ಶನಿ ಧಾರಾವಾಹಿ ವೀಕ್ಷಕರಿಗೆ ಸಿಹಿ ಸುದ್ದಿ

By Pavithra

Recommended Video

ಶನಿ ಧಾರಾವಾಹಿ ಫ್ಯಾನ್ಸ್ ನೀವಾಗಿದ್ರೆ ತಪ್ಪದೇ ಈ ವಿಡಿಯೋ ನೋಡಿ | Filmibeat Kannada

ಪ್ರತಿನಿತ್ಯ 'ಶನಿ' ಧಾರಾವಾಹಿಯನ್ನು ವೀಕ್ಷಿಸಿ ಖುಷಿ ಪಡುತ್ತಿರುವ ವೀಕ್ಷಕರಿಗೆ ಮತ್ತೊಂದು ಸಿಹಿ ವಿಚಾರವನ್ನು ಕಲರ್ಸ್ ಕನ್ನಡ ವಾಹಿನಿ ಕೊಡುತ್ತಿದೆ.

ಪೌರಾಣಿಕ ಧಾರಾವಾಹಿಗಳು ಕಡಿಮೆಯಾಗುತ್ತಿರುವ ಈ ಸಮಯದಲ್ಲಿ 'ಶನಿ' ಧಾರಾವಾಹಿಯನ್ನು ವೀಕ್ಷಕರಿಗೆ ಕೊಟ್ಟ ಕಲರ್ಸ್ ಕನ್ನಡ ವಾಹಿನಿ ಇದೀಗ ಮತ್ತೊಂದು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ.

'ಶನಿ' ಧಾರಾವಾಹಿ ಅಷ್ಟೇ ಪ್ರಭಾವ ಬೀರುವಂತಹ ಮತ್ತೊಂದು ಧಾರಾವಾಹಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲು ಸಜ್ಜಾಗುತ್ತಿದೆ. ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಮಹಾಕಾಳಿ' ಧಾರಾವಾಹಿ ಪ್ರಸಾರವಾಗಲು ಸಜ್ಜಾಗಿದೆ. ಪ್ರತಿ ವಾರಾಂತ್ಯದಲ್ಲಿ ಒಂದು ಗಂಟೆಯಲ್ಲಿ ಪ್ರಸಾರವಾಗಲಿರುವ 'ಮಹಾಕಾಳಿ' ಸೀರಿಯಲ್ ಗೂ ಶನಿ ಧಾರಾವಾಹಿಗೂ ಸಾಕಷ್ಟು ನಂಟಿದೆ. 'ಶನಿ' ಧಾರಾವಾಹಿ ಇಷ್ಟಪಟ್ಟವರು ಮಹಾಕಾಳಿ ಸೀರಿಯಲ್ ಅನ್ನು ಮೆಚ್ಚಿಕೊಳ್ಳಲಿದ್ದಾರೆ. ಯಾಕೆ ಅಂತೀರಾ ಮುಂದೆ ಓದಿ...

ಶನಿ ಧಾರಾವಾಹಿಯ ಪಾತ್ರಧಾರಿಗಳು 'ಮಹಾಕಾಳಿ'ಯಲ್ಲಿ

ಶನಿ ಧಾರಾವಾಹಿಯ ಪಾತ್ರಧಾರಿಗಳು 'ಮಹಾಕಾಳಿ'ಯಲ್ಲಿ

'ಮಹಾಕಾಳಿ' ಧಾರಾವಾಹಿಯಲ್ಲಿ ಶಿವನ ಪಾತ್ರ ಧರಿಸಿರುವ ಅರ್ಜುನ್ ಈಗಾಗಲೇ 'ಶನಿ' ಧಾರಾವಾಹಿಯಲ್ಲಿ ಶಿವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಇಂದ್ರ ಹಾಗೂ ಬ್ರಹ್ಮ ದೇವನ ಪಾತ್ರಧಾರಿ ಕೂಡ 'ಶನಿ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಶನಿ ಹಾಗೂ ಮಹಾಕಾಳಿ ಒಂದೇ ಕಡೆಯಲ್ಲಿ ಚಿತ್ರೀಕರಣ

ಶನಿ ಹಾಗೂ ಮಹಾಕಾಳಿ ಒಂದೇ ಕಡೆಯಲ್ಲಿ ಚಿತ್ರೀಕರಣ

'ಮಹಾಕಾಳಿ'ಯ ಚಿತ್ರೀಕರಣ ಗುಜರಾತ್ ನ ಉಂಬರ್ಗಾವ್ ನಲ್ಲಿ ನಡೆಯುತ್ತಿದೆ. ಕಲಾವಿದರೆಲ್ಲರೂ ಸದ್ಯಕ್ಕೆ ಅಲ್ಲಿಯೇ ತಂಗಿದ್ದಾರೆ. ಧಾರಾವಾಹಿಯ ಚಿತ್ರೀಕರಣಕ್ಕೆ ಎಷ್ಟು ಸಮಯ ಬೇಕಾಗುತ್ತದೆಯೋ ಅದರಷ್ಟು ಸಮಯ ಗ್ರಾಫಿಕ್ಸ್ ಹಾಗೂ ವಿ.ಎಫ್.ಎಕ್ಸ್ ಕೆಲಸಕ್ಕೆ ಬೇಕಾಗುತ್ತದೆ. 'ಶನಿ' ಧಾರಾವಾಹಿ ಕೂಡ ಗುಜರಾತಿನ ಉಂಬರ್ಗಾವ್ ನಲ್ಲಿಯೇ ನಡೆಯುತ್ತಿದೆ.

ಪಾರ್ವತಿ ವೇಷಭೂಷಣದಲ್ಲಿ ಬದಲಾವಣೆ

ಪಾರ್ವತಿ ವೇಷಭೂಷಣದಲ್ಲಿ ಬದಲಾವಣೆ

ದೇವಿ ಪಾರ್ವತಿಯ ವೇಷಭೂಷಣವನ್ನು ಕನ್ನಡ ಸಂಪ್ರದಾಯಕ್ಕೆ ತಕ್ಕಂತೆ ಬದಲಾಯಿಸಲಾಗಿದೆ. ಕನ್ನಡದ ಜನತೆಯ ಮನಸ್ಸಿನಲ್ಲಿ ದೇವಿ ಪಾರ್ವತಿ ಯಾವ ರೀತಿಯಲ್ಲಿ ಚಿತ್ರಣವಾಗಿದ್ದಾಳೋ ಅದೇ ರೀತಿಯಲ್ಲಿ ಧಾರಾವಾಹಿಯ ದೇವಿ ಕೂಡ ರೂಪುಗೊಂಡಿದ್ದಾಳೆ.

ರಾಘವೇಂದ್ರ ಹೆಗ್ಗಡೆ ನಿರ್ದೇಶನ

ರಾಘವೇಂದ್ರ ಹೆಗ್ಗಡೆ ನಿರ್ದೇಶನ

'ಶನಿ' ಧಾರಾವಾಹಿಯನ್ನು ನಿರ್ದೇಶನ ಮಾಡುತ್ತಿರುವ ರಾಘವೇಂದ್ರ ಹೆಗ್ಗಡೆ ಅವರೇ ಮಹಾಶಕ್ತಿ ಪೌರಾಣಿಕ ಕಥನವುಳ್ಳ 'ಮಹಾಕಾಳಿ' ಧಾರಾವಾಹಿಯನ್ನು ಡೈರೆಕ್ಟ್ ಮಾಡುತ್ತಿದ್ದಾರೆ. ರಾಘವೇಂದ್ರ ಹೆಗ್ಗಡೆ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ 'ಜಗ್ಗುದಾದಾ' ಸಿನಿಮಾ ನಿರ್ದೇಶನ ಮಾಡಿ ಪ್ರಖ್ಯಾತಿ ಗಳಿಸಿದ್ದಾರೆ.

More from Filmibeat

English summary
Tun in as the battle between good and evil meets its fate in the unscathed hands of the humble Goddess Parvathi on MAHAKALI, starting June 9, 2018 Saturday and Sunday,8 PM onwards on COLORS Kannada.
Read more about: colors super tv ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X