»   » 'ಬಿಗ್ ಬಾಸ್' ಬಗ್ಗೆ ಭಯಾನಕ ಸುದ್ದಿ ಬಿಚ್ಚಿಟ್ಟ ಮಹಿಳಾ ಸ್ಪರ್ಧಿ

'ಬಿಗ್ ಬಾಸ್' ಬಗ್ಗೆ ಭಯಾನಕ ಸುದ್ದಿ ಬಿಚ್ಚಿಟ್ಟ ಮಹಿಳಾ ಸ್ಪರ್ಧಿ

Posted By:
Subscribe to Filmibeat Kannada

'ಬಿಗ್ ಬಾಸ್' ರಿಯಾಲಿಟಿ ಶೋ ಬಗ್ಗೆ ಆರೋಪಗಳು, ಟೀಕೆಗಳು ನಿನ್ನೆ-ಮೊನ್ನೆಯದಲ್ಲ. ಈ ಕಾರ್ಯಕ್ರಮ ಆರಂಭವಾದಗನಿಂದಲೂ ಕೆಟ್ಟ ಅಭಿಪ್ರಾಯ ಕೆಲವರಲ್ಲಿ ಇದೆ. ಆದ್ರೆ, ಕಣ್ಮುಂದೆ ಯಾವುದನ್ನ ನೋಡದೆ ನಂಬುವಂತಿಲ್ಲ ಎಂಬ ಕಾರಣಕ್ಕೆ ಈ ರಿಯಾಲಿಟಿ ಶೋವನ್ನ ಜನರು ಒಪ್ಪಿಕೊಂಡಿದ್ದಾರೆ.

ಸದ್ಯ, 'ಬಿಗ್ ಬಾಸ್' ಹಿಂದಿ ಮತ್ತು 'ಬಿಗ್ ಬಾಸ್' ಕನ್ನಡ ಕಾರ್ಯಕ್ರಮಗಳು ಪ್ರಸಾರವಾಗುತ್ತಿದೆ. ಹೀಗಿರುವಾಗ, ಹಿಂದಿ 'ಬಿಗ್ ಬಾಸ್' ಸ್ಪರ್ಧಿಯೊಬ್ಬರು ಬಿಗ್ ಬಾಸ್ ಶೋ ಬಗ್ಗೆ ಭಯಾನಕ ಸುದ್ದಿಯನ್ನ ಬಹಿರಂಗಪಡಿಸಿದ್ದಾರೆ.

ಈ ಆರೋಪವನ್ನ ಕೇಳಿದ ಪ್ರೇಕ್ಷಕರು ಈ ಕಾರ್ಯಕ್ರಮವನ್ನ ಈಗ ಅನುಮಾನದಿಂದ ನೋಡವಂತಾಗಿದೆ. ಅಷ್ಟಕ್ಕೂ, ಬಿಗ್ ಬಾಸ್ ಬಗ್ಗೆ ಸ್ಪರ್ಧಿ ಆರೋಪ ಮಾಡಿರುವ ಸಂಗತಿಯೇನು? ಎಂಬುದು ತಿಳಿಯಲು ಮುಂದೆ ಓದಿ.....

ಬಿಗ್ ಮನೆಗೆ 'ಮಧ್ಯಪಾನ' ರವಾನೆ

ಬಿಗ್ ಬಾಸ್ ಮನೆಯೊಳಗೆ ಮಧ್ಯಪಾನವನ್ನ ರವಾನಿಸಲಾಗುತ್ತೆ ಎಂಬ ಸ್ಪೋಟಕ ಸುದ್ದಿಯನ್ನ ಬಿಗ್ ಬಾಸ್ ಸ್ಪರ್ಧಿ ಮಹಿಮಾ ಸಿಂಗ್ ಬಿಚ್ಚಿಟ್ಟಿದ್ದಾರೆ.

'ಬಿಗ್ ಬಾಸ್' ಮನೆಯಲ್ಲಿ ಇರಲು ಯೋಗ್ಯತೆ ಇಲ್ಲದವರು ಯಾರು.?

ಟಿ.ಆರ್.ಪಿ ಹೆಚ್ಚಿಸಲು ಸೂಚನೆ

''ಮನೆಯಲ್ಲಿರುವ ಸ್ಪರ್ಧಿಗಳಿಗೆ ಮಧ್ಯಪಾನ ಸೇವಿಸಲು ಹೇಳಿ, ಜಗಳ ಮಾಡಿಕೊಳ್ಳುವಂತೆ ಬಿಗ್ ಬಾಸ್ ಆಯೋಜಕರು ಸೂಚಿಸುತ್ತಾರೆ. ಟಿ.ಆರ್.ಪಿಗಾಗಿ ಈ ರೀತಿ ಮಾಡಿ ಎನ್ನುತ್ತಾರೆ ಎಂಬ ಆರೋಪವನ್ನ ಮಹಿಮಾ ಮಾಡಿದ್ದಾರೆ. ಮನೆಯ ಸದಸ್ಯರು ಏನೇ ಮಾಡಿದರು, ಅದಕ್ಕೆ ಮಧ್ಯಪಾನವೇ ಕಾರಣ''ವೆಂದು ಮಹಿಮಾ ಇಂಗ್ಲೀಷ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಶ್ರುತಿ ಪ್ರಕಾಶ್ ಗೆ ಲವ್ ಪ್ರಪೋಸ್ ಮಾಡಿದ ಚಂದನ್ ಶೆಟ್ಟಿ.!

ಈ ಬಗ್ಗೆ ಒಪ್ಪಂದವಾಗಿರುತ್ತೆ.!

''ಬಿಗ್ ಬಾಸ್ ಸ್ಪರ್ಧಿಗಳು ಯಾರೂ ಈ ಬಗ್ಗೆ ಮಾತನಾಡುವುದಿಲ್ಲ. ಯಾಕಂದ್ರೆ, ಈ ಬಗ್ಗೆ ಒಪ್ಪಂದವಾಗಿರುತ್ತೆ. ಒಂದು ಪಕ್ಷ ಇಂತಹ ವಿಷ್ಯಗಳನ್ನ ಬಹಿರಂಗಪಡಿಸಿದ್ದಲ್ಲಿ, ದೊಡ್ಡ ಮೊತ್ತವನ್ನ ದಂಡವಾಗಿ ಕಟ್ಟಬೇಕಾಗುತ್ತೆ ಎಂಬ ಆತಂಕ'' ಎಂದು ಮಹಿಮಾ ಮಾತನಾಡಿದ್ದಾರೆ.

'ಬಿಗ್' ಮನೆಗೆ ಕಾಲಿಟ್ಟ 'ಮಸ್ತ್ ಮಸ್ತ್ ಹುಡುಗಿ' ವೈಷ್ಣವಿ ಯಾರು.?

ಫೋಟೋ ಲೀಕ್ ಆಗಿದೆ

ಅಂದ್ಹಾಗೆ, ಮಹಿಮಾ ಸಿಂಗ್ ಭೋಜ್ ಪುರಿ ನಟಿ. ಈಕೆ ಅಭಿನಯಿಸುತ್ತಿರುವ ಹೊಸ ಚಿತ್ರದ ಫೋಟೋವೊಂದು ಲೀಕ್ ಆಗಿದೆ. ವೈರಲ್ ಆಗಿರುವ ಈ ಫೋಟೋದಲ್ಲಿ ನಟಿ ಸಂಪೂರ್ಣ ಬೆತ್ತಲಾಗಿದ್ದಾಳೆ. ಈ ದೃಶ್ಯವನ್ನು ಕತ್ತರಿಸುವಂತೆ ಸೆನ್ಸಾರ್ ಬೋರ್ಡ್ ಹೇಳಿತ್ತು. ಹೀಗಿದ್ದರೂ ಈ ದೃಶ್ಯ ಲೀಕ್ ಆಗಿದೆ. ಹೀಗಾಗಿ, ಈ ಫೋಟೋ ವಿಚಾರದಲ್ಲಿ ನಟಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಹೀಗಿರುವಾಗ, ಬಿಗ್ ಬಾಸ್ ಬಗ್ಗೆ ಇಂತಹ ಭಯಾನಕ ಸಂಗತಿ ಬಿಚ್ಚಿಟ್ಟು ಮತ್ತಷ್ಟು ವಿವಾದವನ್ನ ಎಳೆದುಕೊಂಡಿದ್ದಾರೆ.

ಹೊಸ ಸ್ಪರ್ಧಿ ವೈಷ್ಣವಿ ವಯಸ್ಸು ಎಷ್ಟು.? ಈಕೆ ನಿವೇದಿತಾಗಿಂತ ಚಿಕ್ಕವಳು.!

English summary
Mahima Singh Puri, who claims to know some of the Bigg Boss 11 contestants, said that most of them remain under the influence of alcohol inside the house.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada