇ ಇದ್ದರೂ ಚಿತ್ರರಂಗದಲ್ಲಿ ಹಲವರು ಈ ಪ್ರೀತಿಯ ಬೆಂಕಿಯಲ್ಲಿ ಬಿದ್ದು ಬೆಂದಿದ್ದಾರೆ. ನೊಂದು ಕಣ್ಣೀರು ಹಾಕಿದ್ದಾರೆ. ಮಾನಸಿಕ ಖಿನ್ನತೆಗೊಳಗಾಗಿ ಆ ನಂತರ ಮತ್ತೆ ಮೈ ಕೊಡವಿ ಎದ್ದು ನಿಂತಿದ್ದಾರೆ. ಹಳೆಯದೆಲ್ಲವನ್ನೂ ಮರೆತು ಹೊಸ ಉತ್ಸಾಹ ಹುರುಪಿನ ಜೊತೆ ಬದುಕನ್ನು ಮತ್ತೆ ಶುರು ಮಾಡಿದ್ದಾರೆ. ಶಫಾಕ್ ನಾಜ್ ಇದಕ್ಕೆ ಸದ್ಯದ ಉದಾಹರಣೆ.

ಹೌದು, ಶಫಾಕ್ ನಾಜ್.. ಹಿಂದಿ ಕಿರುತೆರೆಯ ಚೆಲುವೆ. 2013ರಲ್ಲಿ ಸ್ಟಾರ್ ಪ್ಲಸ್‌ನಲ್ಲಿ ಪ್ರಸಾರವಾದ ಮಹಾಭಾರತ ಧಾರಾವಾಹಿಯಲ್ಲಿ ''ಕುಂತಿ''ಯ ಪಾತ್ರವನ್ನು ನಿರ್ವಹಿಸಿದ್ದವರು ಶಫಾಕ್ ನಾಜ್.
''ಗುಮ್ ಹೈ ಕಿಸಿ ಕೇ ಪ್ಯಾರ್ ಮೇ''.. ''ಕುಲ್ಫಿ ಕುಮಾರ್ ಬಾಜೆವಾಲಾ''.. ''ಲಾಲ್ ಇಷ್ಕ್''.. ''ಚಿಡಿಯಾ ಘರ್''.. ''ಗುಮ್ರಾಹ್''.. ಇವರ ಅಭಿನಯದ ಕೆಲ ಪ್ರಮುಖ ಧಾರಾವಾಹಿಗಳು.
ಇಂಥಾ ಶಫಾಕ್ ನಾಜ್ 2012ರಲ್ಲಿ ತಮ್ಮ ''ತೇರಿ ಮೇರಿ ಲವ್ ಸ್ಟೋರಿ''ಯ ನಾಯಕ ಅವಿನಾಶ್ ಸಚ್‌ದೇವ್ ಅವರ ಜೊತೆ ಪ್ರೀತಿಯಲ್ಲಿ ಬಿದ್ದಿರುವುದಾಗಿ ಹೇಳಿದ್ದರು. ಆರು ತಿಂಗಳು ನಾವು ಕದ್ದು ಮುಚ್ಚಿ ಓಡಾಡಿದ್ದೇವೆ ಎಂದಿದ್ದರು.
ಆದರೆ ಅವಿನಾಶ್ ಈ ವಿಚಾರ ತಳ್ಳಿ ಹಾಕಿದ್ದರು. ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ದರು. ಆ ನಂತರ ಅವಿನಾಶ್ ಜೊತೆ ಬೀದಿ ರಂಪ ಮಾಡಿದ್ದ ಶಫಾಕ್ ನಾಜ್ ಮಸ್ಕಟ್ ಮೂಲದ ಉದ್ಯಮಿ ಜೀಶನ್ ಜೊತೆ ಪ್ರೀತಿಯಲ್ಲಿ ಬಿದ್ದರು. ಮೂರು ವರ್ಷ ಪ್ರೇಮ ಗೀತೆ ಕೂಡ ಹಾಡಿದರು.

ಇನ್ನೇನೂ ಇಬ್ಬರು ಮದುವೆಯಾಗಬೇಕು. ಅಷ್ಟರಲ್ಲಿ ಈ ಮದುವೆ ಮುರಿದು ಬಿತ್ತು. 2023ರಿಂದ ಇಲ್ಲಿಯವರೆಗೆ ವಿರಹ ವೇದನೆಯಲ್ಲಿ ಬೇಯುತ್ತಿದ್ದ ಶಫಾಕ್ ನಾಜ್ ಈಗ ಇನ್ನೊಮ್ಮೆ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಾರೆ. ತಮ್ಮ ಕೈ ಹಿಡಿಯಲಿರುವ ಹೊಸ ಹುಡುಗ /ಭಾವಿ ಪತಿಯನ್ನು ಪರಿಚಯಿಸಿದ್ದಾರೆ. ತಮ್ಮ ಬಾಯ್‌ಫ್ರೆಂಡ್ ಕುರಿತು ಶಫಾಕ್ ನಾಜ್ ಹೆಚ್ಚೇನು ವಿವರ ಹಂಚಿಕೊಳ್ಳದಿದ್ದರು ಕೂಡ ''ನನ್ನ ಮನೆ'' ಎಂದು ಶೀರ್ಷಿಕೆಯಡಿ ಕೆಲ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಸದ್ಯ ಈ ಫೋಟೊಗಳು ವೈರಲ್ ಆಗಿದ್ದು ಶಫಾಕ್ ನಾಜ್ ಅವರಿಗೆ ಅವರ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಚಿತ್ರರಂಗದ ಸ್ನೇಹಿತರು ಕೂಡ ಶುಭಾಶಯ ಕೋರುತ್ತಿದ್ದಾರೆ.
ಅಂದ್ಹಾಗೇ 2018ರಲ್ಲಿ ಶಫಾಕ್ ನಾಜ್ ತಮ್ಮ ಹೆತ್ತ ತಾಯಿಯ ವಿರುದ್ದವೇ ತಿರುಗಿ ಬಿದ್ದಿದ್ದರು. ನಾನು ಕಷ್ಟಪಟ್ಟು ಬೆವರು ಸುರಿಸಿ ದುಡಿಯುತ್ತಿರುವ ಹಣವನ್ನೆಲ್ಲಾ ನನ್ನ ತಾಯಿ ಖರ್ಚು ಮಾಡುತ್ತಿದ್ದಾರೆ, ನನ್ನ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದ್ದರು. ಇದರಿಂದ ಶಫಾಕ್ ನಾಜ್ ಅವರ ಸಹೋದರಿ ಪಲಕ್ ನಾಜ್ ಮತ್ತು ಸಹೋದರ ಶೇಜಾನ್ ಖಾನ್ ಕೆರಳಿದ್ದರು. ಶಫಾಕ್ ನಾಜ್ ಅವರ ಜೊತೆ ತಮ್ಮ ಸಂಬಂಧಗಳನ್ನು ಕಡಿದುಕೊಂಡಿದ್ದರು. ನಮಗೂ ಮತ್ತು ಶಫಾಕ್‌ಗೂ ಇನ್ಮೇಲೆ ಯಾವ ಸಂಬಂಧ ಇಲ್ಲ ಎಂದು ಹೇಳಿದ್ದರು. ವಿಶೇಷ ಅಂದರೆ ಪಲಕ್ ಮತ್ತು ಶೇಜಾನ್ ಕೂಡ ಶಫಾಕ್ ನಾಜ್ ಅವರಂತೆಯೇ ಹಿಂದಿ ಕಿರುತೆರೆಯ ಕಲಾವಿದರು. ಶಫಾಕ್ ಅವರಂತೆಯೇ ಹಲವು ಧಾರಾವಾಹಿಗಳಲ್ಲಿ ಇವರು ಇಬ್ಬರು ಕೂಡ ಅಭಿನಯಿಸಿದ್ದಾರೆ.


Click it and Unblock the Notifications











