Mahanati: ತರುಣ್ ಸುಧೀರ್‌ಗೆ ಲವ್ ಲೆಟರ್ ಬರೆದ ಆಶಿಕಾ: ಕಿಚ್ಚನಿಂದ ಸಿಕ್ತು ಸರ್‌ಪ್ರೈಸ್

By ಎಸ್ ಸುಮಂತ್

ಈ ಬಾರಿಯ ಜೀ ಕನ್ನಡದ ರಿಯಾಲಿಟಿ ಶೋ 'ಮಹಾನಟಿ'ಯಲ್ಲಿ ಸ್ಪರ್ಧಿಗಳಲ್ಲಿ ಆಶಿಕಾ ಶರ್ಮಾ ಕೂಡ ಒಬ್ಬರು. ಇವರ ಬಗ್ಗೆ ಈಗಾಗಲೇ ಎಲ್ಲರಿಗೂ ಗೊತ್ತಿದೆ. 'ವಿಕ್ರಾಂತ್ ರೋಣ' ಚಿತ್ರದಲ್ಲಿ ನಟಿ ಜಾಕ್ವೆಲಿನ್‌ಗೆ ಧ್ವನಿ ಕೊಟ್ಟಿದ್ದು ಇವರೇ ಎಂದು ಗೊತ್ತಾದ ಮೇಲಂತು ಸಾಕಷ್ಟು ಜನ ಅಭಿಮಾನಿಗಳಾಗಿ ಬಿಟ್ಟಿದ್ದಾರೆ.

ಸದ್ಯ 'ಮಹಾನಟಿ' ವೇದಿಕೆಯಲ್ಲಿ ಆಶಿಕಾ ಶರ್ಮಾ ನಗು, ಆ ಮುಗ್ಧತೆಗೆ ಮನಸೋತವರೇ ಹೆಚ್ಚು. ಈಗ ತರುಣ್ ಸುಧೀರ್ ಕೂಡ ಮನಸೋಲುವಂತೆ ಆಗಿದೆ. ಆಶಿಕಾ ಶರ್ಮಾ, ಅಷ್ಟು‌ ಕ್ಯೂಟ್ ಆಗಿ ಲವ್ ಲೆಟರ್ ಬರೆದಿದ್ದಾರೆ.

Mahanati reality show Ashika Sharma wrote letter to director tharun sudhir

ಅಧ್ಯಕ್ಷ ಸಿನಿಮಾ ದೃಶ್ಯ ರೀ-ಕ್ರಿಯೇಟ್

ವೇದಿಕೆಯಲ್ಲಿ ಆಶಿಕಾ ಶರ್ಮಾಗೆ 'ಅಧ್ಯಕ್ಷ' ಸಿನಿಮಾದ ದೃಶ್ಯವೊಂದನ್ನು ರೀ-ಕ್ರಿಯೇಟ್ ಮಾಡಲು ಸೂಚಿಸಲಾಗಿತ್ತು. ಅದಕ್ಕೆಂದೆ ಪಾಂಡವಪುರದ ಸರ್ಕಾರಿ ಶಾಲೆಯೊಂದಕ್ಕೆ ಆಶಿಕಾ ಟೀಚರ್ ಆಗಿ ಕೂಡ ಒಂದು ದಿನ ಹೋಗಿ ಬಂದಿದ್ದರು. ಮಕ್ಕಳು ಪ್ರೀತಿ ಪಡೆದು ಬಂದಿದ್ದರು. ಈಗ ಅದನ್ನೇ ವೇದಿಕೆ ಮೇಲೆ ತರಲಾಗಿದೆ. ಶ್ವೇತಾ ಹಾಗೂ ಬಿಂದು ವಿದ್ಯಾರ್ಥಿಗಳ ಪಾತ್ರ ಮಾಡಿದ್ದಾರೆ. 'ಅಧ್ಯಕ್ಷ' ಸಿನಿಮಾದಲ್ಲಿ ಶರಣ್, ಟೀಚರ್‌ಗೆ ಲವ್ ಲೆಟರ್ ಕೊಟ್ಟು ಕಳುಹಿಸುವ ದೃಶ್ಯವನ್ನು ಆಶಿಕಾ ಶರ್ಮಾ ವೇದಿಕೆ ಮೇಲೆ ಕಟ್ಟಿಕೊಟ್ಟಿದ್ದಾರೆ.

ಸುದೀಪ್ ಕಡೆಯಿಂದ ವಿಶ್

'ವಿಕ್ರಾಂತ್ ರೋಣ' ಚಿತ್ರದಲ್ಲಿ ಆಶಿಕಾನೇ ಧ್ವನಿ ಕೊಟ್ಟಿರುವುದು. ಇದೀಗ 'ಮಹಾನಟಿ' ವೇದಿಕೆಯಲ್ಲಿದ್ದ ಆಶಿಕಾಗೆ ಬಿಗ್ ಗಿಫ್ಟ್ ಒಂದು ಸಿಕ್ಕಿದೆ. ಅದುವೇ ಸುದೀಪ್ ಅವರ ಕಡೆಯಿಂದ ವಿಶಸ್. ಆಶಿಕಾ, ನಾನು ನಿಮ್ಮ ಇಂಟರ್ ವ್ಯೂ ನೋಡಿದೆ. ಒಳ್ಳೆಯದ್ದಾಗಲಿ. ಆಲ್ ದಿ ಬೆಸ್ಟ್ ಎಂದು ಹಾರೈಸಿದ್ದಾರೆ. ಇದನ್ನು ಕೇಳಿದ ಆಶಿಕಾ ಸಂಭ್ರಮದಿಂದ ಕುಣಿದಿದ್ದಾರೆ.

ಸುದೀಪ್ ಜೊತೆ ನಟಿಸುವ ಆಸೆ

ಇನ್ನು ಸುದೀಪ್ ಅವರಿಂದ ಶುಭ ಹಾರೈಕೆ ಬರುತ್ತಿದ್ದಂತೆ ಹಳೆಯ ದಿನಗಳನ್ನು ನೆನೆದಿದ್ದಾರೆ. ನಂಗೆ ಸುದೀಪ್ ಸರ್ ಅಂದ್ರೆ ತುಂಬಾ ಇಷ್ಟ. ಒಮ್ಮೆ ಅವರನ್ನು ನೋಡಬೇಕೆಂದು ಹೋಗಿದ್ದೆ. ಅಷ್ಟರಲ್ಲಾಗಲೇ ಸುದೀಪ್ ಚಿತ್ರಕ್ಕೆ ನಾನೇ ವಾಯ್ಸ್ ಕೊಟ್ಟಿದ್ದೆ ಎಂಬುದು ಗೊತ್ತಾಗಿತ್ತು. ಮಾತನಾಡಿಸಿದರು. ತುಂಬಾ ಖುಷಿ ಆಯ್ತು. ನಂಗೆ ಅವರ ಸಿನಿಮಾದಲ್ಲಿ ಅಭಿನಯಿಸುವ ಆಸೆ ಇದೆ. ಒಮ್ಮೆ ಒಂದೇ ಒಂದು ಚಾನ್ಸ್ ಸಿಕ್ಕರೆ ತುಂಬಾ ಖುಷಿ ಎಂದಿದ್ದಾರೆ. ಸುದೀಪ್ ಜೊತೆಗೆ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ.

Mahanati reality show Ashika Sharma wrote letter to director tharun sudhir

ಮನೆಯಲ್ಲಿ ಅವಕಾಶ ಕೊಡಿ ಎಂದ ಆಶಿಕಾ

ಇನ್ನು ಆಶಿಕಾ ಟೀಚರ್ ಪಾತ್ರದಲ್ಲಿ ಆ ಸನ್ನಿವೇಶ ರೀ-ಕ್ರಿಯೇಟ್ ಮಾಡಿದ್ದರು. ಈಗ ತರುಣ್ ಸುಧೀರ್ ಅವರಿಗೂ ಲವ್ ಲೆಟರ್ ಬಂದಿದೆ. ಅದರಲ್ಲಿ ಆಶಿಕಾ ಹೆಸರಿಲ್ಲದೇ ಹೋದರು ಅದು ಆಶಿಕಾನೆ ಬರೆದಿರುವುದು ಅನ್ನೋದು ಕನ್ಫರ್ಮ್ ಆಗಿದೆ. ಆ ಪತ್ರದಲ್ಲಿ ತರುಣ್ ಸುಧೀರ್ ಅವರ ಅಂದವನ್ನು ಹೊಗಳಿದ್ದಾರೆ. ಜೊತೆಗೆ ನಿಮ್ಮ ಸಿನಿಮಾದಲ್ಲಿ ಅವಕಾಶ ಕೊಡದೇ ಇದ್ದರೂ ಪರವಾಗಿಲ್ಲ, ನಿಮ್ಮ ಮನೆಯಲ್ಲಿ ಒಂದು ಪುಟ್ಟ ಜಾಗ ಕೊಡಿ ಎಂದು ಕೇಳಿದ್ದಾರೆ. ಲೆಟರ್‌ನಲ್ಲಿ ಹೆಸರು ಕೂಡ ಸೂಚಿಸಿದ್ದು, ತರುಣಿ ಎಂದು ಬರೆಯಲಾಗಿದೆ. ಅನುಶ್ರೀ ಕೂಡ ಈ ಲೆಟರ್ ಎಂಜಾಯ್ ಮಾಡಿದ್ದು, ಬೋರ್ಡ್ ಮೇಲೆ ಲವ್ ಸಿಂಬಲ್ ಹಾಕಿ ಟಿ ಲವ್ ಟಿ ಅಂತ ಬರೆದಿದ್ದಾರೆ.

More from Filmibeat

English summary
zee kannada reality show mahanati Written Update on June 2nd episode. Here is the details about Aashika wrote a love letter to Tarun Sudhir
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X