ಮಗಳು ಸಿತಾರ ಜೊತೆ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಮಹೇಶ್ ಬಾಬು!
ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಬಹುಬೇಡಿಕೆಯ ಸ್ಟಾರ್ ನಟರಲ್ಲಿ ಒಬ್ಬರು. ಮಹೇಶ್ ಬಾಬು ಸಿನಿಮಾರಂಗದಲ್ಲಿ ಸೂಪರ್ ಸ್ಟಾರ್ ಅಂತ ಮಾತ್ರ ಗುರುತಿಸಿಕೊಂಡಿಲ್ಲ. ಬದಲಿಗೆ ತಾನೊಬ್ಬ ಪಕ್ಕಾ ಫ್ಯಾಮಿಲಿ ಮ್ಯಾನ್ ಎನ್ನುವುದನ್ನು ಕೂಡ ತೋರಿಸಿಕೊಟ್ಟಿದ್ದಾರೆ.
ಮಹೇಶ್ ಬಾಬು ಸದಾ ತಮ್ಮ ಕುಟುಂಬದ ಜೊತೆಗೆ ಕಾಲ ಕಳೆಯುತ್ತಾ ಇರುತ್ತಾರೆ. ಕುಟುಂಬದ ಜೊತೆಗೆ ಅವರು ಆಗಾಗ ಪ್ರವಾಸ ಕೈಗೊಳ್ಳುತ್ತಾ ಇರುತ್ತಾರೆ. ಮಕ್ಕಳು ಮತ್ತು ಪತ್ನಿಯ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಇದರಿಂದ ಮಹೇಶ್ ಬಾಬು ಮಕ್ಕಳಿಗೆ ದಿ ಬೆಸ್ಟ್ ಅಪ್ಪ ಎನ್ನುವುದನ್ನು ಸಾಬೀತು ಮಾಡುತ್ತಲೇ ಇರುತ್ತಾರೆ.
ಈಗ ಮಹೇಶ್ ಬಾಬು ಮತ್ತು ಕುಟುಂಬದ ಬಗ್ಗೆ ಮಾತನಾಡಲು ಕಾರಣ, ಮಹೇಶ್ ಬಾಬು ಮತ್ತು ಅವರ ಮಗಳು ಸಿತಾರ. ಜೀ ತೆಲುಗು ಡ್ಯಾನ್ಸಿಂಗ್ ರಿಯಾಲಿಟಿ ಕಾರ್ಯಕ್ರಮ ಒಂದರಲ್ಲಿ ನಟ ಮಹೇಶ್ ಬಾಬು ಮತ್ತು ಮಗಳು ಸಿತಾರ ಇಬ್ಬರೂ ಕಾಣಿಸಿಕೊಂಡಿದ್ದಾರೆ.

ಕಾರ್ಯಕ್ರಮಕ್ಕೆ ಇವರ ಎಂಟ್ರಿಯೇ ಮಸ್ತಾಗಿತ್ತು. ಮಗಳ ಕೈಹಿಡಿದೇ ಮಹೇಶ್ ಬಾಬು ವೇದಿಕೆ ಮೇಲೆ ಬಂದರು. ಇನ್ನು ಡಾನ್ಸ್ ಬಗ್ಗೆ ಮಾತನಾಡಿರುವುದು ಕೂಡ ಪ್ರೋಮೊದಲ್ಲಿ ಬಂದಿದೆ. ಸ್ಟೇಜ್ ಮೇಲೆ ಸಿತಾರ ಡಾನ್ಸ್ ಮಾಡಿದ್ದು, ಮಗಳ ಡಾನ್ಸ್ ಕಂಡು ಮಹೇಶ್ ಬಾಬು ಖುಷಿ ಪಟ್ಟಿದ್ದಾರೆ.
ಇನ್ನು ಈ ಕಾರ್ಯಕ್ರಮದಲ್ಲಿ ಉತ್ತಮ ಪ್ರದರ್ಶನ ನೀಡಿದ ಇಬ್ಬರು ಸ್ಪರ್ಧಿಗಳಿಗೆ, ಮಹೇಶ್ ಬಾಬು ತಮ್ಮ ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿದರು. ಈ ಪ್ರೋಮೊ ಎಲ್ಲೆಡೆ ವೈರಲ್ ಆಗುತ್ತಿದೆ. ಗಣೇಶ ಹಬ್ಬದ ಪ್ರಯುಕ್ತ ಕಾರ್ಯಕ್ರಮಕ್ಕೆ ಮಹೇಶ್ ಬಾಬು ಮತ್ತು ಮಗಳು ಸಿತಾರ ಅತಿಥಿಗಳಾಗಿ ಹೋಗಿದ್ದಾರೆ.

ಮತ್ತೊಂದೆಡೆ, ಮಹೇಶ್ ಬಾಬು ಶೀಘ್ರದಲ್ಲೇ 'ಎಸ್‌ಎಸ್‌ಎಂಬಿ 28' ಸಿನಿಮಾ ಸೆಟ್‌ಗೆ ಸೇರಲಿದ್ದಾರೆ, ಇದರಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ. ಮತ್ತು ಇದನ್ನು ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡುತ್ತಿದ್ದಾರೆ.


Click it and Unblock the Notifications











