'ಮಹಾನಟಿ' ಶೋ ವಿನ್ನರ್ ಪ್ರಿಯಾಂಕಾ ಚಾಲೆಂಜಿಗ್ ಸ್ಟಾರ್‌ ದರ್ಶನ್ ಆಪ್ತ ಸ್ನೇಹಿತನ ಮಗಳು ಅನ್ನೋದು ಗೊತ್ತೇ?

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಹಾನಟಿ' ಶೋ ಮುಕ್ತಾಯಗೊಂಡಿದೆ. ಗಗನಾ, ಶ್ವೇತಾ ಭಟ್, ಧನ್ಯಶ್ರೀ, ಪ್ರಿಯಾಂಕ, ಆರಾಧನಾ ಭಟ್ ಅವರು ಫಿನಾಲೆಗೆ ತಲುಪಿದ್ದು ಅದರಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನ ತರೀಕೆರೆ ಬೆಡಗಿ ಪ್ರಿಯಾಂಕಾ ಅವರು ವಿನ್ನರ್ ಆಗಿ ಹೊರಹೊಮ್ಮಿರುವುದು ಕಿರುತೆರೆ ವೀಕ್ಷಕರಿಗೆ ತಿಳಿದೇ ಇದೆ. ಫಿನಾಲೆಯಲ್ಲಿ ಐದು ಜನ ಸ್ಪರ್ಧಿಗಳು ಐದು ಕಿರುಚಿತ್ರದಲ್ಲಿ ನಟಿಸಬೇಕಿತ್ತು.

ಪ್ರಿಯಾಂಕಾ ಅವರು 'ಅನುರಾಗ' ಎನ್ನುವ ಶಾರ್ಟ್ ಫಿಲಂನಲ್ಲಿ ನಟಿಸಿದ್ದರು. ಮನೆಯವರ ಬಲವಂತಕ್ಕೆ ತನ್ನ ಕನಸುಗಳನ್ನು ಮರೆಗೊತ್ತಿ ಮದುವೆಯಾದಾಗ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬ ಸಂದೇಶವನ್ನು ಆ ಕಿರುಚಿತ್ರದ ಮೂಲಕ ನೀಡಿದ್ದರು ಪ್ರಿಯಾಂಕಾ. ತೀರ್ಪುಗಾರರ ಜೊತೆಗೆ ಕಿರುತೆರೆ ವೀಕ್ಷಕರನ್ನು ಸೆಳೆದಿದ್ದರು ಪ್ರಿಯಾಂಕಾ.

Mahanati show winner Priyanka is the daughter of Challenging Star Darshan close friend

ಬರೋಬ್ಬರಿ ಮೂರು ತಿಂಗಳಿಂದ ಪ್ರತಿ ವಾರವೂ ತಮ್ಮ ನಟನೆಯ ಮೂಲಕ ವೀಕ್ಷಕರನ್ನು ಹಾಗೂ ತೀರ್ಪುಗಾರರನ್ನು ಪ್ರಿಯಾಂಕಾ ರಂಜಿಸುತ್ತಿದ್ದರು. ಅಂದ ಹಾಗೇ ಪ್ರಿಯಾಂಕಾ ಆಚಾರ್ ಅವರು 'ಮಹಾನಟಿ' ಶೋವಿಗೆ ಆಯ್ಕೆಯಾಗಿದ್ದಾಗ ಆಕೆಗೆ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರೇ ಖುದ್ದು ವಿಶ್ ಮಾಡಿದ್ದರಂತೆ. ಇದನ್ನು ಸ್ವತಃ ಪ್ರಿಯಾಂಕಾ ಅವರೇ ಹೇಳಿಕೊಂಡಿದ್ದರು.

ಅಂದ ಹಾಗೇ ಪ್ರಿಯಾಂಕಾ ಆಚಾರ್ ಅವರ ತಂದೆ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕ್ಲಾಸ್‌ಮೇಟ್ ಕೂಡ ಹೌದು. ಅದೇ ಕಾರಣದಿಂದ ಪ್ರಿಯಾಂಕಾ ಅವರು ಈ ಶೋವಿಗೆ ಆಯ್ಕೆಯಾದಾಗ ದರ್ಶನ್ ಅವರು ಫೋನ್ ಮಾಡಿ ವಿಶ್ ಮಾಡಿದ್ದರು. ಚೆನ್ನಾಗಿ ಕಲಿ ಎಂದು ಕೂಡಾ ಅವರು ಹೇಳಿದ್ದರಂತೆ. ಅದರಂತೆಯೇ ಪ್ರತಿ ವಾರವೂ ವಿಭಿನ್ನ ರೀತಿಯಲ್ಲಿ ಪ್ರೇಕ್ಷಕರನ್ನು ರಂಜಿಸಿದ ಪ್ರಿಯಾಂಕಾ ಅವರು ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಜೊತೆಗೆ ಹದಿನೈದು ಲಕ್ಷ ಮೌಲ್ಯದ ಚಿನ್ನದ ಕಿರೀಟ ಪಡೆದುಕೊಂಡಿದ್ದಾರೆ.

Mahanati show winner Priyanka is the daughter of Challenging Star Darshan close friend

ಚಿಕ್ಕಮಗಳೂರಿನ ತರೀಕೆರೆಯ ಧನ್ಯಶ್ರೀ ಅವರು 'ಮಹಾನಟಿ' ಶೋವಿನ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದು, ಹತ್ತು ಲಕ್ಷ ರೂಪಾಯಿ ಬಹುಮಾನ ದೊರಕಿದೆ. ಮೂರನೇ ಸ್ಥಾನ ಪಡೆದ ಚಿತ್ರದುರ್ಗದ ಗಗನಾ, ನಾಲ್ಕನೇ ಸ್ಥಾನ ಪಡೆದ ಆರಾಧನಾ ಭಟ್‌, ಐದನೇ ಸ್ಥಾನ ಶ್ವೇತಾ ಭಟ್‌ ಅವರಿಗೆ ತಲಾ ಒಂದು ಲಕ್ಷ ಬಹುಮಾನ ನೀಡಲಾಯಿತು.

ಅನುಶ್ರೀ ಅವರ ನಿರೂಪಣೆಯಲ್ಲಿ ಮೂಡಿಬಂದಿರುವ ಈ ಶೋವಿನಲ್ಲಿ ಚಂದನವನದ ಚೆಲುವೆ ಪ್ರೇಮಾ, ಖ್ಯಾತ ನಿರ್ದೇಶಕ ತರುಣ್ ಸುಧೀರ್ ಹಾಗೂ ಸ್ಯಾಂಡಲ್ ವುಡ್ ನಟಿ ನಿಶ್ವಿಕಾ ನಾಯ್ಡು ಅವರು ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು.

More from Filmibeat

English summary
Mahanati show winner Priyanka is the daughter of Challenging Star Darshan close friend
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X