Mahanati: 'ಓಂ' ಸಿನಿಮಾದಲ್ಲಿ ಸ್ಕರ್ಟ್ ಹಾಕು ಎಂದಾಗ ಪ್ರೇಮಾಗೆ ಶಾಕ್! ಸೀರೆ ಅಂದ್ರೆ ಹೆಚ್ಚು ಇಷ್ಟ

By ಎಸ್ ಸುಮಂತ್

'ಮಹಾನಟಿ' ರಿಯಾಲಿಟಿ ಶೋನಲ್ಲಿ ಒಂದಷ್ಟು ವಿಚಾರಗಳು ಹೊರಗೆ ಬರುತ್ತಿವೆ. ಅದರಲ್ಲೂ ಪ್ರೇಮಾ, ರಮೇಶ್ ಅರವಿಂದ್ ಕೂಡ ಒಂದೇ ವೇದಿಕೆಯಲ್ಲಿರುವ ಕಾರಣ ಹಳೆಯ ವಿಚಾರಗಳೆಲ್ಲಾ ಆಗಾಗ ಹೊರಗ ಬರುತ್ತವೆ. ಪ್ರೇಮಾ ತನ್ನ ಸಿನಿಮಾಗಳಲ್ಲಿ ನಡೆದ ಕೆಲವೊಂದು ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಈ ವಾರ ಮಹಾನಟಿ ರಿಯಾಲಿಟಿ ಶೋನಲ್ಲಿ ನಟನೆಯ ಟಾಸ್ಕ್ ಮಾತ್ರವಲ್ಲ, ಫೋಟೋಶೂಟ್ ಕೂಡ ಮಾಡಿಸಲಾಗಿದೆ. ಎಲ್ಲರೂ ಫೋಟೋಶೂಟ್‌ನಲ್ಲಿ ಸಿಕ್ಕಾಪಟ್ಟೆ ಮಿಂಚಿದ್ದಾರೆ. ಈ ಫೋಟೋಶೂಟ್ ವಿಡಿಯೋ, ಫೋಟೋಗಳನ್ನು ತೆರೆ ಮೇಲೆ ಪ್ರದರ್ಶನ ಮಾಡಲಾಗಿದೆ. ಈ ಫೋಟೋ ವಿಡಿಯೋಗಳನ್ನು ಕಂಡು ನಟಿ ಪ್ರೇಮಾ, ಹಳೆಯ ನೆನಪುಗಳಿಗೆ ಜಾರಿದ್ದಾರೆ.

Mahanati reality show judge Prema her recalls Om film photoshoot

ಬಿಂದು ಹೊನ್ನಾಳಿ ಫೋಟೋಶೂಟ್

ಮಹಾನಟಿ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳ ಫೋಟೋಶೂಟ್ ಕೂಡ ನಡೆದಿದೆ. ಸೂಪರ್ ಎನಿಸುವಂತ ಲೊಕೇಷನ್‌ನಲ್ಲಿ, ಪೋಸ್ ಕೊಟ್ಟು ಫೋಟೋಶೂಟ್ ಮಾಡಿಸಲಾಗಿದೆ. ವೇದಿಕೆ ಮೇಲೆ ಪರ್ಫಾಮೆನ್ಸ್‌ಗೂ ಮುನ್ನ ಫೋಟೊಶೂಟ್ ಪ್ಲೇ ಮಾಡಲಾಗಿದೆ‌. ಫೋಟೋಶೂಟ್‌ಗೂ ಮುನ್ನ ಇದ್ಯಾವುದು ಅವರ ಅರಿವಿಗೆ ಬಂದಿಲ್ಲ. ಆದರೆ ಸ್ಟೇಜ್ ಮೇಲೆ ಫೋಟೋಶೂಟ್ ನೋಡಿ ಸ್ಪರ್ಧಿಗಳೇ ಖುಷಿಯಾಗಿದ್ದಾರೆ.

ಬಿಂದುಗೆ ಮಾಡ್ರನ್ ಡ್ರೆಸ್ ತೊಟ್ಟ ಖುಷಿ

ಬಿಂದು ಹೊನ್ನಾಳಿ ಹಳ್ಳಿಯಿಂದ ಬಂದಿರುವ ಸ್ಪರ್ಧಿ. ಸಾಂಪ್ರದಾಯಿಕ ಉಡುಗೆಯನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಈಗ ಫೋಟೋಶೂಟ್‌ನಲ್ಲೂ ಮೊದಲಿಗೆ ಸೀರೆಯಲ್ಲಿಯೇ ಪೋಸ್ ಕೊಟ್ಟಿದ್ದಾರೆ. 'ಇವತ್ತು ಫೋಟೋ ಸೆಷನ್‌ ಇತ್ತು. ಸೀರೆ ಉಟ್ಟುಕೊಳ್ಳುವುದಕ್ಕೆ ಹೇಳಿದರು. ನನಗೆ ಸೀರೆ ಅಂದ್ರೆ ಪ್ರಾಣ. ಅದಾದ ಮೇಲೆ ಒಂದು ವೆಸ್ಟ್ರನ್ ಡ್ರೆಸ್ ಅಂತ ಕೊಟ್ರು. ನಾನು ಅದನ್ನೆಲ್ಲಾ ಹಾಕಿಕೊಂಡಿದ್ದು ಫಸ್ಟ್ ಟೈಮ್. ನಮ್ಮ ಹಳ್ಳಿಯಲ್ಲಿ ಆ ಥರದ ಡ್ರೆಸ್‌ನ್ನೆಲ್ಲಾ ಹಾಕಿಕೊಂಡಿಲ್ಲ‌ ಏನೋ ಒಂಥರ ಖುಷಿ ಕೊಟ್ಟಿದೆ‌. ನಾನು ಅಂದುಕೊಳ್ಳುವುದೆಲ್ಲಾ ಇಲ್ಲಿ ಆಗ್ತಾ ಇದೆ. ಈಗ ಬಿಂದು ಮಾಡ್ರನ್ ಹಾಗೂ ಟ್ರೆಡಿಷನಲ್ ಆಗಿ ಚೆನ್ನಾಗಿ ಕಾಣ್ತಾಳೆ' ಎಂದಿದ್ದಾರೆ.

Mahanati reality show judge Prema her recalls Om film photoshoot

'ಓಂ' ಚಿತ್ರದಲ್ಲಿ ಸ್ಕರ್ಟ್ ಹಾಕಿದ್ದ ಪ್ರೇಮಾ

ಈ ಫೋಟೋಶೂಟ್ ಹಾಗೂ ಬಿಂದು ಮಾತು ಕೇಳಿ ಪ್ರೇಮಾ 'ಓಂ' ಸಿನಿಮಾ ನೆನಪುಗಳನ್ನು ಮೆಲುಕು ಹಾಕಿದ್ದಾರೆ. 'ಓಂ' ಸಿನಿಮಾದ ಒಂದು ಸೀನ್‌ನಲ್ಲಿ ಸ್ಕರ್ಟ್ ಹಾಕುವುದಕ್ಕೆ ಕೊಟ್ಟರು. ನನಗೆ ಇಷ್ಟವಿರಲಿಲ್ಲ. ಆದರೂ ಹಾಕಿಕೊಳ್ಳಬೇಕಾಯ್ತು. ನಂಗೆ ಸೀರೆನೇ ತುಂಬಾ ಇಷ್ಟ. ಆದರೆ ಸೀರೆಯಲ್ಲೂ ಇರಬೇಕು, ಮಾಡ್ರನ್ ಡ್ರೆಸ್‌ನಲ್ಲೂ ಇರಬೇಕು. ಕ್ಯಾರೆಕ್ಟರ್ ಏನು ಕೇಳುತ್ತೆ ಅದರಂತೆ ಎಂದಿದ್ದಾರೆ.

ನನ್ನವಳು ನನ್ನವಳು ಸಿನಿಮಾ ನೆನಪು

ತನ್ನ ತಂದೆಯ ಬಗ್ಗೆ ಇದೇ ವೇದಿಕೆಯಲ್ಲಿ ತರುಣ್ ಸುಧೀರ್ ನೆನಪುಗಳನ್ನು ಹೇಳಿದ್ದಾರೆ. 'ನಾನು ಥಿಯೇಟರ್‌ನಲ್ಲಿ ಫಸ್ಟ್ ಟೈಮ್ ನೋಡಿದ ಸಿನಿಮಾ 'ಓಂ'. ನನ್ನ ತಂದೆ‌ಮಾಡಿದಂತ ಲಾಸ್ಟ್ ಸಿನಿಮಾ ಅದು ಮೇಡಂ ಅವರ ಜೊತೆಗೆ. 'ನನ್ನವಳು ನನ್ನವಳು' ಎಂದಿದ್ದಾರೆ. ಇದೇ ವೇಳೆ ಪ್ರೇಮಾ ಕೂಡ ಆ ದಿನಗಳನ್ನು ನೆನೆದು, ಹೌದು ನಾನು ಅವರ ಜೊತೆಗೆ ಮಾಡಿದಂತ ಫಸ್ಟ್ ಸಿನಿಮಾ, ಅವರ ಲಾಸ್ಟ್ ಸಿನಿಮಾ. ಪಾಪ ಅವರ ಆರೋಗ್ಯ ಸರಿಯಿಲ್ಲದೇ ಇದ್ದರು ಆಕ್ಸಿಜನ್ ಹಾಕಿಕೊಂಡು ಮಾಡುತ್ತಾ ಇದ್ದರು. ಇಷ್ಟು ಹಿರಿಯ ಕಲಾವಿದ ಹೇಗಾಗಿ ಬಿಟ್ಟರಲ್ಲ ಅಂತ ಎಷ್ಟೋ ಸಲ ಅನ್ನಿಸ್ತಾ ಇತ್ತು ಎಂದಿದ್ದಾರೆ.

More from Filmibeat

English summary
zee kannada reality show mahanati Written Update on April 7th episode. Here is the details about Prema shared her memories of Om movie;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X