ಮಹಾಶಿವರಾತ್ರಿ ಸಂಭ್ರಮದಲ್ಲಿ ಶಿವನಾಗಿ ಮೋಡಿ ಮಾಡಿದ ಕಿಶನ್ ಬಿಳಗಲಿ; ಹೇಗಿದೆ ಫೋಟೋಶೂಟ್?
ಕಿಶನ್ ಬಿಳಗಲಿ ಸೋಶಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿರುವ ಪೈಕಿ ಇವರು ಕೂಡಾ ಒಬ್ಬರು. ಬರೋಬ್ಬರಿ ಏಳು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಕಿಶನ್ ಬಿಳಗಲಿ ಅವರು ಡ್ಯಾನ್ಸ್, ರೀಲ್ಸ್ ಮೂಲಕ ನೆಟ್ಟಿಗರ ಮನ ಸೆಳೆದಿದ್ದಾರೆ.
ಈಗಾಗಲೇ ಧನ್ಯಾ ರಾಮ್ ಕುಮಾರ್, ನಮ್ರತಾ ಗೌಡ, ರಾಧಿಕಾ ನಾರಾಯಣ್, ಶ್ವೇತಾ ಶ್ರದ್ಧಾ, ಬೃಂದಾ ಆಚಾರ್ಯ, ರಾಗಿಣಿ ದ್ವಿವೇದಿ ಮುಂತಾ ಕಲಾವಿದರೊಡನೆ ನೃತ್ಯಕ್ಕೆ ಹೆಜ್ಜೆ ಹಾಕಿದ್ದಾರೆ ಕಿಶನ್ ಬಿಳಗಲಿ. ಇನ್ನು ರೀಲ್ಸ್ ಹೊರತಾಗಿ ಫೋಟೋಶೂಟ್ ಮೂಲಕವೂ ಕಿಶನ್ ಬಿಳಗಲಿ ಸದ್ದು ಮಾಡುತ್ತಾರೆ.

ಶಿವರಾತ್ರಿಯ ಪ್ರಯುಕ್ತ ಶಿವನ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ನೆಟ್ಟಿಗರ ಹಾಗೂ ಫಾಲೋವರ್ಸ್ ಮನ ಸೆಳೆದಿದ್ದಾರೆ ಕಿಶನ್. ಹೌದು, ಶಿವನಂತೆ ಫೋಟೋಶೂಟ್ ಮೂಲಕ ವೀಕ್ಷಕರ ಮನ ಸೆಳೆದಿರುವ ಕಿಶನ್ ಬಿಳಗಲಿ ಒಂದು ದಿನದ ಹಿಂದೆಯಷ್ಟೇ ಈ ಫೋಟೋಗಳನ್ನು ಹಂಚಿಕೊಂಡಿದ್ದು ಬರೋಬ್ಬರಿ ಹನ್ನೊಂದು ಸಾವಿರಗಳಷ್ಟು ಲೈಕ್‌ಗಳು ಬಂದಿದೆ. ಇದರ ಜೊತೆಗೆ ನೂರಕ್ಕೂ ಹೆಚ್ಚು ಕಮೆಂಟ್‌ಗಳು ಈ ಫೋಟೋಗಳಿಗೆ ಬಂದಿದ್ದು ನಲುವತ್ತಕ್ಕೂ ಹೆಚ್ಚು ಮಂದಿ ಈ ಫೋಟೋವನ್ನು ಶೇರ್ ಮಾಡಿಕೊಂಡಿರುವುದು ಖುಷಿಯ ವಿಚಾರ.
ಶಿವನಂತೆ ಜಟೆ ಹಾಗೂ ರುದ್ರಾಕ್ಷಿ ಧರಿಸಿರುವ ಕಿಶನ್ ಕೈಯಲ್ಲಿ ತ್ರಿಶೂರವನ್ನು ಹಿಡಿದಿದ್ದಾರೆ. ಆ ತ್ರಿಶೂಲದ ಜೊತೆಗೆ ಡಮರುಗವೂ ಇದ್ದು ಎಲ್ಲಾ ಫೋಟೋಗಳು ಒಂದಕ್ಕಿಂತ ಒಂದು ಆಕರ್ಷಿತವಾಗಿದೆ. ಅಂದ ಹಾಗೇ ಕಳೆದ ವರ್ಷ ರಾಮಮಂದಿರದ ಉದ್ಘಾಟನೆಯ ಶುಭ ದಿನದಂದು ರಾಮನಂತೆ ಫೋಟೋಶೂಟ್ ಮಾಡಿಸಿ ನೆಟ್ಟಿಗರ ಮನ ಸೆಳೆದಿದ್ದರು.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಿನಗಾಗಿ' ಧಾರಾವಾಹಿಯಲ್ಲಿ ನಾಯಕಿ ಸೂಪರ್ ಸ್ಟಾರ್ ರಚನಾ ಮಾವನ ಮಗ ಅಶ್ವಿನ್ ಆಗಿ ನಟಿಸಿದ್ದರು ಕಿಶನ್. ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡ ಕಿಶನ್ ಕೇವಲ ನಟನೆ ಮಾತ್ರವಲ್ಲದೇ ವೇಷ ಭೂಷಣಗಳ ಮೂಲಕವೂ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು.

ಚಿಕ್ಕಮಗಳೂರಿನ ಮೂಲಕ ಕಿಶನ್ ಬಿಳಗಲಿ ಅದ್ಭುತ ನೃತ್ಯಕಲಾವಿದ ಹೌದು. ಶಿಯಾಮಕ್ ದಾವರ್ ಅವರ ಡ್ಯಾನ್ಸ್ ಅಕಾಡೆಮಿಯಲ್ಲಿ ತರಬೇತಿ ಪಡೆದಿರುವ ಕಿಶನ್ ಬಿಳಗಲಿ ಅವರು ತಮ್ಮದೇ ಆದ ಡ್ಯಾನ್ಸ್ ಸ್ಟುಡಿಯೋ ವನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೇ ಫಿಟ್ನೆಸ್ ಸೆಂಟರ್ ಅನ್ನು ಕೂಡಾ ಕಿಶನ್ ಹೊಂದಿದ್ದಾರೆ. 2018 ರ ಹಿಂದಿ ಕಿರುತೆರೆಯ ರಿಯಾಲಿಟಿ ಶೋ 'ಡ್ಯಾನ್ಸ್ ದಿವಾನಿ ಶೋ' ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಇವರು ಕಾಣಿಸಿಕೊಂಡಿದ್ದರು. ಮಾತ್ರವಲ್ಲದೇ ವರ್ಷದ ಆ ಶೋವಿನ ವಿಜೇತರಾಗಿಯೂ ಇವರು ಪ್ರಶಸ್ತಿ ಪಡೆದಿದ್ದರು.
ತದ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ತಕಧಿಮಿತಾ' ಎನ್ನುವ ಕಾರ್ಯಕ್ರಮದಲ್ಲಿಯೂ ಇವರು ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಪ್ರತಿ ಸಂಚಿಕೆಯಲ್ಲೂ ತಮ್ಮ ನಟನೆಯ ಮೂಲಕ ವೀಕ್ಷಕರ ಹಾಗೂ ತೀರ್ಪುಗಾರರ ಮನ ಸೆಳೆದಿದ್ದರು ಕಿಶನ್.
ಇನ್ನು ಹಿಂದಿ ಬಿಗ್ ಬಾಸ್ ಸೀಸನ್ 12 ರಲ್ಲಿ ನೃತ್ಯ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ ಕಿಶನ್ ಬಿಳಗಲಿ. ಇದರ ಜೊತೆಗೆ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 7 ಸೀಸನ್ ನಲ್ಲಿ 10 ನೇ ಸ್ಪರ್ಧಿಯಾಗಿ ಭಾಗವಹಿಸಿದ್ದರು. ತಮ್ಮ ನಡೆ, ನುಡಿಯ ಮೂಲಕ ವೀಕ್ಷಕರ ಮನ ಸೆಳೆದಿರುವ ಕಿಶನ್ 98 ದಿನಗಳ ಕಾಲ ದೊಡ್ಮನೆಯಲ್ಲಿದ್ದರು.


Click it and Unblock the Notifications











