mahanati: ತನ್ನ ನಟನೆಯಿಂದ ತರುಣ್ ಬಳಿ ಅವಕಾಶದ ಜೊತೆಗೆ ಅಡ್ವಾನ್ಸ್ ಪಡೆದ ಚಿತ್ರದುರ್ಗದ ಗಗನಾ

By ಎಸ್ ಸುಮಂತ್

ಜೀ ಕನ್ನಡದಲ್ಲಿ ಕಳೆದ ವಾರದಿಂದ 'ಮಹಾನಟಿ' ರಿಯಾಲಿಟಿ ಶೋ ಶುರುವಾಗಿದೆ. ಒಳ್ಳೆಯ ಪ್ರತಿಭೆಗಳನ್ನೇ ಆಯ್ಕೆ ಮಾಡಿ, ಈ ಶೋ ನಡೆಸಲಾಗುತ್ತಿದೆ. ನಾನಾ ಜಿಲ್ಲೆಯಿಂದ ಫೈನಲಿಸ್ಟ್‌ಗಳು ತಮ್ಮ ನಟನಾ ಕೌಶಲ್ಯ ತೋರಿಸುತ್ತಿದ್ದಾರೆ. ರಮೇಶ್ ಅರವಿಂದ್, ಪ್ರೇಮಾ, ತರುಣ್ ಸುದೀರ್, ನಿಶ್ವಿಕಾ ನಾಯ್ಡು ತೀರ್ಪುಗಾರರಾಗಿದ್ದಾರೆ.

ಕಳೆದ ವಾರದ ಫೈನಲ್ ಆಯ್ಕೆ ವೇದಿಕೆ ಮೇಲೆ ಆಯ್ತು. ಈ ವಾರದಿಂದ ಫರ್ಪಾಮೆನ್ಸ್ ಶುರುವಾಗಿದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಭಾವಂತರೇ ಆಗಿದ್ದಾರೆ. ವೀಕ್ಷಕರು ಎಲ್ಲರ ಅಭಿನಯ ನೋಡಿ ಚಪ್ಪಾಳೆ ತಟ್ಟುತ್ತಿದ್ದಾರೆ. ಪ್ರತಿಭೆಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

Mahanati Reality show Director tharun sudir gave advance to contestant

ದಿಢೀರ್ ಟಾಪಿಕ್‌ಗೆ ಅಭಿನಯ

ಮಹಾನಟಿ ವೇದಿಕೆಯಲ್ಲಿ ಜಡ್ಜಸ್ ಎಲ್ಲರ ಪ್ರತಿಭೆಯನ್ನು ಹೊರಗೆ ತರುತ್ತಿದ್ದಾರೆ. ಪ್ರತಿಯೊಬ್ಬರಿಗೂ ಒಂದೊಂದು ಕಾನ್ಸೆಪ್ಟ್ ಕೊಡುತ್ತಿದ್ದಾರೆ. ಆ ಟಾಪಿಕ್ ಮೇಲೆ ಸ್ಪಾಟ್‌ನಲ್ಲೇ ಅಭಿನಯ ಮಾಡಬೇಕು. ಸದ್ಯ 'ಮಹಾನಟಿ'ಯಲ್ಲಿ ಭಾಗವಹಿಸಿರುವ ಎಲ್ಲಾ ಕಲಾವಿದೆಯರು ಕೂಡ ತೀರ್ಪುಗಾರರರು ನೀಡುವ ಕಾನ್ಸೆಪ್ಟ್‌ಗೆ ತಕ್ಕಂತೆ ಸ್ಪಾಟ್‌ನಲ್ಲಿಯೇ ಅಭಿನಯಿಸಿ, ಸೈ ಎನಿಸಿಕೊಳ್ಳುತ್ತಿದ್ದಾರೆ.

ಅಂಬಾನಿ ಮಗನ ಮದುವೆಯಲ್ಲಿ ಗಗನಾ

ಚಿತ್ರದುರ್ಗದಿಂದ ಗಗನಾ ಬಾರಿ ಎಂಬ ಕಲಾವಿದೆ ಬಂದಿದ್ದಾರೆ. ಅವರಿಗೆ ರಮೇಶ್ ಅರವಿಂದ್ ಅವರು ಅಂಬಾನಿ ಮದುವೆಯಲ್ಲಿದ್ದೀನಿ, ಅಲ್ಲಿನ ವಾತಾವರಣವನ್ನು ವಿವರಿಸಿ ಎಂದು ಹೇಳಿದ್ದಾರೆ. ಈಗ ಗಗನಾ ಬಾರಿ ಆ ಕ್ಷಣದಲ್ಲಿಯೇ ಎಲ್ಲವನ್ನು ಊಹೆ ಮಾಡಿಕೊಳ್ಳಬೇಕು. ಊಹೆ ಮಾಡಿಕೊಂಡು ತೀರ್ಪುಗಾರರು ನೀಡಿದ ಸಮಯಕ್ಕೆ ಸರಿಯಾಗಿ ಆ ಸ್ಕಿಟ್ ಅನ್ನು ಮುಗಿಸಬೇಕು. ಅವರೇ ಸ್ಕ್ರಿಪ್ಟ್ ರೈಟರ್, ಅವರೇ ನಟನಾ ಮಾಸ್ಟರ್, ಅವರೇ ಡೈಲಾಗ್ ರೈಟರ್ ಕೂಡ ಆಗಿರುತ್ತಾರೆ. ಯೋಚನೆ ಮಾಡುವುದಕ್ಕೂ ಹೆಚ್ಚಿನ ಸಮಯವೇನು ಇರುವುದಿಲ್ಲ. ಅವರ ಪ್ರತಿಭೆ, ಟೈಮ್‌ಸೆನ್ಸ್ ಕೂಡ ಇದರಲ್ಲಿ ಚೆಕ್ ಮಾಡಿದಂತೆ ಆಗುತ್ತದೆ. ಆದರೆ ತೀರ್ಪುಗಾರರ ನಿರೀಕ್ಷೆ ಮೀರಿ ಅಭಿನಯಿಸುತ್ತಿದ್ದಾರೆ.

Mahanati Reality show Director tharun sudir gave advance to contestant

ಅಂಬಾನಿ ಮದುವೇಲಿ ಗಗನಾ!

ರಮೇಶ್ ಅರವಿಂದ್ ಅವರು ಗಗನಾ ಬಾರಿಗೆ ಅಂಬಾನಿ ಮದುವೆಯಲ್ಲಿನ ವಾತಾವರಣವನ್ನು ವಿವರಿಸುವಂತೆ ಹೇಳಿದಾಗ, 'ಅಂಬಾನಿ ಮಗನ ಮದುವೆಗೆ ಬಂದಿದ್ದೀನಿ ಕಣೇ. ಅಮಿರ್ ಖಾನ್, ಶಾರುಖ್ ಖಾನ್ ಬ್ಯಾಗ್ರೌಂಡ್ ಡ್ಯಾನ್ಸರ್ಸ್, ಜಾಹ್ನವಿ ಕಪೂರ್‌ನ ಹೋಗೋ ಬರೋರಿಗೆಲ್ಲಾ ಹೂ ಹಾಕೋಕೆ ನಿಲ್ಸವ್ರೆ' ಅಂತ ತಮ್ಮದೇ ಸ್ಟೈಲ್‌ನಲ್ಲಿ ಫುಲ್ ಜೋಶ್ ಆಗಿ ಹೇಳಿದ್ದಾರೆ. ಇದನ್ನು ಕೇಳುತ್ತಿದ್ದಂತೆ ಪ್ರೇಮಾ, ರಮೇಶ್ ಅರವಿಂದ್ ನಕ್ಕು ಎಂಜಾಯ್ ಮಾಡಿದ್ದಾರೆ.

ಅಡ್ವಾನ್ಸ್ ಕೊಟ್ಟ ತರುಣ್ ಸುಧೀರ್

ಸ್ಪಾಟ್‌ನಲ್ಲೇ‌ ಡೈಲಾಗ್ ಬರೆದುಕೊಳ್ಳುವುದು ಅಂದ್ರೆ ಸುಮ್ನೆ ಅಲ್ಲ. ಇದು ತರುಣ್ ಸುಧೀರ್ ಅವರನ್ನು ಇಂಪ್ರೆಸ್ ಮಾಡಿದೆ. ಗಗನಾ ಬಾರಿ ಡೈಲಾಗ್‌ಗೆ ಫಿದಾ ಆಗಿದ್ದಾರೆ. ವೇದಿಕೆ ಮೇಲೆ ಬಂದು ರೈಟರ್ ಆಗಿ ನೀನು ಸಿನಿಮಾ ಇಂಡಸ್ಟ್ರಿಗೆ ಬಾರಮ್ಮ. ಯಾವಾಗ ಬೇಕಾದರೂ ಬಾ ಅಂತ ಹೇಳಿ ಅಡ್ವಾನ್ಸ್ ಹಣವನ್ನು ನೀಡಿದ್ದಾರೆ. ಆ ಅಡ್ವಾನ್ಸ್ ತೆಗೆದುಕೊಂಡ ಗಗನಾ ಬಾರಿ, ಈ ಹಣ ನಂಗೆ ಐದು ಕೋಟಿಗೆ ಸಮ ಎಂದು ಕಣ್ಣೀರು ಹಾಕಿದ್ದಾರೆ. ಇದನ್ನು ನೋಡಿದ ಚಿತ್ರದುರ್ಗದ ನೆಟ್ಟಿಗರೊಬ್ಬರು ನಮ್ಮ ದುರ್ಗದ ಹುಡುಗಿ ಅಂದ್ರೆ ಸುಮ್ನೇನಾ? ಅಂತ ಕಮೆಂಟ್ ಹಾಕಿದ್ದಾರೆ. ಇನ್ನು ಹಲವರು ಶುಭಾಶಯ ತಿಳಿಸಿದ್ದಾರೆ.

More from Filmibeat

English summary
zee kannada reality show mahanati Written Update on April 6th episode. Here is the details about Gagan got advance from Tarun Sudhir;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X