Mahanati: ಮರ್ಯಾದಾ ಹತ್ಯೆ ಸ್ಕಿಟ್; ಎಲ್ಲರಿಗೂ ಕಣ್ಣೀರು ತರಿಸಿದ ಆರಾಧನಾ ಭಟ್ ನಟನೆ!

By ಎಸ್ ಸುಮಂತ್

ರಾಜ್ಯದಲ್ಲೂ ಮರ್ಯಾದಾ ಹತ್ಯಾ ಪ್ರಕರಣಗಳು ಸಾಕಷ್ಟು ವರದಿಯಾಗಿವೆ. ಜಗತ್ತು ಬದಲಾದರು ಕೂಡ ಎಷ್ಟೋ ಕಡೆಗಳಲ್ಲಿ ಮರ್ಯಾದಾ ಹತ್ಯೆಗಳು ಮಾತ್ರ ನಿಲ್ಲುತ್ತಿಲ್ಲ. ಬೇರೆ ಜಾತಿಯವರನ್ನ ಪ್ರೀತಿಸಿ ಮದುವೆಯಾದರೆ, ಮರ್ಯಾದೆಗಳು ಹೋಗುತ್ತವೇ ಎಂಬ ಕಾರಣ ನೀಡಿ, ಜೀವವನ್ನೇ ತೆಗೆದ ಪೋಷಕರಿದ್ದಾರೆ. ಇಂದು 'ಮಹಾನಟಿ' ವೇದಿಕೆಯಲ್ಲಿ ಅದೇ ಕಾನ್ಸೆಪ್ಟ್ ತೆಗೆದುಕೊಂಡು ಆರಾಧನಾ ಭಟ್ ಮನೋಜ್ಞವಾಗಿ ಅಭಿನಯಿಸಿದ್ದಾರೆ.

'ಮಹಾನಟಿ' ವೇದಿಕೆಯಲ್ಲಿ ಸೆಮಿ ಫಿನಾಲೆ ನಡೆಯುತ್ತಿದೆ. ಐದು ಜನ ಉಳಿದುಕೊಂಡಿದ್ದಾರೆ. ಐದು ಜನರಲ್ಲಿ ಫಿನಾಲೆ ತಲುಪವವರು ಯಾರು..? ಕಪ್ ಎತ್ತಿಕೊಳ್ಳುವವರು ಯಾರು ಎಂಬ ಕುತೂಹಲ ಸಹಜವಾಗಿಯೇ ಇದೆ. ಒಬ್ಬೊಬ್ಬರು ನೀನಾ-ನಾನಾ ಎಂಬಷ್ಟು ಸ್ಟ್ರಾಂಗ್ ಅದ್ಭುತ ಪ್ರತಿಭೆಯನ್ನು ಹೊರ ಹಾಕುತ್ತಿದ್ದಾರೆ. ಆರಾಧನಾ ಭಟ್ ನಟನೆಗೆ ನೋಡುಗರ ಕಣ್ಣಲ್ಲೂ ನೀರು ಬಂದಿದೆ.

Mahanati show Everyone emotional for Aradana Bhatt s honor killing skit

ಮನೆಯ ಮರ್ಯಾದೆ ಕಳೆದಳು ಎಂಬ ಕೋಪ

ಇವತ್ತಿನ 'ಮಹಾನಟಿ' ವೇದಿಕೆಯಲ್ಲಿ ಆರಾಧನಾ ಮಾಡಿರುವ ಪಾತ್ರ ಬಹಳ ಅದ್ಭುತವಾಗಿತ್ತು. ಮನೆಯಿಂದ ಓಡಿ ಹೋಗಿ ಬೇರೆ ಜಾತಿಯ ಹುಡುಗನನ್ನು ಮದುವೆಯಾಗಿದ್ದಳು. ಈಗ ತುಂಬು ಗರ್ಭಿಣಿ ಕೂಡ. ಆದರೆ ಆಕೆಯ ತಂದೆಗೆ ಮಗಳ ಮೇಲೆ ಮೊದಲಿದ್ದ ಪ್ರೀತಿ ಹೋಗಿ, ಸಂಪೂರ್ಣವಾಗಿ ಕೋಪ ಬಂದಿತ್ತು. ಮನೆಯ ಮರ್ಯಾದೆ ಕಳೆದು ಬಿಟ್ಟಳು ಎಂಬ ಕೋಪ. ಹೋದಲ್ಲಿ ಬಂದಲ್ಲಿ ಜನರೆಲ್ಲಾ‌ ನಿನ್ನ ಮಗಳು ಹೀಗೆ ಮಾಡಿಬಿಟ್ಟಳಲ್ಲ ಎಂದಾಗ ತಂದೆಗೆ ಸಾಯುವುದಕ್ಕಿಂತ ಸಾಯಿಸಬೇಕು ಎಂಬ ದ್ವೇಷ ಹೆಚ್ಚಾಗಿತ್ತು.

ವಿಷ ಹಾಕಿ ಸಾಯಿಸಿದ ತಂದೆ

ಪ್ರತಿದಿನ ಇದನ್ನೇ ಅನುಭವಿಸಿದ್ದ ತಂದೆ ಒಂದು ದಿನ ಮಗಳನ್ನು ಕರೆಸಿದ. ಪ್ರೀತಿಯ ಮಾತುಗಳನ್ನಾಡಿ, ಮಗಳನ್ನು ಯಾಮಾರಿಸಿದ್ದ. ಬಂದ ಮಗಳಿಗೆ ಅನ್ನ ಕಲಸಿ ತಿನ್ನಿಸಿದ. ಆ ಅನ್ನದಲ್ಲಿಯೇ ವಿಷವನ್ನು ಸೇರಿಸಿದ್ದ. ಮಗಳಿಗೆ ಹೊಟ್ಟೆ ನೋವು ಬಂತು. ತಂದೆಯನ್ನೇ ಅವಲತ್ತುಕೊಂಡಳು. ಆಸ್ಪತ್ರೆಗೆ ಹೋಗೋಣಾ, ಮಗುವಿನ ಬಗ್ಗೆ ಭಯ ಆಗ್ತಾ ಇದೆ ಅಂತ. ಆದರೆ ಅವನು ಆಸ್ಪತ್ರೆಗೆ ಕರೆದುಕೊಂಡು ಹೋಗದೆ‌ ರೂಮಿನಲ್ಲಿ ಕೂಡಿ ಹಾಕಿದ. ನೀನು ಸಾಯಬೇಕು ನಿನ್ನ ಮಗುವು ಸಾಯಬೇಕು ಎಂದು ಮಗಳನ್ನು ವಿಷ ಹಾಕಿ ಕೊಂದೇ ಬಿಟ್ಟ.

Mahanati show Everyone emotional for Aradana Bhatt s honor killing skit

ಆರಾಧನಾ ಅಭಿನಯಕ್ಕೆ ಜಡ್ಜಸ್ ಫಿದಾ

ಈ ಪಾತ್ರದಲ್ಲಿ ಆರಾಧನಾ ನಟನೆ ಮಾಡಲಿಲ್ಲ, ಮುಳುಗಿ ಹೋಗಿದ್ದರು. ಪಾತ್ರದಲ್ಲಿ ಪರಾಕಾಯ ಪ್ರವೇಶ ಮಾಡಿದ್ದರು. ಅಪ್ಪನ ಮನೆಗೆ ಬಂದಾಗ ಅಪ್ಪ ಕ್ಷಮಿಸಿದ್ದು ಕಂಡು ಖುಷಿ ಪಟ್ಟಳು, ಅಪ್ಪ ವಿಷ ಹಾಕಿದಾಗ ಗೋಗರೆದರು. ಇದೆಲ್ಲವೂ ಆರಾಧನಾ ಅಭಿನಯ ಎಂತದು ಎಂಬುದನ್ನು ತೋರಿಸಿತ್ತು. ಆರಾಧನಾ ನಟನೆ ಮುಗಿದೊಡನೆ ತೀರ್ಪುಗಾರರಿಂದ ಶಬ್ಬಾಶ್ ಗಿರಿ ಪಡೆದಳು. ಫಿನಾಲೆಗೆ ಎಂಟ್ರಿ ಕೂಡ ಪಡೆದುಕೊಂಡರು.

ಆರಾಧನಾ ಅಳು.. ಗರ್ಭಿಣಿ ನೋವು..

ಆರಾಧನಾ ಅಭಿನಯವನ್ನು ಇಂದು ನೋಡಿದರೆ ಎಂಥ ಕಲ್ಲು ಮನಸ್ಸಿದ್ದರು ಕರಗದೆ ಇರುವುದಿಲ್ಲ. ಆಕೆಯ ಅಳು ನಮ್ಮಲ್ಲೂ ಕಣ್ಣೀರು ತರಿಸಿತ್ತು.. ಆಕೆಯ ಒದ್ದಾಟ ಕುಳಿತವರು ತೊಳಲಾಡುವಂತೆ ಮಾಡುತ್ತದೆ. ನಿಶ್ವಿಕಾ ನಾಯ್ಡು ಅಂತು ಆರಾಧನಾ ನಟನೆ ನೋಡಿ ಒಂದು ಕ್ಷಣ ಕಣ್ಣಲ್ಲಿ ನೀರು ಹಾಕಿದರು. ಎಲ್ಲರನ್ನು ಮೂಕವಿಸ್ಮಿತರಾಗುವಂತೆ ಮಾಡಿದ ಆರಾಧನಾ ಫೈನಲಿಸ್ಟ್ ಆಗಿ ಸೆಲೆಕ್ಟ್ ಆದ ಕೂಡಲೇ ನಿಜವಾಗಲೂ ಕಣ್ಣಲ್ಲಿ ನೀರು ಹಾಕಿದರು. ನಟನೆಗೆ ಸಾಥ್ ನೀಡಿದ ತಂದೆಯನ್ನು ತಬ್ಬಿಕೊಂಡು ಕಣ್ಣೀರು ಹಾಕಿದರು.

More from Filmibeat

English summary
zee kannada reality show mahanati Written Update on July 7th episode. Here is the details about Aradhana Bhatt reached the finale;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X