For Quick Alerts
  ALLOW NOTIFICATIONS  
  For Daily Alerts

  'ಮಹಾನಾಯಕ' ಧಾರಾವಾಹಿ ಪ್ರಸಾರ ಮಾಡದಿರುವುದಕ್ಕೆ ಕಾರಣವೇನು?

  |

  ಸಂವಿಧಾನಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಜೀವನಗಾಥೆಯ 'ಮಹಾನಾಯಕ' ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಆದರೆ ನಿನ್ನೆ ಭಾನುವಾರ ಧಾರಾವಾಹಿ ಪ್ರಸಾರವಾಗಿಲ್ಲ. ಹಾಗಾಗಿ ವೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

  ಪ್ರತೀ ಶನಿವಾರ ಮತ್ತು ಭಾನುವಾರ ಸಂಜೆ 6.30ಕ್ಕೆ ಧಾರಾವಾಹಿ ಪ್ರಸಾರವಾಗುತ್ತದೆ. ಆದರೆ ಭಾನುವಾರ ಧಾರಾವಾಹಿ ಪ್ರಸಾರವಾಗದಿರುವ ಕಾರಣ ಸ್ಥಗಿತಗೊಳಿಸಲಾಗಿದೆಯೇ ಎನ್ನುವ ಅನುಮಾನ ಪ್ರೇಕ್ಷಕರನ್ನು ಕಾಡಿದೆ. ತುಂಬಾ ಇಷ್ಟಪಟ್ಟು ನೋಡುತ್ತಿದ್ದ ಧಾರಾವಾಹಿಯನ್ನು ದಿಢೀರ್ ನಿಲ್ಲಿಸಲಾಗಿದೆ ಎಂದು ವೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರಹಾಕುತ್ತಿದ್ದಾರೆ. ಆದರೆ ಧಾರಾವಾಹಿ ಪ್ರಸಾರವಾಗದಿರುವುದಕ್ಕೆ ನಿಜವಾದ ಕಾರಣವೇನು? ಮುಂದೆ ಓದಿ...

  ಧಾರಾವಾಹಿ ನಿಲ್ಲಿಸುವಂತೆ ಬೆದರಿಕೆ ಕರೆಗಳು

  ಧಾರಾವಾಹಿ ನಿಲ್ಲಿಸುವಂತೆ ಬೆದರಿಕೆ ಕರೆಗಳು

  ವೀಕ್ಷಕರ ಅನುಮಾನಕ್ಕೆ ಕಾರಣವಾಗಿದ್ದು, ಈ ಹಿಂದೆ ಧಾರಾವಾಹಿ ನಿಲ್ಲಿಸುವಂತೆ ಬೆದರಿಕೆ ಕರೆಗಳು, ಸಂದೇಶಗಳು ಬರುತ್ತಿವೆ ಎಂದು ಜೀ ವಾಹಿನಿಯ ಬ್ಯುಜಿನೆಸ್ ಹೆಡ್ ರಾಘವೇಂದ್ರ ಹುಣಸೂರು ಹೇಳಿದ್ದರು. ಹಾಗಾಗಿ ಮಹಾನಾಯಕ ಧಾರಾವಾಹಿ ಪ್ರಸಾರವನ್ನು ನಿಲ್ಲಿಸಿ ಬಿಟ್ಟರಾ ಎನ್ನುವ ಅನುಮಾನ ಕಾಡಿದೆ.

  ಪ್ರಸಾರ ಮಾಡದಿರಲು ಕಾರಣವೇನು?

  ಪ್ರಸಾರ ಮಾಡದಿರಲು ಕಾರಣವೇನು?

  ಭಾನುವಾರ 'ಪಾಪ್ ಕಾರ್ನ್ ಮಂಕಿ ಟೈಗಲ್' ಸಿನಿಮಾ ಜೀ ಕನ್ನಡದಲ್ಲಿ ಪ್ರಸಾರವಾಗಿದೆ. ಈ ಧಾರಾವಾಹಿ ಪ್ರಸಾರವಾಗುತ್ತಿದ್ದ ಸಮಯದಲ್ಲೇ 'ಪಾಕ್ ಕಾರ್ನ್ ಮಂಕಿ ಟೈಗರ್' ಸಿನಿಮಾಗೆ ಅವಧಿಯನ್ನು ಮೀಸಲಿಡಲಾಗಿತ್ತು. ಹಾಗಾಗಿ ಧಾರಾವಾಹಿ ಪ್ರಸಾರವಾಗಿರಲಿಲ್ಲ. ಆದರೆ ಎಂದಿನಂತೆ ಪ್ರಸಾರವಾಗಲಿದೆ ಎಂದು ಜೀ ಕನ್ನಡ ವಾಹಿನಿ ತಿಳಿಸಿದೆ.

  ಪ್ರಸಾರವಾಗದಿರುವುದಕ್ಕೆ ವಿಷಾಧಿಸುತ್ತೇವೆ

  ಪ್ರಸಾರವಾಗದಿರುವುದಕ್ಕೆ ವಿಷಾಧಿಸುತ್ತೇವೆ

  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜೀ ಕನ್ನಡ ವಾಹಿನಿ "ಮಹಾನಾಯಕ ಡಾ. ಬಿ. ಆರ್. ಅಂಬೇಡ್ಕರ್ ಧಾರಾವಾಹಿ ಪ್ರಸಾರವಾಗದಿರುವುದಕ್ಕೆ ವಿಷಾಧಿಸುತ್ತೇವೆ. ಎಂದಿನಂತೆ ಮುಂದಿನ ವಾರದಿಂದ ಶನಿವಾರ ಹಾಗೂ ಭಾನುವಾರ ಸಂಜೆ 6:30ಕ್ಕೆ 'ಮಹಾನಾಯಕ' ಪ್ರಸಾರವಾಗಲಿದೆ. ತಪ್ಪದೇ ವೀಕ್ಷಿಸಿ." ಎಂದು ಹೇಳಿದ್ದಾರೆ.

  ಇದು ಕನ್ನಡದ ಹೆಣ್ಣು ಮಗಳ ಹೃದಯ | Pranitha | Filmibeat Kannada
  ಧಾರಾವಾಹಿ ನಮ್ಮ ಹೆಮ್ಮೆ

  ಧಾರಾವಾಹಿ ನಮ್ಮ ಹೆಮ್ಮೆ

  'ಮಹಾನಾಯಕ ಧಾರಾವಾಹಿ ನಿಲ್ಲಿಸುವಂತೆ ಮಧ್ಯರಾತ್ರಿಯಿಂದ ಕರೆಗಳು, ಬೆದರಿಕೆ ಸಂದೇಶಗಳು ಬರುತ್ತಿವೆ. ಆದರೆ ಇವನ್ನೆಲ್ಲಾ ನಾವು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಧಾರಾವಾಹಿಯು ಎಂದಿನಂತೆ ಮುಂದುವರೆಯಲಿದೆ. ಧಾರಾವಾಹಿ ನಮ್ಮ ಹೆಮ್ಮೆ ಮತ್ತು ನನಗೆ ವೈಯಕ್ತಿಕವಾಗಿ ಇಷ್ಟವಾದ ಧಾರಾವಾಹಿ. ಯಾರಿಗೆ ಈ ಧಾರಾವಾಹಿ ಸಮಾಜಕ್ಕೆ ಒಳಿತಲ್ಲ ಎನಿಸುತ್ತದೆಯೋ ಅವರೇ ನಿಜವಾಗಿಯೂ ಸಮಾಜಕ್ಕೆ ಒಳಿತಲ್ಲ, ಜೈ ಭೀಮ್' ಎಂದ ರಾಘವೇಂದ್ರ ಹುಣಸೂರು ಹೇಳಿದ್ದರು.

  English summary
  Mahanayaka kannada serial not broadcast on Sunday. Viewers outrage against zee kannada for not telecast Mahanayaka serial.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X