15ವರ್ಷದ ದಾಂಪತ್ಯದಲ್ಲಿ ಬಿರುಕು, 5 ನಿಮಿಷದ ಹಿಂದೆ ವಿಚ್ಛೇದನ ;ಅಭಿನಂದನೆಗಳ ಮಹಾಪೂರ-ಎಚ್ಚರಿಕೆ ನೀಡಿದ ಖ್ಯಾತ ನಟಿ

ಕಾಲ ಎಷ್ಟೇ ಬದಲಾದರು ಇವತ್ತು ಕೂಡ ಅದೂ-ಇದೂ ಎಂದು ಮಾತನಾಡುವರ ಸಂಖ್ಯೆ ಕಡಿಮೆಯಾಗಿಲ್ಲ. ತಮಗೆ ಸಂಬಂಧ ಇಲ್ಲದ ವಿಚಾರದ ಕುರಿತು ಹಲವಾರು ಜನ ಇವತ್ತು ಕೂಡ ಮಾತನಾಡುತ್ತಲೇ ಇರುತ್ತಾರೆ. ಹೀಯಾಳಿಸುವುದು..ನಿಂದಿಸುವುದೇ..ಸಾಧನೆ ಎಂಬಂತೆ ಕಾಲೆಳೆಯುತ್ತಾರೆ. ಆಕಾರ..ರೂಪ..ಒನಪು..ಒಯ್ಯಾರ.. ಇಷ್ಟೇ ಅಲ್ಲದೇ ಖಾಸಗಿ ವಿಷಯವನ್ನು ಬಿಡದಂತೆ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಇನ್ನು.. ಸೆಲೆಬ್ರೆಟಿಗಳ ಪಾಡು ಹೇಳಲು ಅಸಾಧ್ಯ. ಕುಂತರು .. ನಿಂತರು ..

ಬದಲಾದ ಈ ಕಾಲದಲ್ಲಿ ಅನೇಕರ ಬಾಯಿಗೆ ಇವರು ಆಹಾರವಾಗುತ್ತಲೇ ಇರುತ್ತಾರೆ. ಟ್ರೋಲ್ ಹೆಸರಿನಲ್ಲಿ ನಿಂದನೆಗೆ ಗುರಿಯಾಗುತ್ತಲೇ ಇರುತ್ತಾರೆ. ಇಷ್ಟೇ ಅಲ್ಲ ಇವರ ಸಾಮಾಜಿಕ ಜಾಲತಾಣದ ಮೇಲೆ ಸಮಾಜದ ಒಂದು ವರ್ಗ ಯಾವತ್ತು ಒಂದು ಕಣ್ಣಿಟ್ಟಿರುತ್ತೆ. ಯಾಕೆಂದರೆ, ಸಿನಿಮಾ ಮಂದಿಗೆ ಮದ್ವೆ.. ಪ್ರೀತಿ.. ಬಟ್ಟೆ ಬದಲಿಸಿದಷ್ಟೇ ಸುಲಭ ಸಾಧ್ಯ.

mahhi-vij-slams-divorce-rumours-with-jay-bhanushali-false-narratives-legal-action-looms

ಹೀಗಾಗಿಯೇ ಯಾವ ಕ್ಷಣದಲ್ಲಾದರೂ ಡಿವೋರ್ಸ್ ಸುದ್ದಿ ಹೊರ ಬರಬಹುದು ಎಂದು ಕಾಯುವ ಅನೇಕರು ಸೆಲೆಬ್ರೀಟಿಗಳ ಕುರಿತು ವಿಚ್ಛೇದನದ ವದಂತಿಯನ್ನೂ ಹಬ್ಬಿಸುತ್ತಾರೆ. ಮತ್ತೂ ಕೆಲವರು ಸೆಲೆಬ್ರೇಟಿಗಳ ಹೆಸರಿನಲ್ಲಿ ನಕಲಿ ಖಾತೆ ತೆರೆದು ಮಜಾ ತೆಗೆದುಕೊಳ್ಳುತ್ತಾರೆ. ವ್ಯೆಯಕ್ತಿಕ ಬದುಕಿನಲ್ಲಿ ನೋವನ್ನು ಈ ತಾರೆಯರು ಅನುಭವಿಸುತ್ತಿರುವಾಗ ಇಲ್ಲ ಸಲ್ಲದ ಬರಹಗಳನ್ನು ಹಂಚಿಕೊಳ್ಳುತ್ತಾರೆ.ಮಹಿ ವಿಜ್ ವಿಚಾರದಲ್ಲಿ ಕೂಡ ಸದ್ಯ ಇದೇ ಆಗಿದೆ.

ಹೌದು, ಮಹಿ ವಿಜ್.. ಹಿಂದಿ ಕಿರುತೆರೆಯ ಚೆಲುವೆ. ''ಲಾಗಿ ತುಜಸೇ ಲಗನ್''.. ''ಬಾಲಿಕಾ ವಧು''.. ಧಾರಾವಾಹಿಗಳ ಮೂಲಕ ಜನ ಮನ ಗೆದ್ದ ಮಹಿ ವಿಜ್, ''ನಚ್ ಬಲಿಯೇ ಸೀಸನ್ 5''ರ ವಿನ್ನರ್ ಕೂಡ ಹೌದು. ''ಜಲಕ್ ದಿಖಲಾ ಜಾ''.. ''ಖತ್ರೋನ್ ಕೆ ಖಿಲಾಡಿ'' ಅಂತಹ ರಿಯಾಲಿಟಿ ಶೋನಲ್ಲಿ ಕೂಡ ಇವರು ಕಾಣಿಸಿಕೊಂಡಿದ್ದಾರೆ.

ಇಂಥಾ ಮಹಿ ವಿಜ್ ತಮಗಿಂತ ಮೂರು ವರ್ಷ ಚಿಕ್ಕವರಾದ ಹಿಂದಿ ಕಿರುತೆರೆಯ ಖ್ಯಾತ ನಿರೂಪಕ ಜೈ ಭಾನುಶಾಲಿ ಅವರ ಜೊತೆ 14-15 ವರ್ಷದ ಹಿಂದೆ ಮದುವೆಯಾಗಿದ್ದರು. ತಮ್ಮ ಮನೆ ಕೆಲಸದವರ ಇಬ್ಬರು ಮಕ್ಕಳನ್ನು 2017ರಲ್ಲಿ ದತ್ತು ಪಡೆದಿದ್ದರು. ಆ ಮಕ್ಕಳಿಗೆ ರಾಜ್ ವೀರ್ ಮತ್ತು ಖುಷಿ ಎಂದು ನಾಮಕರಣ ಮಾಡಿದರು. ತಮ್ಮ ಮಕ್ಕಳಷ್ಟೇ ಪ್ರೀತಿಯನ್ನು ನೀಡಿದರು. ಇಷ್ಟೇ ಅಲ್ಲ ಐವಿಎಫ್ ಮೂಲಕ ಪ್ರಯತ್ನ 2019ರಲ್ಲಿ ಮನೆಗೆ ಮಗಳನ್ನು ಬರ ಮಾಡಿಕೊಂಡರು. ಮುದ್ದಾದ ಮಗಳಿಗೆ ತಾರಾ ಎಂದು ಹೆಸರಿಟ್ಟರು.

mahhi-vij-slams-divorce-rumours-with-jay-bhanushali-false-narratives-legal-action-looms

ಆದರೆ ಈಗ ಮದುವೆಯಾಗಿ 15 ವರ್ಷದ ನಂತರ ಮಹಿ ವಿಜ್ ಮತ್ತು ಜೈ ಭಾನುಶಾಲಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ''ಹಿಂದೂಸ್ತಾನ್ ಟೈಮ್ಸ್'' ವರದಿ ಮಾಡಿದೆ. ಇವರ ಡಿವೋರ್ಸ್‌ ಪೇಪರ್‌ ಮೇಲೆ ಅಧಿಕೃತ ಮುದ್ರೆ ಕೂಡ ಬಿದ್ದಿದೆ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಈ ವರದಿಯ ಸತ್ಯಾಸತ್ಯತೆ ಮಹಿ ವಿಜ್ ಮತ್ತು ಜೈ ಭಾನುಶಾಲಿ ಅವರಿಗೆ ಗೊತ್ತಾದರೂ ಸದ್ಯ ಮಹಿ ವಿಜ್ ಅವರ ಈ ವ್ಯೆಯಕ್ತಿಕ ಜೀವನ ಅನೇಕರ ಬಾಯಿಗೆ ಆಹಾರವಾಗಿದೆ. ಹೀಗಾಗಿಯೇ ಮಹಿ ವಿಜ್ ಅವರ ನಕಲಿ ಖಾತೆಗಳನ್ನು ಸೃಷ್ಟಿಸಿ ಹಲವರು ಹಿಂದೂಸ್ತಾನ್ ಟೈಮ್ಸ್‌ನವಲ್ಲಿ ಬಂದ ವರದಿಯ ಯಥಾವತ್ತು ನಕಲು ಮಾಡಿ ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ಕೆಲವರು ಈಗ 5 ನಿಮಿಷದ ಹಿಂದೆ ಅಧಿಕೃತವಾಗಿ ನಾನು ವಿಚ್ಛೇದನ ಪಡೆದಿದ್ದೇನೆ. ಈ ಹಿನ್ನೆಲೆ ಹಲವಾರು ಜನ ನನಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ವಿಚ್ಛೇದನದ ಖುಷಿಯ ವಿಚಾರವನ್ನು ಪಾರ್ಟಿ ಮೂಲಕ ಆಚರಿಸಬೇಕೆಂದು ಹೇಳುತ್ತಿದ್ಧಾರೆ.ಆದರೆ.. ನನ್ನ ಪ್ರಕಾರ ವಿಚ್ಛೇದನ ಯಾವತ್ತು ನೋವು ಕೊಡುವ ವಿಚಾರ. ಮದುವೆ ಎಂಬ ಪವಿತ್ರ ಸಂಬಂಧಕ್ಕೆ ಕಳಂಕ ತರುವ ವಿಚಾರ ಎಂದು ಮಹಿ ವಿಜ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಂತೆ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ.

mahhi-vij-slams-divorce-rumours-with-jay-bhanushali-false-narratives-legal-action-looms

ತನ್ನ ವಿರುದ್ಧ ನಡೆಯುತ್ತಿರುವ ಈ ಷಡ್ಯಂತ್ರ, ಪಿತೂರಿ, ಮಹಿ ವಿಜ್ ಅವರ ಗಮನಕ್ಕೆ ಸದ್ಯ ಬಂದಿದ್ದು ಮಹಿ ವಿಜ್ ಕಿಡಿ ಕಾರಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಬೇಡಿ, ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ. ತನ್ನ ವಿರುದ್ಧ ನಡೆಯುತ್ತಿರುವ ಈ ಷಡ್ಯಂತ್ರ, ಪಿತೂರಿ, ಮಹಿ ವಿಜ್ ಅವರ ಗಮನಕ್ಕೆ ಸದ್ಯ ಬಂದಿದ್ದು ಮಹಿ ವಿಜ್ ಕಿಡಿ ಕಾರಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಬೇಡಿ, ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸದ್ಯ ಮಹಿ ವಿಜ್ ಮಾಡಿರುವ ಈ ಕಾಮೆಂಟ್ ಸೆಲೆಬ್ರೇಟಿಗಳ ಖಾಸಗಿ ಬದುಕು, ಸುಳ್ಳು ಸುದ್ದಿ, ಮಾನಸಿಕ ಹಿಂಸೆ ಮತ್ತು ತೇಜೋವಧೆಯ ಕುರಿತು ಚರ್ಚೆಗೆ ನಾಂದಿಯನ್ನು ಹಾಡಿದೆ. ತಮ್ಮ ಕುರಿತು ಇಲ್ಲ ಸಲ್ಲದ ಮಾತುಗಳನ್ನಾಡುತ್ತಿರುವ ಹಲವರ ಬಾಯಿಯನ್ನು ಮಹಿ ವಿಜ್ ಹೇಗೆ ಮುಚ್ಚಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
She's fighting back! Mahhi Vij REACTS fiercely to the ongoing divorce speculation with Jay Bhanushali, announcing she will take legal action to silence the lies.
Read more about: divorce rumours tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X