ಡುಪ್ಲಿಕೇಟ್ ಅಪ್ಪನಾದ ಮಹೇಶ: ಅಂತರಪಟದಿಂದ ಭಾಗ್ಯಲಕ್ಷ್ಮೀಗೆ ಮಂಜು ಪಾವಗಡ!

By ಪ್ರಿಯಾ ದೊರೆ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಒಂದಕ್ಕೊಂದು ಧಾರಾವಾಹಿಗಳು ಬೆಸೆದುಕೊಳ್ಳುತ್ತಿವೆ. ಗೀತಾ ಧಾರಾವಾಹಿಯ ವಿಲನ್ ಸಿತಾರ ಈಗ ನಿನ್ನೆಯಷ್ಟೇ ಗಂಡ-ಹೆಂಡತಿ ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ.

ಗಂಡ ಹೆಂಡತಿ ಧಾರಾವಾಹಿಯಲ್ಲೂ ಸಿತಾರಾ ಪಾತ್ರದಲ್ಲೇ ಮುಂದುವರೆದಿದ್ದಾರೆ. ಇದರಲ್ಲಿ ಜಸ್ಟ್ ಗೆಸ್ಟ್ ರೋಲ್ ಇರಬೇಕು ಎಂದು ವೀಕ್ಷಕರು ಊಹಿಸಿದ್ದಾರೆ. ಹೀಗಿರುವಾಗಲೇ ಈಗ ಭಾಗ್ಯಲಕ್ಷ್ಮೀ ಧಾರಾವಾಹಿಯ ಜೊತೆಗೆ ಅಂತರಪಟ ಸೀರಿಯಲ್ ನ ಪಾತ್ರವೊಂದು ಎಂಟ್ರಿ ಕೊಟ್ಟಿದೆ. ಇದರಿಂದ ಎಲ್ಲರೂ ಖುಷಿಯಾಗಿದ್ದಾರೆ.

duplicate-father-for-tandav

ಒದ್ದಾಟದಲ್ಲಿ ಸಿಲುಕಿರುವ ತಾಂಡವ್

ಹೌದು.. ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಈಗ ತಾಂಡವ್‌ಗೆ ಅತ್ತ ಹೋದರೆ ಹುಲಿ, ಇತ್ತ ಬಂದರೆ ತೋಳ ಎಂಬಂತಾಗಿದೆ. ಮನೆಯಲ್ಲಿ ಭಾಗ್ಯ ಶಾಲೆಗೆ ಹೋಗುತ್ತಿದ್ದಾಳೆ. ಶಾಲೆಯಲ್ಲಿ ಭಾಗ್ಯ ತನ್ನ ಹಕ್ಕಿಗಾಗಿ ಹೋರಾಡುತ್ತಿದ್ದಾಳೆ. ಕುಸುಮಾ ಯಾರು ಏನೇ ಹೇಳಿದರೂ ನನಗೆ ನನ್ನ ಸೊಸೆಯೇ ಗ್ರೇಟ್ ಎನ್ನುತ್ತಿದ್ದಾಳೆ. ತಾಂಡವ್‌ಗೆ ಭಾಗ್ಯ ಓದುವುದು ಇಷ್ಟವಿಲ್ಲ. ಭಾಗ್ಯಳನ್ನು ತನ್ನ ಹೆಂಡತಿ ಎಂದು ಹೊರಗೆ ಗುರುತಿಸಿಕೊಳ್ಳುವುದಕ್ಕೂ ಇಷ್ಟವಿಲ್ಲ. ಹಾಗಾಗಿ ತಾಂಡವ್ ಹಲವು ಸಮಯದಿಂದ ಶ್ರೇಷ್ಠಾ ಜೊತೆಗೆ ರಿಲೇಷನ್ ಶಿಪ್‌ನಲ್ಲಿ ಇದ್ದಾನೆ. ಇದು ಭಾಗ್ಯಳಿಗೆ ಗೊತ್ತಾಗಿಲ್ಲ. ಆದರೆ, ಈಗ ಮನೆಯಲ್ಲಿ ತಾಂಡವ್ ಬಹಳ ಹಿಂಸೆಯಾಗುತ್ತಿದೆ.

ಡುಪ್ಲಿಕೇಟ್ ಅಪ್ಪನಾಗಿ ಬಂದ ಮಹೇಶ!

ಇತ್ತ ಶ್ರೇಷ್ಠಾ ತಾಂಡವ್‌ಗೆ ಭಯ ಪಡಿಸಿದ್ದಾಳೆ. ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದಾಳೆ. ಈಗಾಗಲೇ ಒಂದು ಬಾರಿ ಮದುವೆಯಾಗುವ ನಾಟಕವನ್ನು ತಾಂಡವ್ ಮಾಡಿದ್ದ. ಆದರೆ, ಶ್ರೇಷ್ಠಾ ಬಹಳ ಬುದ್ಧಿವಂತೆ ಆಗಿದ್ದು, ಈಗ ಏನೇ ಆದರೂ ಸರಿ ಮದುವೆಯಾಗಬೇಕು ಎಂದು ಕೂತಿದ್ದಾಳೆ. ಯಾಕೆಂದರೆ, ಶ್ರೇಷ್ಠಾ ತಂದೆ-ತಾಯಿ ಈಗಲೇ ಮಗಳ ಮದುವೆ ಮಾಡಲು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಶ್ರೇಷ್ಠಾ ನನ್ನ ತಂದೆ ತಾಯಿ ನಿನ್ನ ತಂದೆ ತಾಯಿಯನ್ನ ಇಂದು ಭೇಟಿ ಮಾಡುತ್ತಾರೆ. ಅದಕ್ಕೆ ಬೇಕಾದ ತಯಾರಿ ಎಲ್ಲವೂ ಆಗಿದೆ ಎಂದು ಹೇಳಿದ್ದಾಳೆ. ಆದರೆ ತಾಂಡವ್‌ಗೆ ಶ್ರೇಷ್ಠಾ ಮಾಡಲು ಹೊರಟಿರುವ ಕೆಲಸದಿಂದ ಮತ್ತೊಂದು ಅಪಾಯ ಎದುರಾಗುತ್ತದೆ ಎಂಬುದು ಗೊತ್ತಾಗಿದೆ. ಇದರಿಂದಾಗಿ ಶ್ರೇಷ್ಠಾ ತಂದೆ-ತಾಯಿ ಜೊತೆಗೆ ಮಾತನಾಡಲು ತಾಂಡವ್ ಡುಪ್ಲಿಕೇಟ್ ಅಪ್ಪನಾಗಿ ಮಹೇಶ ಬಂದಿದ್ದಾನೆ.

duplicate-father-for-tandav

ಅಂತರಪಟದಿಂದ ಭಾಗ್ಯಲಕ್ಷ್ಮೀಗೆ ಎಂಟ್ರಿ

ಅಂತರಪಟ ಧಾರಾವಾಹಿಯಲ್ಲಿ ಎರಡನೇ ಮದುವೆಯಾಗಿ ನಾಯಕಿ ಆರಾಧನಾಳಿಗೆ ಕಷ್ಟ ಕೊಡುತ್ತಿರುವ ಮಹೇಶ ಈಗ ಭಾಗ್ಯಲಕ್ಷ್ಮೀ ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾನೆ. ಪ್ರೋಮೋ ನೋಡಿಯೇ ಪ್ರೇಕ್ಷಕರು ಫುಲ್ ಖುಷಿಯಾಗಿದ್ದಾರೆ. ದುಡ್ಡಿನ ಪಿಶಾಚಿ ಮಹೇಶ ಈಗ ತಾಂಡವ್‌ಗೆ ಹೇಗೆಲ್ಲಾ ಕಾಟ ಕೊಡುತ್ತಾನೇ ಗೊತ್ತಿಲ್ಲ. ತಾಂಡವ್‌ಗೆ ಮಹೇಶನನ್ನು ಕಂಡರೆ ಸ್ವಲ್ಪವೂ ಇಷ್ಟ ಆಗುವುದಿಲ್ಲ. ಮಹೇಶನನ್ನು ತಾಂಡವ್ ಹೇಗೆ ಸಹಿಸಿಕೊಳ್ಳುತ್ತಾನೋ ಗೊತ್ತಿಲ್ಲ. ಅಷ್ಟೇ ಅಲ್ಲದೇ ಮಹೇಶ ಕೂಡ ತಾಂಡವ್ ಹಾಗೂ ಶ್ರೇಷ್ಠಾ ಬಾಳಲ್ಲಿ ಹೇಗೆಲ್ಲಾ ಆಟವಾಡುತ್ತಾನೆ. ಇವನಿಂದ ಭಾಗ್ಯಳ ಬದುಕಲ್ಲಿ ಬದಲಾವಣೆಯಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಮಹೇಶ ಪಾತ್ರಧಾರಿ ಮಂಜು ಪಾವಗಡ

ನಟ ಮಂಜು ಪಾವಗಡ ಮಹೇಶನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಮಜಾ ಭಾರತ ಕಾಮಿಡಿ ಶೋ ಕಾರ್ಯಕ್ರಮದಿಂದ ಪ್ರಸಿದ್ಧಿಯಾದವರೇ ಮಂಜು ಪಾವಗಡ. ಬಳಿಕ ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿಯಾಗಿ ಭಾಗವಹಿಸಿ, ವಿನ್ನರ್ ಪಟ್ಟವನ್ನು ಅಲಂಕರಿಸಿದ್ದರು.

ಬಿಗ್ ಬಾಸ್ ಬಳಿಕ ಕೆಲ ಶೋಗಳಲ್ಲಿ ಹೋಸ್ಟ್ ಆಗಿ ಮತ್ತು ದಾಸಪ್ಪ ಸೇರಿದಂತೆ ಕೆಲ ಸಿನಿಮಾಗಳಲ್ಲೂ ನಟಿಸಿದ್ದರು. ಇತ್ತೀಚೆಗಷ್ಟೇ ಅಂತರಪಟ ಧಾರಾವಾಹಿಯಲ್ಲಿ ನಾಯಕಿಯ ತಾಯಿಯ ಎರಡನೇ ಪತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದಾ ಕಾಮಿಡಿ ಮಾಡುತ್ತಿದ್ದ ಮಂಜು ಅವರು ಧಾರಾವಾಹಿಯಲ್ಲಿ ಡಿಫರೆಂಟ್ ಪಾತ್ರ ನಿರ್ವಹಿಸುತ್ತಿದ್ದು, ಅಭಿಮಾನಿಗಳಿಗೆ ಇಷ್ಟವಾಗಿದೆ.

More from Filmibeat

English summary
Antaramapata mahesha came for Bhagyalakshmi serial as tandav duplicate father.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X