Mahanati: ರಾಕಿಭಾಯ್ ಡೈಲಾಗ್ ಹೊಡೆದ ನಿಶ್ವಿಕಾಗೆ ಜಗ್ಗು ಡೈಲಾಗ್ ಬಿಟ್ಟು ತರುಣ್ ಟಾಂಗ್

By ಎಸ್ ಸುಮಂತ್

ಮಹಾನಟಿ ವೇದಿಕೆಯಲ್ಲಿ ಆಗಾಗ ವಾವ್ ಎಂಬಂತ ಘಟನೆಗಳು ಘಟಿಸುತ್ತಲೇ ಇರುತ್ತವೆ. ಸ್ಪರ್ಧೆಯಾಗಿರುವ ಕಾರಣ ಒಬ್ಬರಿಗೊಬ್ಬರು ಸವಾಲೆಸೆಯುವ ಎಪಿಸೋಡ್ ಬರುತ್ತವೆ. ನಾನಾ?ನೀನಾ? ಎಪಿಸೋಡಿನಲ್ಲಂತೂ ನೋಡುವುದಕ್ಕೆ ಇಂಟ್ರೆಸ್ಟಿಂಗ್ ಡ್ರಾಮಾಗಳು ಶುರುವಾಗುತ್ತವೆ. ತೀರ್ಪುಗಾರರು ಗೊಂದಲಕ್ಕೀಡಾಗುವಂತಹ ಅದ್ಭುತ ನಟನೆಯನ್ನು ಮಾಡುತ್ತಾರೆ.

ಈ ವಾರಾಂತ್ಯ 'ಮಹಾನಟಿ' ವೇದಿಕೆಯಲ್ಲಿ ನಾನಾ-ನೀನಾ? ಸ್ಪರ್ಧೆ ನಡೆಯುತ್ತಿದೆ. ಈ ಸ್ಪರ್ಧೆಯಲ್ಲಿ ಒಬ್ಬರಿಗೊಬ್ಬರು ಸವಾಲೆಯುವ ಡೈಲಾಗ್ ಬಂದಿವೆ. 12 ನಟಿಯರ ಜೊತೆಗೆ.. ತೀರ್ಪುಗಾರರು ಕೂಡ ಸೇರಿಕೊಂಡು ಮಸ್ತ್ ಮನರಂಜನೆ ನೀಡಿದ್ದಾರೆ.

Mahanati reality show director Tharun sudhir and actress Nishvika naidu s dialogue war on stage

ನಾನಾ-ನೀನಾ ಆಗಿದ್ದೇನು..?

ಈ ವಾರ ಮಹಾನಟಿಯರನ್ನು ನೋಡುವುದೇ ಚೆಂದ. ಪ್ರತಿ ಸಲ ತೀರ್ಪುಗಾರರು ಒಂದೊಂದು ಟಾಪಿಕ್ ನೀಡುತ್ತಿದ್ದರು. ಆ ಟಾಪಿಕ್‌ ಮೇಲೆ ಸ್ಪರ್ಧಿಗಳು ಅಭಿನಯಿಸಿ, ಸೈ ಎನಿಸಿಕೊಳ್ಳುತ್ತಿದ್ದರು. ಆದರೆ ಈ ಎರಡು ದಿನ ಮಹಾನಟಿ ವೇದಿಕೆಯಲ್ಲಿ ಬೃಹತ್ ಯುದ್ಧ ಅಖಾಡ ಸಿದ್ಧವಾಗಿದೆ.. 12 ನಟಿಯರು ತಮ್ಮ‌ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲಿದ್ದಾರೆ.. ಹಲವು ಥೀಮ್ಸ್ ಇದರಲ್ಲಿ ಇರಲಿದೆ. ಅಷ್ಟೇ ಅಲ್ಲ ನಕ್ಕು ನಗಿಸುವುದಕ್ಕೆ ಕಾಮಿಡಿ ಕೂಡ ಇದೆ. ಅದು ಮಿಸ್ ಆಗೋದೆ ಇಲ್ಲ. ‌ಲವ್ ಸ್ಟೋರಿಗಳಿಗಂತು ಇಲ್ಲಿ ಕಡಿಮೆ ಇಲ್ಲ. ವಿಭಿನ್ನವಾದ ಲವ್ ಸ್ಟೋರಿಗಳು ಇಲ್ಲಿ ಅನಾವರಣಗೊಳ್ಳುತ್ತವೆ. ಭಯಾನಕವಾದ ನಟನೆಯನ್ನು ಇಲ್ಲಿ ಕಾಣಬಹುದು. ದುಃಖ ತರುವಂತ ಸನ್ನಿವೇಶಗಳು ಇದಾವೆ. ದುಃಖ ತರಿಸುವಂತ ಸ್ಕಿಟ್ ಮಾಡುವವರು ನೋಡುಗರ ಕಣ್ಣಲ್ಲೂ ನೀರು ತರಿಸುತ್ತಾರೆ. ಅಂತಹ ಸ್ಕಿಟ್ ಗಳನ್ನೇ ಮಾಡುತ್ತಾರೆ.

ತೀರ್ಪುಗಾರರ ನಡುವೆಯೂ ಶುರು

ನಾನಾ-ನೀನಾ ಎಂಬುದು ಬರೀ ಸ್ಪರ್ಧಿಗಳಿಗೆ ಮಾತ್ರ ಅಲ್ಲ ತೀರ್ಪುಗಾರರ ನಡುವೆಯೂ ನಡೆದಿದೆ. ಈ ವೇದಿಕೆಯಲ್ಲಿ ಏನಾದರೂ ಸ್ಪೆಷಲ್ ಎನಿಸುವಂತ ಎಪಿಸೋಡ್ ಬಂದಾಗ ಅದರಲ್ಲಿ ತೀರ್ಪುಗಾರರು ಕೂಡ ಭಾಗಿಯಾಗುತ್ತಾರೆ. ಒಮ್ಮೊಮ್ಮೆ ಡ್ಯಾನ್ಸ್ ಇದ್ದರು ಜೊತೆಯಾಗುತ್ತಾರೆ. ಹಿರಿಯ ನಟಿಯರ ನಟನೆ ರೀ-ಕ್ರಿಯೇಟ್ ಮಾಡುವಾಗಲು ಜೊತೆಯಾಗುತ್ತಾರೆ. ಇದೀಗ ನಾನಾ-ನೀನಾ ವೇದಿಕೆಯಲ್ಲಿ ತರುಣ್ ಸುಧೀರ್ ಹಾಗೂ ನಿಶ್ವಿಕಾ ನಾಯ್ಡು ಎದಿರುಬದಿರಾಗಿದ್ದಾರೆ.

ಇದು ತರುಣ್ ಸುಧೀರ್ ಟೀಂ

ತರುಣ್ ಸುಧೀರ್ ಮತ್ತು ನಿಶ್ವಿಕಾ ನಾಯ್ಡು ಈ ಸೀಸನ್ ತೀರ್ಪುಗಾರರಾಗಿದ್ದರೆ. ಇದೀಗ ವೇದಿಕೆಯಲ್ಲಿ ಎರಡು ತಂಡಗಳಾಗಿ ಸವಾಲು ಎಸೆದಿದ್ದಾರೆ. ಸೋನಿ ಮುಲೇವಾ, ಆಶಿಕಾ ಸೇರಿದಂತೆ ಆರು ಜನ ಸ್ಪರ್ಧಿಗಳಿಗೆ ಬೆಂಬಲವಾಗಿ ನಿಂತಿದ್ದಾರೆ. ಇನ್ನು ತರುಣ್ ಸುಧೀರ್ ಕಡೆಗೂ ಆರು ಜನ ಸ್ಪರ್ಧಿಗಳು ಜೊತೆಯಾಗಿದ್ದಾರೆ. ಅವರವರ ಟೀಂ ಅನ್ನು ಅವರವರೇ ಸ್ಟ್ರಾಂಗ್ ಆಗಿ ಸಪೋರ್ಟ್ ಮಾಡುತ್ತಿದ್ದಾರೆ.

Mahanati reality show director Tharun sudhir and actress Nishvika naidu s dialogue war on stage

ರಾಜಿ-ಜಗ್ಗು ಡೈಲಾಗ್ ವಾರ್

ನಾನಾ-ನೀನಾ ಸ್ಪರ್ಧೆ ಎಂದರೆ ಅಲ್ಲಿ ಹೇಳುವ ಡೈಲಾಗ್, ಡ್ಯಾನ್ಸ್ ಸ್ಟೆಪ್ಸ್ ಎದುರಾಳಿಗಳು ನೀಡಿದ ನಟನೆಯನ್ನು ಮರೆಸುವಂತೆ ಇರಬೇಕು. ಇದೀಗ ನಿಶ್ವಿಕಾ ನಾಯ್ಡು ಹಾಗೂ ತರುಣ್ ಸುಧೀರ್ ಡೈಲಾಗ್ ಕೂಡ ಹಂಗೆ ಇದೆ. ನಿಶ್ವಿಕಾ ಕೆಜಿಎಫ್ ಡೈಲಾಗ್ ಹೊಡೆದರೆ ತರುಣ್ ನವಗ್ರಹ ಡೈಲಾಗ್ ಹೊಡೆದಿದ್ದಾರೆ. 'ಯಾರೋ ಹತ್ತು ಜನನಾ ಹೊಡೆದು ಡಾನ್ ಆಗಿರೋದಲ್ಲ. ನಾನು ಹೊಡೆದಿರೋ ಅಷ್ಟು ಜನ ಡಾನ್ ಗಳೆ' ಎಂದು ನಿಶ್ವಿಕಾ ನಾಯ್ಡು ಕೆಜಿಎಫ್ ಡೈಲಾಗ್ ಹೊಡೆದಿದ್ದಾರೆ. ಅದಕ್ಕೆ ಪ್ರತಿಯಾಗಿ ತರುಣ್ ಸುಧೀರ್ ನವಗ್ರಹ ಡೈಲಾಗ್ ಹೊಡೆದಿದ್ದು, 'ರಾಜ ಆಗ್ಬೇಕು ಅಂತ ಬಂದ್ಮೇಲೆ ರಾಜ್ಯ ಗೆಲ್ಲೋ ತಾಕತ್ತು ಇರಬೇಕು. ಯುದ್ಧಕ್ಕೆ ಅಂತ ನಿಂತ ಮೇಲೆ ಸೈನಿಕರ ಲೆಕ್ಕ ಹಾಕಬಾರದು' ಎಂಬ ಡೈಲಾಗ್ ಹೊಡೆದಿದ್ದಾರೆ. ಅಬ್ಬಬ್ಬಾ ಇಬ್ಬರ ಡೈಲಾಗ್ ಡೆಲಿವರಿಗೆ ಎಲ್ಲರಿಂದಾನೂ ಚಪ್ಪಾಳೆ ಬಂದಿದೆ.

More from Filmibeat

English summary
Here is the details about Tarun sudhir and Nishvika dialogue fight on Mahanati stage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X